ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನು ಸಾಧನೆ ಮಾಡಿದ್ದಾರಂತ ಇವರಿಗೆ ಸ್ಯಾಲರಿ ಹೈಕು?

By ಬಾಲರಾಜ್ ತಂತ್ರಿ
|
Google Oneindia Kannada News

ನಮಗೂ, ನಿಮಗೂ ಇಂಕ್ರೀಮೆಂಟ್ ಆಗಬೇಕಂದರೆ ಅದಕ್ಕೆ ನೂರಾಯೆಂಟು ಪ್ರೊಸಿಜರ್ ಗಳು. ನಮ್ಮ ವಾರ್ಷಿಕ ಸಾಧನೆಯ ಆಧಾರದ ಮೇಲೆ ಸಂಬಳ ಏರಿಕೆಯಾದರೂ ಅದು 6ರಿಂದ 10 ಪರ್ಸೆಂಟ್ ದಾಟಲ್ಲ. ಅದಕ್ಕೆ ಆ ಫಾರ್ಮು, ಈ ಫಾರ್ಮು , ಮೇಲಾಧಿಕಾರಿಗಳ ಅಪ್ರೂವಲ್ ಹೀಗೆ ನಿಯಮಗಳು ಒಂದಾ ಎರಡಾ?

ಆದರೆ ಇವರಿಗೆ ಇದರ ಯಾವ ರಗಳೆನೂ ಇಲ್ಲ. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಸಂಬಳ/ಭತ್ಯೆ ಪಡೆಯುವ ಶಾಸಕರು ಎನ್ನುವ ಹೆಗ್ಗಳಿಕೆಗೆ ನಮ್ಮ ಕರ್ನಾಟಕದ ಶಾಸಕರು ಪಾತ್ರರಾಗಿದ್ದಾರೆ. (ಶಾಸಕರ ವೇತನ ಭಾರೀ ಏರಿಕೆ)

Karnataka State Finance department following any parameters to disburse salary to MLAs

ಶಾಸಕರ ವೇತನ ಹೆಚ್ಚಳ ವಿಧೇಯಕ ಸದನದಲ್ಲಿ ಮಂಡನೆಯಾದಾಗ ಅದೇನು ಒಗ್ಗಟ್ಟು, ಅದೇನು ಸೌಹಾರ್ದತೆ, ಅದೇನು ಸಭ್ಯತೆ? ಆಡಳಿತ, ವಿರೋಧ ಪಕ್ಷ ಎನ್ನುವ ಯಾವುದೇ ಕಟ್ಟುಪಾಡು ಇಲ್ಲದೇ, ಯಾವುದೇ ಚರ್ಚೆ, ಪ್ರಶ್ನೋತ್ತರವಿಲ್ಲದೆ ಶಾಸಕರು ವಿಧೇಯಕಕ್ಕೆ ಜೈ ಎಂದಿದ್ದಾರೆ.

ವೇತನ ಪರಿಷ್ಕರಣೆ ವಿಧೇಯಕ ಮಂಡನೆಯ ವೇಳೆ ತೋರಿದ ಒಗ್ಗಟ್ಟು, ಶಿಸ್ತನ್ನು ಹಿಂದೆಯೂ ಪಾಲಿಸಿಕೊಂಡು ಬಂದಿದ್ದರೆ ಸದನ ಕಲಾಪ ಬಲಿಯಾಗದೇ ಅದೆಷ್ಟೋ ಬಿಲ್ ಗಳು ಪಾಸ್ ಆಗುತ್ತಿದ್ದವು.

ಗತಿಸಿ ಹೋಗಿದ್ದಕ್ಕೆ ಚಿಂತಿಸಿ ಫಲವೇನು ಅನ್ನುವಂತೆ ಇನ್ಮುಂದೆಯಾದರೂ ಸದನದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವ ಗಂಭೀರ ಚರ್ಚೆ ಶಾಸಕರಿಂದ ನಡೆಯಬೇಕಿದೆ.

ಶಾಸಕರ ಮಾಸಿಕ ವೇತನ ಮತ್ತು ಇತರ ಭತ್ಯೆಗಳು ಸೇರಿ 75 ಸಾವಿರದಿಂದ 1.25 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಅಂದರೆ 224 ಶಾಸಕರಿಗೆ ಏರಿಕೆಯಾದ ವೇತನದ ಹೆಚ್ಚುವರಿ ಮಾಸಿಕ ಹೊರೆ ಅಂದಾಜು 1.2 ಕೋಟಿ ರೂಪಾಯಿ.

ಇದು ಬಿಟ್ಟು ಮುಖ್ಯಮಂತ್ರಿಗಳು, ಸಂಪುಟ ದರ್ಜೆ, ರಾಜ್ಯ ದರ್ಜೆ ಸಚಿವರು, ವಿರೋಧ ಪಕ್ಷದ ನಾಯಕ, ಸಭಾಪತಿ, ಉಪಸಭಾಪತಿಯವರದ್ದು ಲೆಕ್ಕ ಬೇರೆ ಇದೆ.

ವೇತನ ಹೆಚ್ಚಿಸಬೇಕೆನ್ನುವ ಬೇಡಿಕೆ ಅಥವಾ ಒತ್ತಡ ಮುಖ್ಯಮಂತ್ರಿಗಳಿಗೆ ಇತ್ತೇ ಎನ್ನುವ ಪ್ರಶ್ನೆ ಇಲ್ಲಿ ಕಾಡುವುದು ಸಹಜ. ಯಾಕೆಂದರೆ, ಈ ವಿಧೇಯಕ ಮಂಡನೆಯಾದಾಗ ಸುಮ್ಮನಿದ್ದ ಕೆಲವು ಶಾಸಕರು, ನಂತರ ಇದರ ಅವಶ್ಯಕತೆ ಇರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು.

ಈ ರೀತಿ ವೇತನ ಹೆಚ್ಚಳವನ್ನು ವಿರೋಧಿಸಿದ ಶಾಸಕರನ್ನು ಪಟ್ಟಿ ಮಾಡಿ, ಅಂಥವರನ್ನು 'ವೇತನ ರಹಿತ' ಶಾಸಕರೆಂದು ಹಣಕಾಸು ಇಲಾಖೆ ಪ್ರತ್ಯೇಕಿಸಿದರೆ ಇದರಿಂದ ಜನರ ತೆರಿಗೆ ಹಣವಾದರೂ ಉಳಿಯಬಹುದೇನೋ?

Karnataka State Finance department following any parameters to disburse salary to MLAs

ಅದೇನೆ ಇರಲಿ, ಶಾಸಕರಿಗೆ ನೀಡುವ ಮಾಸಿಕ ವೇತನಕ್ಕೆ ಏನಾದರೂ ಪ್ಯಾರಾಮೀಟರನ್ನು ಹಣಕಾಸು ಇಲಾಖೆ ಇಟ್ಟುಕೊಂಡಿದೆಯಾ ಎನ್ನುವುದು ಜನಸಾಮಾನ್ಯರ ಪ್ರಶ್ನೆ?

ವರ್ಷದಲ್ಲಿ ಕೆಲವು ದಿನಗಳ ಕಾಲ ನಡೆಯುವ ಸದನ ಕಲಾಪದಲ್ಲೇ ಸರಿಯಾಗಿ ಭಾಗವಹಿಸದ ಶಾಸಕ/ಸಚಿವರಿಗೆ ಮಾಸಿಕ ವೇತನ ನೀಡುವಾಗ ಯಾವ ಪದ್ದತಿಯನ್ನು ಪಾಲಿಸಲಾಗುತ್ತಿದೆ? Human Resources ಪಾಲಿಸಿ ತರ ಶಾಸಕರಿಗೆ MLA ಪಾಲಿಸಿ ಏನಾದರೂ ಜಾರಿಯಲ್ಲಿ ಇದೆಯಾ?

ಶಾಸಕರ ಹಾಜರಾತಿ ಮೇಲೆ ಮಾಸಿಕ ವೇತನ ನೀಡಲಾಗುತ್ತಾ ಅಥವಾ ಐದು ವರ್ಷ ಕ್ಷೇತ್ರ/ಸದನದಲ್ಲಿ ಹಾಜರಿರಲಿ ಬಿಡಲಿ ಫುಲ್ ಸ್ಯಾಲರಿ ಸಿಗುತ್ತಾ?

ಇವರಿಗೂ ಅಟೆಂಡೆನ್ಸ್ ಸಿಸ್ಟಂ ಅನ್ನೋದು ಇದೆಯಾ? ಒಂದು ವೇಳೆ ಅಟೆಂಡೆನ್ಸ್ ಸಿಸ್ಟಂ ಅನ್ನೋದು ಇದ್ದರೆ ಅದು ಯಾವ ರೀತಿ ವರ್ಕೌಟ್ ಆಗುತ್ತೆ? ರಜೆ ಹಾಕಿದರೆ ಅದಕ್ಕೆ ಸಿಎಲ್/ಪಿಎಲ್ ಏನಾದರೂ ಇದೆಯಾ? ಇವರಿಗೆ ವೀಕ್ಲಿ ಆಫ್ ಅನ್ನೋದಿದೆಯಾ?

ಈ ರೀತಿಯ ಜನತೆಗಿರುವ ಹತ್ತು ಹಲವಾರು ಸಂದೇಹ/ಪ್ರಶ್ನೆಗಳಿಗೆ ರಾಜ್ಯ ಹಣಕಾಸು ಇಲಾಖೆ ಅಥವಾ ಸರಕಾರ ಉತ್ತರ ನೀಡಲಿ ಎನ್ನುವುದೊಂದು ಕೋರಿಕೆ.

English summary
Karnataka State government finance department following any parameters to disburse the salary to 224 MLAs?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X