ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಟಿಸಿಕೊಂಡು ಬಂದ ಪೊಲೀಸರು: ಬಾವಿಗೆ ಬಿದ್ದು ಸತ್ತ

By Srinath
|
Google Oneindia Kannada News

kasaragod-police-chase-turns-fatal-youth-dies-after-falling-into-well
ಕಾಸರಗೋಡು, ಫೆ. 4: ಆ ಮೂವರು ಯುವಕರು ಕಷ್ಟಪಟ್ಟು ದುಡಿಯುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅಂದೂ ಹಾಗೆ ಆಗಿದೆ. ದುಡಿಮೆ ಆದನಂತರ ರಾತ್ರಿ ವೇಳೆ ಬೀದಿ ಬದಿಯಲ್ಲಿ ನಿಂತು ತಿಂಡಿ ತಿನ್ನುತ್ತಿದ್ದಾರೆ.

ಆದರೆ ಅದೆಲ್ಲಿದ್ದರೋ ಪೊಲೀಸರು, ಅನುಮಾನ ಬಂದು ಕರ್ತವ್ಯದ ಕರೆಗೆ ಓಗೊಟ್ಟು ಈ ಯುವಕರ ಬಳಿ ಧಾವಿಸಿದ್ದಾರೆ. ಆದರೆ ಅವರ ಪೈಕಿ ಇಬ್ಬರು ಅದೇಕೋ ತುಸು ಹೆಚ್ಚೇ ಭಯಭೀತರಾಗಿ, ಪೊಲೀಸರ ಗೊಡವೆ ನಮಗೇಕೆ? ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅದು ಪೊಲೀಸರಲ್ಲಿ ಅನುಮಾವನ್ನು ಹೆಚ್ಚಿಸಿದೆ.

ಸರಿ ಆ ಇಬ್ಬರು ಯುವಕರನ್ನು ಪೊಲೀಸರು ಅಟ್ಟಿಸಿಕೊಂಡು ಹೋಗಿದ್ದಾರೆ. ಒಬ್ಬನನ್ನು ಅಲ್ಲೇ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಓಡಿಹೋಗುತ್ತಿದ್ದ ಇಬ್ಬರು ಯುವಕರು ಕತ್ತಲೆಯಲ್ಲಿ ಗೊತ್ತಾಗದೆ ಸೀದಾ ಬಾವಿಯೊಂದಕ್ಕೆ ಜಾರಿ ಬಿದ್ದಿದ್ದಾರೆ. ಅವರ ಹಿಂದೆಯೇ ಬಂದ ಪೊಲೀಸರಿಗೆ ಯುವಕರು ಪತ್ತೆಯಾಗಿಲ್ಲ. ಅಷ್ಟಕ್ಕೆ ಸುಮ್ಮನಾದ ಪೊಲೀಸರು, ವಾಪಸಾಗಿದ್ದಾರೆ.

ಆದರೆ ತಮ್ಮ ಕೈಗೆ ಸಿಕ್ಕಿಬಿದ್ದ ಒಬ್ಬ ಯುವಕನನ್ನು ಸ್ಟೇಷನ್ನಿಗೆ ಎಳೆದೊಯ್ದು ವಿಚಾರಿಸಿಕೊಂಡಿದ್ದಾರೆ. ಇತ್ತ ಸ್ಥಳೀಯರು ಅನುಮಾನಗೊಂಡು ಬಾವಿಯ ಕಡೆಗೆ ಹೋಗಿ ನೋಡಿದಾಗ ಅದೇ ಇಬ್ಬರು ಯುವಕರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವುದು ಕಂಡಿದೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ಬುಲಾವ್ ಹೋಗಿದೆ. ಅವರು ಬಂದು ಇಬ್ಬರನ್ನೂ ಮೇಲಕ್ಕೆ ಎತ್ತಿದರಾದರೂ ಅರೆ ಜೀವವಾಗಿದ್ದ ಒಬ್ಬ ಮೇಲಕ್ಕೆ ಬರುವಷ್ಟರಲ್ಲಿ ಸತ್ತಿದ್ದಾನೆ. ಉಳಿದೊಬ್ಬನನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ನೀಲೇಶ್ವರಲ್ಲಿ ಜನವರಿ 30ರ ರಾತ್ರಿ ಪೊಲೀಸರಿಂದ ಈ ಅಚಾತುರ್ಯ ನಡೆದಿದೆ. ಹೀಗೆ ಪ್ರಾಣ ಕಳೆದುಕೊಂಡ ಯುವಕ ಕೆವಿ ಶಶಿಧರ (28). ಅವನೊಟ್ಟಿಗೆ ಬಾವಿಗೆ ಬಿದ್ದ ಮತ್ತೋರ್ವ ಯುವಕನ ಹೆಸರು ವಿ ಗಣೇಶ್ (28). ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಟ್ಟ ಯುವಕನ ಹೆಸರು ಪಿವಿ ಸುಜಿತ್ (27).

ಯುವಕ ಅನ್ಯಾಯವಾಗಿ ಪ್ರಾಣತೆತ್ತನಲ್ಲಾ ಎಂದು ಆಕ್ರೋಶಗೊಂಡ ಸ್ಥಳೀಯರು, ಪೊಲೀಸರ ಅತಿರೇಕವನ್ನು ಖಂಡಿಸಿ, ಪ್ರತಿಭಟನೆ ನಡೆಸಿದ್ದಾರೆ.

English summary
Kasaragod Police Chase turns fatal - youth Shashidhar (28) dies after failing into a well, Running away from the police turned fatal after one of the three youths died falling into a nearby well on the night of January 30, 2014. Two others - V Ganesh (28) and P V Sajith (27) -sustained injuries and were admitted to hospital in Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X