ಕೊಡಗಿನ ಮಂಜೇಶ್ ಮಂದಣ್ಣನಂಥ ಗುರಿಕಾರ ಮತ್ತೊಬ್ಬನಿಲ್ಲ

By: ಬಿ.ಎಂ ಲವಕುಮಾರ್, ಮೈಸೂರು
Subscribe to Oneindia Kannada

ಮೈಸೂರು, ಜನವರಿ,07: ಕೊಡಗಿನ ಜನರಿಗೂ, ಕೋವಿಗೂ ಅವಿನಾಭಾವ ಸಂಬಂಧ. ಪರಂಪರಾಗತ ನಂಟು, 'ಆಡು ಮುಟ್ಟದ ಸೊಪ್ಪಿಲ್ಲ, ಇಲ್ಲಿ ಕೋವಿ ಹಿಡಿಯದ ಕೈಗಳೇ ಕೊಡಗಿನಲ್ಲಿ ಇಲ್ಲ' ಎಂದರೆ ತಪ್ಪಾಗಲಾರದು. ವೀರತೆಯ ಪ್ರದರ್ಶನದಲ್ಲಿ ಅಗ್ರಪಂಕ್ತಿಯಲ್ಲಿ ಇರುವವರೇ ಕೊಡಗಿನವರು.

ಈ ವಿವರ ಯಾಕೆ ಅಂತಾ ನೋಡ್ತಿದ್ದೀರಾ? ವಿರಾಜಪೇಟೆ ಬಳಿಯ ಬೆಳ್ಳುಮಾಡು ಗ್ರಾಮದ ಎನ್.ಪಿ.ಮಂಜೇಶ್ ಮಂದಣ್ಣ ಅವರು 59ನೇ ರಾಷ್ಟ್ರೀಯ ರೈಫಲ್ ಶೂಟಿಂಗ್ ನಲ್ಲಿ 598.3 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಲು ಅನುಕೂಲ ಮಾಡಿಕೊಟ್ಟಿರುವುದೇ ಅವರ ಮನೆಯಿಂದ ಬಳುವಳಿಯಾಗಿ ಬಂದ ಕೋವಿ ಅಭ್ಯಾಸ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]

Kodagu Manjesh Mandanna is the best rifle shooter

ದೆಹಲಿಯಲ್ಲಿ ಇತ್ತೀಚಿಗೆ ಜರುಗಿದ ರಾಷ್ಟ್ರೀಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಜೇಶ್ ಮಂದಣ್ಣ, ಅತ್ಯುತ್ತಮ ಗುರಿಯೊಂದಿಗೆ ಮುಂದಿನ 3 ವರ್ಷ 9 ತಿಂಗಳವರೆಗೂ ರಾಷ್ಟ್ರೀಯ ರೈಫಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ಕೋವಿ ಅಭ್ಯಾಸವೇ ಇವರ ಕೈ ಹಿಡಿದ ನಡೆಸಿದೆ.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ಬೆಸೆಯುವ 3ಡಿ ಕಾಸ್ಟಿಂಗ್]

'ರಿನೋವಡ್ ಶಾಟ್' ಎಂಬ ಗೌರವಕ್ಕೆ ಪಾತ್ರವಾಗಿರುವ ಮಂದಣ್ಣನವರಿಗೆ ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ 8 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕ ಗಳಿಸಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ನವೀನಾ ವಿಟ್ಲ ದಂಪತಿ ಪುತ್ರನಾಗಿರುವ ಮಂಜೇಶ್ ಮಂದಣ್ಣ, ಪ್ರಸ್ತುತ ಮೈಸೂರಿನ ಜೆಸಿಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.[ಕಿತ್ತಳೆ ನಾಡು ಕೊಡಗಿನಲ್ಲಿ ಹಳೆ ಸುಂದರಿಯರದ್ದೇ ದರ್ಬಾರ್]

ವಿದ್ಯಾಭ್ಯಾಸದ ಜೊತೆಗೆ ರೈಫಲ್ ಶೂಟಿಂಗ್ ನಲ್ಲೂ ಸಾಧನೆ ಮಾಡಲು ಹೊರಟಿರುವ ಮಂದಣ್ಣನದು ಇನ್ನೂ ಹೆಚ್ಚು ಹೆಚ್ಚು ಪದಕಗಳನ್ನು ಪಡೆದು, ಗಣ್ಯರ ಶ್ಲಾಘನೆಗೆ ಒಳಗಾಗುವ ತವಕ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿನುಗುತಾರೆ ಆಗುವ ಹೆಬ್ಬಯಕೆ.

English summary
Manjesh Mandanna is the best player of rifle shooting. He is basically from Kodagu, Karnataka. Mandanna has already gained lot of State and National level Awards like 8 gold, 3 silver, 2 bronze medals. He is studying an Engineering in JCE college Mysuru, Karnataka
Please Wait while comments are loading...