ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣದ ಗೊಂಬೆ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಬಹುಮಾನ

|
Google Oneindia Kannada News

ಬೆಂಗಳೂರು, ಜ.30 : ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ. ಮಹಾರಾಷ್ಟ್ರಕ್ಕೆ ಮೊದಲ ಮತ್ತು ಛತ್ತೀಸ್‌ಗಢ ರಾಜ್ಯಕ್ಕೆ ಎರಡನೇ ಬಹುಮಾನ ಸಿಕ್ಕಿದೆ.

ಜನವರಿ 31ರಂದು ನಡೆಯುವ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಬಹುಮಾನಗಳನ್ನು ವಿತರಣೆ ಮಾಡಲಿದ್ದಾರೆ. ಚನ್ನಪಟ್ಟಣದ ಸ್ತಬ್ಧಚಿತ್ರದಲ್ಲಿ 4ರಿಂದ 10 ಅಡಿಗಳ ಎತ್ತರದ ಒಟ್ಟು 42 ಬೊಂಬೆಗಳು ಮತ್ತು ಆಟಿಕೆಗಳನ್ನು ಅಳವಡಿಸಲಾಗಿತ್ತು. 4 ಬೊಂಬೆಗಳು ಬ್ಯಾಟರಿ ನೆರವಿನಿಂದ ತಿರುಗುತ್ತಿದ್ದವು. [ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರ ನೋಡಿ]

Karnataka

ಮಹಾರಾಷ್ಟ್ರ ರಾಜ್ಯ ನಿರ್ಮಿಸಿದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಫಂಡರಾಪುರದ ಯಾತ್ರೆ ಕುರಿತು ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಮತ್ತು ಛತ್ತೀಸ್‌ಗಢ ರಾಜ್ಯದ ಮಾಲೂತಿ ದೇವಸ್ಥಾನಗಳ ಕುರಿತ ಸ್ತಬ್ಧಚಿತ್ರಕ್ಕೆ ಎರಡನೆಯ ಬಹುಮಾನ ದೊರೆತಿದೆ. [ಚಿತ್ರಗಳಲ್ಲಿ ನೋಡಿ : ಒಬಾಮಾ ಭಾರತ ಭೇಟಿ ಮೊದಲ ದಿನ]

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳೂ ಸೇರಿದಂತೆ ಒಟ್ಟು 25 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಅವರು ಈ ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿದ್ದರು. [ಗಣತಂತ್ರ ದಿನ ಸಂಭ್ರಮದಲ್ಲಿ ಒಬಾಮಾ, ಮೋದಿ]

ಚನ್ನಪಟ್ಟಣದ ಬೊಂಬೆಗಳ ಸ್ತಬ್ಧ ಚಿತ್ರ ಮಕ್ಕಳ ಲೋಕವನ್ನು ಪ್ರತಿಬಿಂಬಿಸಿತ್ತು. 42 ಬೊಂಬೆ ಹಾಗೂ ಆಟಿಕೆಗಳು ಈ ಸ್ತಬ್ಧದ ಜೊತೆಗೆ ಕನ್ನಡದ ಜನಪ್ರಿಯ ಶಿಶುಗೀತೆ 'ಆನೆ ಬಂತೊಂದಾನೆ' ಗೀತೆಯ ಸಾಲುಗಳ ಸಂಗೀತವೂ ಬಿತ್ತರಗೊಂಡಿತ್ತು. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್‌ ರಾವ್‌ ಅವರು ಈ ಸಂಗೀತ ಸಂಯೋಜನೆ ಮಾಡಿದ್ದರು.

Channapatna

ಅಂದಾಗೆ 2014ರಲ್ಲಿ ಕರ್ನಾಟಕದ ಟಿಪ್ಪು ಸುಲ್ತಾನ್ ಕುರಿತ ಸ್ತಬ್ಧಚಿತ್ರ, 2013ರಲ್ಲಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ, 2012ರಲ್ಲಿ ದಕ್ಷಿಣ ಕನ್ನಡದ ಭೂತಾರಾಧನೆಯ ಸ್ತಬ್ಧಚಿತ್ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು.

English summary
Karnatakas Channapatna toys tableau won the third prize for best tableau award in 2015 Republic Day Parade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X