ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು ಮೂಕಾಂಬಿಕೆ ದೇವಿಯ ಒಡವೆ ಕದ್ದ ಐವರ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ,ಮಾರ್ಚ್,02: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಆರೋಪಿಗಳನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜೊತೆಗೆ 8 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಶಿವರಾಮ್ ಮಡಿವಾಳ, ಗಂಗಾಧರ ಹೆಗ್ಡೆ, ಪ್ರಸಾದ್ ಆಚಾರ್ಯ, ನಾಗರಾಜ್ ಶೇರಿಗಾರ್, ಗಣೇಶ್ ಪೂಜಾರಿ ಬಂಧಿತ ಆರೋಪಿಗಳು. ಮುಖ್ಯ ಆರೋಪಿಯಾದ ಶಿವರಾಮ್ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ದೇವಾಲಯದಿಂದ ಕದ್ದು ಮನೆಯಲಿಟ್ಟಿದ್ದನು. ಅದನ್ನು ಈತನ ಪತ್ನಿಯೇ ದೇವಾಲಯಕ್ಕೆ ಒಪ್ಪಿಸಿದ್ದಳು.[ಕಳ್ಳನ ಹೆಂಡತಿಯ ಪ್ರಾಮಾಣಿಕತೆ. ಅಪರಾಧ ವರದಿಯಲ್ಲಿ ಒಂದು ನೀತಿ ಕತೆ]

Kollur temple jewellery stolen case, police arrested 5 accusers in Udupi

ಕೊಲ್ಲೂರು ದೇವಾಲಯದಲ್ಲಿ ನಡೆದ ಕಳ್ಳತನ ವಿಚಾರವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಎಸ್ ಪಿ ಅಣ್ಣಾಮಲೈ ಅವರು, ' ಕೊಲ್ಲೂರು ದೇವಸ್ಥಾನದ 10 ಮಂದಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಅವರನ್ನು ಆದಷ್ಟು ಬೇಗನೇ ಪತ್ತೆ ಹಚ್ಚಲಾಗುವುದು' ಎಂದು ತಿಳಿಸಿದರು.[ಕೊಲ್ಲೂರು: ಪ್ರಾಮಾಣಿಕತೆ ಮೆರೆದ ಪತ್ನಿಯ ಗಂಡ ಪೊಲೀಸರ ಅತಿಥಿ]

ಕೊಲ್ಲೂರು ದೇವಸ್ಥಾನದಲ್ಲಿ ಸುಮಾರು 3ಕೆಜಿಗೂ ಹೆಚ್ಚು ಚಿನ್ನ ಕಳ್ಳತನವಾಗಿದೆ. ಇನ್ನು 415 ಗ್ರಾಂನಷ್ಟು ರಿಕವರಿ ಬಾಕಿಯಿದೆ. ಈ ಎಲ್ಲಾ ಒಡವೆಗಳು ಮೂಕಾಂಬಿಕೆ ದೇವಿಗೆ ಉಡುಗೊರೆಯಾಗಿ ಬಂದಿರುವ ಆಭರಣಗಳು ಎಂದು ತಿಳಿದು ಬಂದಿದೆ ಎಂದು ಒಡವೆಗಳ ಬಗ್ಗೆ ಸ್ಪಷ್ಟನೆ ನೀಡಿದರು.[ಇವರು ಹಗಲಿನಲ್ಲಿ ಸೆಲ್ಸ್ ಮನ್, ರಾತ್ರಿ ದರೋಡೆಕೋರರು]

ಕಳ್ಳತನ ಘಟನೆಯ ಸಂಕ್ಷಿಪ್ತ ವಿವರ:

ದೇವಸ್ಥಾನದ ಸೇವಾ ಟಿಕೆಟ್ ಕೌಂಟರ್ ನಲ್ಲಿ ಕೆಲಸಮಾಡುತ್ತಿದ್ದ ಶಿವರಾಮ್ ಮಡಿವಾಳ ಎಂಬಾತ ಕೊಲ್ಲೂರು ಮೂಕಾಂಬಿಕೆ ದೇವಿಯ ಆಭರಣಗಳನ್ನು ಕದ್ದು ಮನೆಯಲ್ಲಿಟ್ಟು ಪರಾರಿಯಾಗಿದ್ದನು. ಈ ವಿಚಾರ ಶಿವರಾಮ್ ನ ಹೆಂಡತಿ ಕದ್ದ ಒಡವೆಗಳನ್ನು ಫೆಬ್ರವರಿ 24ರಂದು ದೇವಾಲಯಕ್ಕೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಳು.[ಮನೆಯಲ್ಲೇ ಜೂಜಾಡು, ವಿಡಿಯೋ ಗೇಮ್ ಗೂ ಹನ ಕಟ್ಟಿ ನೋಡು!]

English summary
Kollur: Udupi SP Annamalai and his team have arrested 5 accused Shivaram Madival, Gangadara Hegde, Prasad Acharya, Nagaraj Sherigar, Ganesh Poojary on Tuesday, March 01st, in Udupi. Shivaram Madivala and others stealing jewellery worth Rs 25lacs at Kollur Mookambika Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X