ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ : ಯಲ್ಲಾಲಿಂಗನನ್ನು ಕೊಂದು ಹಳಿ ಮೇಲೆ ಎಸೆಯಲಾಗಿತ್ತು

|
Google Oneindia Kannada News

ಕೊಪ್ಪಳ, ಆಗಸ್ಟ್ 21 : ಆಡಳಿತ ಮತ್ತು ಪ್ರತಿಪಕ್ಷ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹನುಮೇಶ ನಾಯಕ ಮತ್ತು ಇತರ ಆರೋಪಿಗಳು ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಸಿಐಡಿ ಚಾರ್ಜ್ ಶೀಟ್‌ನಲ್ಲಿ ಹೇಳಿದೆ.

ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪಿ ಹುನುಮೇಶ ನಾಯಕ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲಿಗರಾಗಿದ್ದು, ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸಚಿವರು ಪ್ರಯತ್ನ ನಡೆಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು. ಸರಣಿ ಪ್ರತಿಭಟನೆಗಳನ್ನು ನಡೆಸಿತ್ತು. [ಯಲ್ಲಾಲಿಂಗ ಕೊಲೆ ಬಗ್ಗೆ ಸಿಐಡಿ ತನಿಖೆ]

koppala

ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಹನುಮೇಶ ನಾಯಕ, ಮಹಾಂತೇಶ ನಾಯಕ, ಬಾಳನ ಗೌಡ, ಪರುಶರಾಮ, ನಂದಕುಮಾರ್, ಯಮನೂರಪ್ಪ, ದುರ್ಗಪ್ಪ, ಮನೋಜ್ ಪಾಟೀಲ್ ಸೇರಿದಂತೆ ಹಲವರನ್ನು ಬಂಧಿಸಿತ್ತು. [ಸಿಐಡಿಯಿಂದ ಹನುಮೇಶ ನಾಯಕ ಬಂಧನ]

ಜಾರ್ಜ್ ಶೀಟ್‌ನಲ್ಲೇನಿದೆ? : 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನನ್ನು ಕೊಲೆ ಮಾಡಿ ಗೂಡ್ಸ್ ರೈಲಿನ ಕೆಳಗೆ ಮೃತದೇಹವನ್ನು ಹಾಕಲಾಗಿದೆ. ರೈಲು ಹರಿದು ಆತನ ದೇಹ ತುಂಡಾಗಿದೆ ಎಂದು ಎಲ್ಲಾ ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಚಾರ್ಜ್‌ ಶೀಟ್‌ನಲ್ಲಿ ಹೇಳಿದೆ.

ಯಲ್ಲಾಲಿಂಗನ ಕೊಲೆ ನಡೆದಿದ್ದು ಏಕೆ? : ಗಂಗಾವತಿ ತಾಲೂಕಿನ ಕನಾಕಾಪುರದ ನಿವಾಸಿಯಾಗಿದ್ದ ಯಲ್ಲಾಲಿಂಗ ಸ್ಥಳೀಯ ಸುದ್ದಿವಾಹಿನಿಯನ್ನು ಗ್ರಾಮಕ್ಕೆ ಕರೆಸಿ ಚರಂಡಿ, ರಸ್ತೆ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾತನಾಡಿದ್ದ. ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿಗಳ ಬಗ್ಗೆ ವಿವರಗಳನ್ನು ಕೇಳಿದ್ದ.

ಆಗ ಆರೋಪಿಗಳು ಯಲ್ಲಾಲಿಂಗನ ಮನೆಗೆ ಹೋಗಿ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಹನುಮೇಶ ನಾಯಕ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದ. ಅದರಂತೆ ಜ.11ರಂದು ರಾತ್ರಿ 7.30ರ ಸುಮಾರಿಗೆ ಯಲ್ಲಾಲಿಂಗನನ್ನು ಕೊಲೆ ಮಾಡಲಾಗಿತ್ತು.

English summary
Criminal Investigation Department (CID)filed a charge-sheet in the murder case of the student Yellalinga in Koppala district. Yellalinga was brutally murdered in January 2015, because he exposed the scam in gram panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X