ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ದೇಶದ 20 ಪ್ರಮುಖ ರಾಜ್ಯಗಳಲ್ಲಿ ಇತ್ತೀಚೆಗೆ ತಾನು ಸಮೀಕ್ಷಾ ವರದಿಯಲ್ಲಿ ಪ್ರಸ್ತಾಪ.

|
Google Oneindia Kannada News

ನವದೆಹಲಿ, ಏಪ್ರಿಲ್ 28: ಮಾಧ್ಯಮ ಅಧ್ಯಯನ ಸಂಸ್ಥೆಯೊಂದು ದೇಶದಾದ್ಯಂತ ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕ ದೇಶದ ಅತಿ ಭ್ರಷ್ಟ ರಾಜ್ಯವೆಂಬ ಕೆಟ್ಟ ಸಾಧನೆಗೆ ಪಾತ್ರವಾಗಿದೆ.

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ದೇಶದ 20 ಪ್ರಮುಖ ರಾಜ್ಯಗಳಲ್ಲಿ ಇತ್ತೀಚೆಗೆ ತಾನು ಸಮೀಕ್ಷೆ ನಡೆಸಿದ್ದಾಗಿ ಹೇಳಿದೆ. ಎಲ್ಲಾ ರಾಜ್ಯಗಳಲ್ಲಿ ಗ್ರಾಮೀಣ ಹಾಗೂ ನಗರ ವಾಸಿಗಳು ಸೇರಿದಂತೆ ಸುಮಾರು 3 ಸಾವಿರ ವ್ಯಕ್ತಿಗಳನ್ನು ಸಮೀಕ್ಷೆಯ ವೇಳೆ ಸಂದರ್ಶಿಸಲಾಗಿದೆ ಎಂದು ತನ್ನ ಸಮೀಕ್ಷಾ ವರದಿಯಲ್ಲಿ ಸಂಸ್ಥೆ ಹೇಳಿಕೊಂಡಿದೆ.[ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗದ ಸರ್ವೆ ಅಧಿಕಾರಿಯ ಬಂಧನ]

Karnataka top corrupted state in India: Survey

ಅದರಂತೆ, ಕರ್ನಾಟಕ ರಾಜ್ಯ ಅತ್ಯಂತ ಭ್ರಷ್ಟ ರಾಜ್ಯವೆಂಬ ಹಣೆಪಟ್ಟಿ ಗಳಿಸಿದ್ದು, ಆನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿವೆ.

ಹಿಮಾಚಲ ಪ್ರದೇಶ, ಛತ್ತೀಸ್ ಗಢ ಹಾಗೂ ಕೇರಳ ರಾಜ್ಯಗಳು ಅತಿ ಕಡಿಮೆ ಭ್ರಷ್ಟಾಚಾರ ಇರುವ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿವೆ.[ಎಸಿಬಿ ಬಲೆಗೆ ಬಿದ್ದ ಯಲಬುರ್ಗಾ ಪಟ್ಟಣ ಪಂಚಾಯತ್ ಅಧಿಕಾರಿಗಳು]

ಕರ್ನಾಟಕದಲ್ಲಿ ಶೇ. 75 ರಷ್ಟು ಜನರು ಯಾವುದೇ ಸರ್ಕಾರಿ ಕೆಲಸ, ಕಾರ್ಯಗಳನ್ನು ಮಾಡಿಸಲು ಮುಂದಾದಾಗ ಅವರು ಲಂಚ ಕೊಡಲೇಬೇಕಾದ ಪರಿಸ್ಥಿತಿಯಿದೆ ಎಂದು ದೂರಿದ್ದಾರೆ. ಆದರೆ, ಕಳೆದ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ಕೈಗೊಂಡಿದ್ದ ಅಪನಗದೀಕರಣದಿಂದಾಗಿ ಭ್ರಷ್ಚಾಚಾರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಜನರು ಪ್ರತಿಕ್ರಿಯಿಸಿರುವುದಾಗಿ ಸಂಸ್ಥೆ ಹೇಳಿದೆ.

ಸಮೀಕ್ಷೆ ನಡೆಸಲಾದ ಸುಮಾರು 20 ರಾಜ್ಯಗಳಲ್ಲಿ 2015ರ ಹೊತ್ತಿಗೆ ಹರಿದಾಡಿದ ಲಂಚದ ಪ್ರಮಾಣ ಒಟ್ಟು 20,500 ಕೋಟಿ ರು. ಆಗಿತ್ತು. ಆದರೆ, ಅಪನಗದೀಕರಣದಿಂದಾಗಿ 2017ರ ಆರಂಭದಿಂದ ಈವರೆಗೆ 6,350 ಕೋಟಿ ರು. ಮಾತ್ರ ಹರಿದಾಡಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.[ಸಮೀಕ್ಷಾ ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಸಮೀಕ್ಷಾ ವರದಿಯಂತೆ, ಟಾಪ್ 5 ಲಂಚಕೋರ ರಾಜ್ಯಗಳ ಪಟ್ಟಿ ಇಲ್ಲಿದೆ.

1. ಕರ್ನಾಟಕ
2. ಆಂಧ್ರ ಪ್ರದೇಶ
3. ತಮಿಳುನಾಡು
4. ಮಹಾರಾಷ್ಟ್ರ
5. ಜಮ್ಮು ಮತ್ತು ಕಾಶ್ಮೀರ

English summary
Karnataka earned the dubious distinction of being the most corrupt state in the country. A survey which covered 20 states found that Karnataka was followed by Andhra Pradesh and Tamil Nadu. The survey conducted by the Center for Media Studies covered around 3,000 persons in both rural and urban areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X