ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಅಪಘಾತದಲ್ಲಿ ಕೆಎಎಸ್ ಅಧಿಕಾರಿ ಸಾವು

By Mahesh
|
Google Oneindia Kannada News

ತುಮಕೂರು, ಜ.28: ಬಿಜಾಪುರದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಕೆಎಎಸ್ ಅಧಿಕಾರಿ ಕಾಶೀನಾಥ್ ಪವಾರ್ ಅವರಿದ್ದ ಕಾರು ಲಾರಿಯೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಯಮಿತದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಕಾಶೀನಾಥ್ ಪವಾರ್ (45) ಮೃತ ದುರ್ದೈವಿ. ತೀವ್ರವಾಗಿ ಗಾಯಗೊಂಡಿದ್ದ ಚಾಲಕ ನಾಗರಾಜ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ.

ಕಳೆದ ಮೂರು ದಿನಗಳಿಂದ ವಿಜಯಪುರ(ಬಿಜಾಪುರ)ದಲ್ಲಿದ್ದ ಕಾಶೀನಾಥ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಬುಧವಾರ ಬೆಂಗಳೂರಿಗೆ ಬರುವಾಗ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿಯ ಲಿಂಗಾಪುರದ ಬಳಿ ಇವರಿದ್ದ ಕಾರು ಮುಂದೆ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಾಶೀನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಧಾರವಾಡ ವಿವಿಯಲ್ಲಿ ಅಗ್ರಿಕಲ್ಚರ್‌ನಲ್ಲಿ ಪದವಿ ಪಡೆದಿದ್ದ ಕಾಶೀನಾಥ್ ಪವಾರ್ 1999ರ ಕೆಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ವಿವಿಧ ಇಲಾಖೆಗಳಲ್ಲಿ ಕಾಶೀನಾಥ್ ಕರ್ತವ್ಯ ನಿರ್ವಹಿಸಿದ್ದರು.

KAS officer Kashinath dies in Accident


ಬೆಂಗಳೂರು: ಒಂಟಿ ಗೃಹಿಣಿ ಹತ್ಯೆ

ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೀತಿನಗರದಲ್ಲಿ ಮಹಿಳೆ ಹತ್ಯೆ ಮಾಡಲಾಗಿದೆ. 35 ವರ್ಷದ ಗೃಹಿಣಿ ಉಮಾ ಕೊಲೆಯಾದ ದುರ್ದೈವಿ.

ಪ್ರೀತಿನಗರದ 5ನೇ ಕ್ರಾಸ್ ನಿವಾಸಿಯಾಗಿದ್ದ ಉಮಾ ಅವರ ಮನೆಗೆ ಅಡ್ರೆಸ್ ಕೇಳುವ ನೆಪದಲ್ಲಿ ನುಗ್ಗಿದ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ. ಕೊಲೆ ನಡೆದ ಸಂದರ್ಭದಲ್ಲಿ ಪತಿ ರಮೇಶ್ ಮನೆಯಿಂದ ಹೊರಗೆ ಹೋಗಿದ್ದರು.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಮೇಶ್ ಅವರ ವಿಚಾರಣೆಯನ್ನು ನಡೆಸಿದ್ದಾರೆ.

Chitradurga

ಚಿತ್ರದುರ್ಗ: ಖಾಲಿ ಜಾಗದ ವಿಚಾರಕ್ಕೆ ವ್ಯಕ್ತಿಯ ಕೊಲೆ
ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ್ ಗ್ರಾಮದ ವಾಸಿ ಹಿರೇಮಠದ ವೀರಯ್ಯರವರು ತಮ್ಮ ಮನೆ ಮುಂದೆ ಇರುವಾಗ ಅದೇ ಗ್ರಾಮದ ವಾಸಿ ರಾಜಶೇಖರಯ್ಯ ಮತ್ತು ಅವರ ಹೆಂಡತಿ ಸುಶೀಲಮ್ಮರವರು ಬಂದು ಅವರ ಮನೆ ಪಕ್ಕದಲ್ಲಿರುವ ಖಾಲಿ ಜಾಗದ ವಿಚಾರದಲ್ಲಿ ವೈಷಮ್ಯ ಇಟ್ಟುಕೊಂಡು ಹಿರೇಮಠದ ವೀರಯ್ಯರವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ, ತಳ್ಳಾಡಿದ್ದು ನಂತರ ರಾಜಶೇಖರಯ್ಯನು ಹಿರೇಮಠದ ವೀರಯ್ಯರವನ್ನು ಸಾಯಿಸುವ ಉದ್ದೇಶದಿಂದ ಅವರ ಕುತ್ತಿಗೆಗೆ ಕೈ ಹಾಕಿ ಬಲವಾಗಿ ಹಿಡಿದು ನೆಲಕ್ಕೆ ಜೋರಾಗಿ ದೂಕಿದ ಪರಿಣಾಮ ಹಿರೇಮಠದ ವೀರಯ್ಯರವರು ಕಲ್ಲಿನ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.


ತುಮಕೂರು
ಚಿ.ನಾ.ಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ 01 /2015 ರಲ್ಲಿ ಕಲಂ 174 ಸಿ.ಆರ್.ಪಿ.ಸಿ
ದಿನಾಂಕ 27.01.2015 ರಂದು ಚನ್ನಬಸವಯ್ಯ ಬಿನ್ ಸಣ್ಣ ಲಿಂಗ ಸ್ವಾಮಿ ಶೆಟ್ಟಿಕೆರೆ ಹೋಬಳಿ ಚಿ,ನಾ,ಹಳ್ಳಿ ತಾಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶ:

Tumkur

ನಾನು ನಮ್ಮ ತೋಟದ ಹತ್ತಿರ ಹೋದಾಗ 06 ಗಂಟೆ ಸಮಯದಲ್ಲಿ ನಮ್ಮ ದೂಡ್ಡಪ್ಪನ ಮಗ ಬಿ,ಜಿ, ಗಂಗಾಧರಯ್ಯ ರವರು ನಮ್ಮ ತೋಟದಲ್ಲಿರುವ ಅಂಕಾಲೆ ಮರಕ್ಕೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಅವರು ದಿನ ಬೆಳಗ್ಗೆ 5.30 ಗಂಟೆಗೆ ತೋಟಕ್ಕೆ ಹೋಗುವ ಪದ್ದತಿಯನ್ನು ರೂಢಿಮಾಡಿಕೊಂಡಿದ್ದರು. ಮಾಮೂಲಿನಂತೆ ಈ ದಿನ ಬೆಳಗ್ಗೆ 5.30 ಕ್ಕೆ ತೋಟಕ್ಕೆ ಹೋದವನು ಜೀವನದಲ್ಲಿ ಜಿಗುಪ್ಸೆಹೊಂದಿ ತನ್ಮೂಲಕ ತಾನೆ ಆತ್ನ ಹತ್ಯೆ ಮಾಡಿಕೊಂಡಿದ್ದಾರೆ.

ಗಂಗಾಧರಯ್ಯ ತಿಪಟೂರು ಕಲ್ಪತರು ಕಾಲೇಜಿನಲ್ಲಿ ಅಟೆಂಡರ್ ಕೆಲಸಕ್ಕೆ ಹೋಗುತ್ತಿದ್ದು, ಹೆಂಡತಿ ದ್ರಾಕ್ಷಾಯಣಮ್ಮ ಸುಮಾರು 17 ವರ್ಷದ ಹಿಂದೆ ಮರಣ ಹೊಂದಿದ್ದು, ಇವರಿಗೆ ರೂಪ ಎಂಬ ಒಬ್ಬಳೇ ಹೆಣ್ಣು ಮಗಳಿದ್ದು, ಮದುವೆ ವಯಸ್ಸಿಗೆ ಬಂದಿದ್ದು, ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದು,ಸಾಲ ತೀರಿಸಲು ಸಾದ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದರ ಬಗ್ಗೆ ಯಾವುದೇ ಬೇರೆ ಅನುಮಾನವಿರುವುದಿಲ್ಲ.ಎಂದು ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

English summary
KAS officer Kashinath Pawar killed in an accident NH 4. A 35 year old housewife killed at her home in Preeti Nagar,in the Rajagopalanagar Police station limits in Bengaluru. and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X