ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

487 ಟಾಟಾ ಬಸ್ ಖರೀದಿ ಮಾಡಲಿದೆ ಸಾರಿಗೆ ಇಲಾಖೆ

|
Google Oneindia Kannada News

ಬೆಂಗಳೂರು, ಫೆ.17 : ಸಾರಿಗೆ ಇಲಾಖೆ 487 ಹೊಸ ಬಸ್ಸುಗಳನ್ನು ಖರೀದಿ ಮಾಡಲಿದೆ. ಇವು ಟಾಟಾ ಕಂಪೆನಿಯ ಬಸ್ಸುಗಳಾಗಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇಲ್ಲದ ಸಾಮಾನ್ಯ ಬಸ್ಸುಗಳಾಗಿವೆ. ಪ್ರತಿ ಬಸ್ಸಿನ ಬೆಲೆ 38 ಲಕ್ಷ ರೂ.ಗಳು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೂತನವಾಗಿ 487 ಬಸ್ಸುಗಳನ್ನು ಖರೀದಿ ಮಾಡಲಾಗುತ್ತಿದೆ. ಆದರೆ, ಇವು ನಿಷೇಧಿತ ಮಾರ್ಕೊಪೋಲೊ ಬಸ್ಸುಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಮತ್ತೆ ಬಸ್ ದರ ಇಳಿಸೋಲ್ಲಾ ಅಂದ್ರು ಮಿನಿಸ್ಟರ್]

Bus

ಮೊದಲು ಪ್ರಾಯೋಗಿಕ ಸಂಚಾರಕ್ಕಾಗಿ 10 ಖರೀದಿ ಮಾಡಲಾಗುತ್ತಿದ್ದು, ಅವುಗಳ ಕಾರ್ಯಕ್ಷಮತೆ ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು. ಇವು ಮುಂಭಾಗದಲ್ಲಿ ಇಂಜಿನ್‌ ಇರುವ ಸಾಮಾನ್ಯ ಬಸ್ಸುಗಳಾಗಿವೆ. [ಗುಜರಿ ಸೇರಲಿವೆ ಟಾಟಾದ ಮಾರ್ಕೊಪೋಲೊ ಬಸ್!]

ಕೇಂದ್ರ ಸರ್ಕಾರ ಬಸ್ ಖರೀದಿಗಾಗಿ ಶೇ 50ರಷ್ಟು ಅನುದಾನವನ್ನು ನೀಡಲಿದೆ. ಉಳಿದ ಪಾಲನ್ನು ರಾಜ್ಯ ಸರ್ಕಾರ ಪಾವತಿ ಮಾಡಿ ಖರೀದಿ ಮಾಡಲಿದೆ. ಪ್ರತಿ ಬಸ್ ಬೆಲೆ 38.05 ಲಕ್ಷವಾಗಿದೆ. ಜಿಪಿಎಸ್‌ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆ ಈ ಬಸ್ಸುಗಳಲ್ಲಿದೆ.

ಬಸ್ ಖರೀದಿಗೆ ರಾಜ್ಯ ಸರ್ಕಾರ ಕರೆದಿದ್ದ ಟೆಂಡರ್‌ನಲ್ಲಿ ಅಶೋಕ್ ಲೈಲ್ಯಾಂಡ್, ಟಾಟಾ ಕಂಪನಿಗಳು ಪಾಲ್ಗೊಂಡಿದ್ದವು. ಟಾಟಾ ಅತಿ ಕಡಿಮೆ ದರ ದಾಖಲಿಸಿದ್ದ ಕಾರಣ ಅದಕ್ಕೆ ಟೆಂಡರ್‌ ನೀಡಲಾಗಿದೆ.

ಬಸ್ ಗುಜರಿಗೆ ಹಾಕಲಾಗಿತ್ತು : ಸಾರಿಗೆ ಸಂಸ್ಥೆಗಳ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಕೊಪೋಲೊ ಬಸ್ಸುಗಳನ್ನು ಗುಜರಿಗೆ ಹಾಕಲು ಸಚಿವ ಸಂಪುಟ ಸಭೆಯಲ್ಲಿ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಬೆಂಗಳೂರು ಮತ್ತು ಮೈಸೂರು ನಗರ ಸೇರಿ ಒಟ್ಟು 142 ಮಾರ್ಕೊಪೋಲೊ ಬಸ್ಸುಗಳಿದ್ದು ಇವು ಟಾಟಾ ಕಂಪನಿಗೆ ಸೇರಿದ್ದವು.

English summary
Karnataka Transport Department will Purchase 487 new Tata buses said minister Ramalinga Reddy. Minister clears that this are all not Marcopolo bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X