ಸೇಡಿಗೆ ಸೇಡು ಬಿಜೆಪಿಯಿಂದ ಪಾದಯಾತ್ರೆಗೆ ಸಿದ್ಧತೆ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಡಗು, ಜುಲೈ 13 : ಅವತ್ತು ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಮಯ ಬಿಜೆಪಿಗೆ ಇದೀಗ ಬಂದಿದೆ.

ಏಟಿಗೆ ಎದಿರೇಟು ಎಂಬಂತೆ ಬಿಜೆಪಿ ಕೊಡಗಿನಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಸಕರ ಜತೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. [ರೆಡ್ಡಿಗಳ ಸವಾಲಿಗೆ ಸಿದ್ದ : ಸಿದ್ದರಾಮಯ್ಯ]

bjp

ಈಗಾಗಲೇ ಕೊಡಗು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಕಾರಣಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನವಿದೆ. ಇದನ್ನು ಬಳಸಿಕೊಳ್ಳಲು ಯತ್ನಿಸಿರುವ ಬಿಜೆಪಿ ಅದನ್ನು ಮುಂದಿನ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸಲು ಮುಂದಾಗಿದೆ. [ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು]

ಕೊಡಗಿನಿಂದ ಪಾದಯಾತ್ರೆ ಆರಂಭಿಸಿದ್ದೇ ಆದರೆ ಅದಕ್ಕೆ ಅಭೂತಪೂರ್ವ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಪಾದಯಾತ್ರೆಯನ್ನು ಕೊಡಗಿನಿಂದ ಆರಂಭಿಸಿ ಮೈಸೂರು, ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಬರಬೇಕೋ ಅಥವಾ ಮಂಗಳೂರಿಗೆ ಹೋಗಿ ಆ ಮೂಲಕ ಬೆಂಗಳೂರಿಗೆ ಬರಬೇಕೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. [ಮೈಸೂರಲ್ಲಿ ಎಗ್ಗಿಲ್ಲದೆ ಸಾಗಿರುವ ಮರಳು ದಂಧೆ]

420 ಕಿ.ಮೀ. ಪಾದಯಾತ್ರೆ ನಡೆಸಿ ಬಳ್ಳಾರಿ ತಲುಪಿದ್ದ ಸಿದ್ದರಾಮಯ್ಯ ಅವರು 2013ರ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲರಾಗಿದ್ದರು. ಇದೀಗ ಬಿಜೆಪಿ ಅದನ್ನೇ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಈಗಾಗಲೇ ಬಯಲಾಗಿದ್ದು ಅಧಿಕಾರಿಗಳ ಆತ್ಮವಿಶ್ವಾಸ ಕುಂದಿಸುವ ಕೆಲಸ ನಡೆಯುತ್ತಿದೆ ಎಂಬುದು ಜಗಜ್ಜಹೀರಾಗಿದೆ. [ಕೆಆರ್ ಪೇಟೆ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಗಿಲ್ಲ ಅಂಕುಶ]

ಇತ್ತೀಚೆಗೆ ಪೊಲೀಸರೇ ಬೀದಿಗೆ ಇಳಿಯುವಂತಹ ಸ್ಥಿತಿ ಬಂದಿದ್ದು, ಅಧಿಕಾರಿಗಳು, ರೈತರು ನೇಣಿಗೆ ಶರಣಾಗುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಯಡಿಯೂರಪ್ಪ ಅವರು ಪಾದಯಾತ್ರೆಗೆ ಮುಂದಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

English summary
The Karnataka BJP may take out a padayatra from Kodagu to Bengaluru to educate people about failure of Chief Minister Siddaramaiah government.
Please Wait while comments are loading...