ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ವಿವಿಯ 34 ಸಾವಿರ ಪುಸ್ತಕಗಳು ನೀರುಪಾಲು

|
Google Oneindia Kannada News

ಬಿಜಾಪುರ, ಅ, 14 : ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸುಮಾರು 34 ಸಾವಿರ ಪುಸ್ತಕಗಳು ಮಳೆ ನೀರಿನಲ್ಲಿ ಒದ್ದೆಯಾಗಿವೆ. ಕೆಳ ಮಹಡಿಯಲ್ಲಿದ್ದ ಉಪಯುಕ್ತ ಪುಸ್ತಕಗಳು ಪ್ರಯೋಜನಕ್ಕೆ ಬಾರದಂತಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲದ ರಜಿಸ್ಟ್ರಾರ್ ಎಸ್. ಎ.ಖಾಜಿ ಮತ್ತು ವೈಸ್ ಛಾನ್ಸೆಲರ್ ಮೀನಾ ಚಂದ್ರಶೇಖರ್ ಪುಸ್ತಕಗಳನ್ನು ಒಣಗಿಸಲಾಗಿದೆ. ಯಾವುದೆ ನಷ್ಟ ಉಂಟಾಗಿಲ್ಲ ಎಂದಿದ್ದಾರೆ.[ನಿಮ್ಮ ಇಷ್ಟದ ಪುಸ್ತಕ ಓದಲೊಂದು ತಾಣ]

Karnataka Women's University books Soak in Rain

ಸರ್ಕಾರದ 1 ಕೋಟಿ ರೂಪಾಯಿ ಅನುದಾನದಲ್ಲಿ ಪ್ರಕಟವಾದ ಪುಸ್ತಕಗಳನ್ನು ಕಟ್ಟಡವೊಂದರ ಕೆಳಮಹಡಿಯಲ್ಲಿ ದಾಸ್ತಾನು ಮಾಡಲಾಗಿತ್ತು. ಆಗಸ್ಟ್‌ 31 ರಂದು ಸುರಿದ ಭೀಕರ ಮಳೆ ಪರಿಣಾಮ ಕೆಳಮಹಡಿಗೆ ನೀರು ನುಗ್ಗಿದ್ದು ಪುಸ್ತಕಗಳು ಹಾಳಾಗಿವೆ. ನಂತರ ತಾರಸಿಯ ಮೇಲೆ ಒಣಗಿಸುವ ಪ್ರಯತ್ನ ಮಾಡಲಾಗಿದೆ ಎಂದು ವಿವಿಯ ಮೂಲಗಳು ಹೇಳುತ್ತವೆ.

ಸಂಗತಿ ರಾಜ್ಯಪಾಲ, ಕುಲಪತಿ ವಜುಭಾಯಿ ರುಡವಾಲಾ ಗಮನಕ್ಕೂ ಹೋಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿ ನೇಮಕವೂ ಆಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಜಾಪುರದ ಮಹಿಳಾ ವಿವಿಗೆ 1 ಕೋಟಿ ರೂ. ಅನುದಾನ ನೀಡಿತ್ತು. ಅದನ್ನು ಬಳಸಿಕೊಂಡು ವಿವಿ ಪುಸ್ತಕ ಪ್ರಕಟ ಮಾಡಿತ್ತು. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಎಲ್ಲ ಪುಸ್ತಗಳು ನೀರು ಪಾಲಾಗಿವೆ.[ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]

40 ಲ್ಷ ರೂ ಮೌಲ್ಯದ ಪುಸ್ತಕಗಳು ಉಪಯೋಗಕ್ಕೆ ಬರುವುದು ಅನುಮಾನ. ಡಾ. ಜಯಶ್ರೀ ನೇತೃತ್ವದ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಆಡಳಿತ ಮಂಡಳಿಗೆ ಸ್ಪಷ್ಟನೆ ಕೇಳಿ ಈಗಾಗಲೇ ನೋಟಿಸ್‌ ಜಾರಿ ಮಾಡಿದೆ.

English summary
About 34,000 books published by the State Women’s University were soaked in water in an underground cell. The books were printed with a 1 crore assistance from the government. They were dumped in an underground cell of a building. The books were left for drying on the terrace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X