ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು

ಕರ್ನಾಟಕದಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬಾರಿ ಮಾವು ಬೆಳೆ ಕಡಿಮೆಯಾಗಿದ್ದರೂ, ವಿದೇಶಗಳಿಂದ ಮಾವಿಗೆ ಒಳ್ಳೆ ಬೇಡಿಕೆಗಳು ಬಂದಿವೆ. ಅಂದಾಜು 10 ಸಾವಿರ ಟನ್ ಮಾವು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 23: ನಿಧಾನಕ್ಕೆ ಹಣ್ಣಿನ ರಾಜ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ಮಾವು ಪ್ರಿಯರಿಗೆ ಇದು ಖುಷಿಯ ಸುದ್ದಿಯಾದರೆ, ಬೆಳೆಗಾರರಿಗೂ ಸಂತಸದ ಸುದ್ದಿಯೊಂದಿದೆ.

ಕರ್ನಾಟಕದಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬಾರಿ ಮಾವು ಬೆಳೆ ಕಡಿಮೆಯಾಗಿದ್ದರೂ, ವಿದೇಶಗಳಿಂದ ಮಾವಿಗೆ ಒಳ್ಳೆ ಬೇಡಿಕೆಗಳು ಬಂದಿವೆ. ಅಂದಾಜು ಈ ಬಾರಿ ಸುಮಾರು 10 ಸಾವಿರ ಟನ್ ಮಾವು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ.[ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿಬಿಡ್ರೀ.. ಅತ್ಲಾಗೆ!]

Karntaka may export 10 thousand tonnes of Mangoes

ಸದ್ಯ ಈಗಾಗಲೇ ಅಮೆರಿಕಾದಿಂದ 1,500 ಟನ್ ಮಾವಿಗೆ ಬೇಡಿಕೆ ಬಂದಿದೆ. ಇನ್ನು ಅಮೆರಿಕಾ, ಯೂರೋಪ್, ಯುಎಇ, ಕುವೈಟ್, ಜಪಾನ್, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಇತರ ದೇಶಗಳಿಗೆ 10 ಸಾವಿರ ಟನ್ ಮಾವು ರಫ್ತಾಗುವ ನಿರೀಕ್ಷೆ ಇದೆ.

ಉತ್ತಮ ಗುಣಮಟ್ಟದ ಻ಅಲ್ಫೊನ್ಸೊ, ಬಂಗನಪಲ್ಲಿ, ಮಲ್ಲಿಕಾ ಮಾವುಗಳು ದೊರೆತಲ್ಲಿ ಬೇಡಿಕೆ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆಗಳೂ ಇವೆ. ಮೇ ಮಧ್ಯ ಭಾಗದಲ್ಲಿ ಮಾವು ಕಟಾವಿಗೆ ಬರಲಿದ್ದು ಈ ವೇಳೆ ಉತ್ತಮ ಗುಣಮಟ್ಟದ ಮಾವಿನ ಪ್ರಮಾಣದ ಲೆಕ್ಕ ಸಿಗಲಿದೆ. ಅಮೆರಿಕಾ ಮುಂತಾದ ದೇಶಗಳು ಉತ್ತಮ ಗುಣಮಟ್ಟದ ಮಾವುಗಳನ್ನು ಮಾತ್ರ ಸ್ವೀಕರಿಸುವುದರಿಂದ ಅವುಗಳನ್ನು ಮಾತ್ರ ರಫ್ತು ಮಾಡಲು ಸಾಧ್ಯವಾಗುತ್ತದೆ.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ]

Karntaka may export 10 thousand tonnes of Mangoes

ಕರ್ನಾಟಕದಲ್ಲಿ ಸುಮಾರು 2.2 ಲಕ್ಷ ಹೆಕ್ಟೇರ್ ಭಾಗದಲ್ಲಿ ಮಾವು ಬೆಳೆಯಲಾಗುತ್ತದೆ. ರೈತರು ವರ್ಷವೊಂದಕ್ಕೆ 13-18 ಲಕ್ಷ ಟನ್ ಮಾವು ಬೆಳೆಯುತ್ತಾರೆ. ಇದರಲ್ಲಿ ಕೋಲಾರದ ಪಾಲೇ ಅತೀ ಹೆಚ್ಚಾಗಿದೆ. ದೇಶದಲ್ಲಿ ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶ ಬಿಟ್ಟರೆ ಅತೀ ಹೆಚ್ಚು ಮಾವು ಬೆಳೆಯುವ ರಾಜ್ಯವೂ ಕರ್ನಾಟಕವಾಗಿದೆ.

ಈ ಬಾರಿ ಮಾತ್ರ ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದಿರುವುದರಿಂದ ಕೇವಲ 10 ಲಕ್ಷ ಟನ್ ಬೆಳೆ ಸಿಗಬಹುದು ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ 14 ಲಕ್ಷ ಟನ್ ಮಾವು ಉತ್ಪಾದನೆಯಾಗಿತ್ತು.

English summary
In this season Mango fruits production may dip to 10 lack tonnes due to drought and unseasonal rain. But it may expect to export at least 10 thousand tonnes of mangoes to the US and other foreign countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X