ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆಯ ನೇಕಾರನ ಮಗಳು ಪೂರ್ಣಾಂಕ ನೇಯ್ದ ಕತೆ

ನೇಕಾರ ವೃತ್ತಿ ಮಾಡುತ್ತಲೇ ಮಕ್ಕಳನ್ನು ಓದಿಸುತ್ತಿರುವ ರವೀಂದ್ರ ಶಿರಹಟ್ಟಿ ಅವರ ಮಗಳು ಪಲ್ಲವಿ, ದಿನಕ್ಕೆ 8-9 ಗಂಟೆ ಓದುತ್ತಿದ್ದರಂತೆ! ಆಕೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೇ ಕೀರ್ತಿ ತಂದಿದ್ದಾಳೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮೇ 13: ಇವರು ನಿಜಕ್ಕೂ ಸಾಮಾನ್ಯ ಮನುಷ್ಯರಾ? ಒಂದೂ ಅಂಕ ಬಿಡದೆ 625 ಕ್ಕೆ 625 ಅಂಕ ಪಡೆಯೋದಂದ್ರೆ ಸುಮ್ನೇನಾ? ಅವರ ಬುದ್ಧಿ ಎಷ್ಟು ಚುರುಕಾಗಿರಬೇಡ? ಉತ್ತರ ಬರೆವಾಗ ಅವರೆಷ್ಟು ನಿಖರವಾಗಿರಬೇಡ?!

ಹೌದು, ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 12 ರಂದು ಹೊರಬೀಳುತ್ತಿದ್ದಂತೆಯೇ ಅಚ್ಚರಿಯಾಗಿದ್ದು ಸತ್ಯ. ಮೂವರು ವಿದ್ಯಾರ್ಥಿಗಳು ಪೂರ್ಣಾಂಕ ಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಅವರ ಬುದ್ಧಿ ಶಕ್ತಿಯನ್ನು ಇಡೀ ರಾಜ್ಯವೂ ಕೊಂಡಾಡುವಂತೆ ಮಾಡಿದರು. ಅವರಲ್ಲಿ ಒಬ್ಬಳು ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಪಲ್ಲವಿ ಶಿರಹಟ್ಟಿ.[ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ]

Karnataka SSLC results 2017: What Pallavi Shirahatti says is here

ನೇಕಾರ ವೃತ್ತಿ ಮಾಡುತ್ತಲೇ ಮಕ್ಕಳನ್ನು ಓದಿಸುತ್ತಿರುವ ರವೀಂದ್ರ ಶಿರಹಟ್ಟಿ ಅವರ ಮಗಳು ಪಲ್ಲವಿ, ದಿನಕ್ಕೆ 8-9 ಗಂಟೆ ಓದುತ್ತಿದ್ದರಂತೆ! ಪಲ್ಲವಿ ಇಂಗ್ಲಿಷ್ ವಿಷಯವೊಂದಕ್ಕೆ ಮಾತ್ರ ಕೋಚಿಂಗ್ ಹೋಗುತ್ತಿದ್ದಳು. ಶ್ರಮವಹಿಸಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿರುವ ರವೀಂದ್ರ ಅವರ ಬಳಿ ಮಗಳ ಸಾಧನೆಯ ಬಗ್ಗೆ ಕೇಳಿದರೆ, ನನ್ನ ಶ್ರಮ ಇಂದು ಸಾರ್ಥಕವಾಯಿತು, ಅವರ ಭವಿಷ್ಯಕ್ಕಾಗಿ ನಾನು ಮತ್ತಷ್ಟು ಶ್ರಮಹಾಕಿ ಕೆಲಸ ಮಾಡುತ್ತೇನೆ ಎಂದರು.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

ನಾನು ರ್ಯಾಂಕ್ ಪಡೆಯುತ್ತೇನೆ ಅಂತ ನನ್ನ ಒಳ ಮನಸ್ಸು ಹೇಳುತ್ತಿತ್ತು. ಕೊನೆಗೂ ನನ್ನ ಕನಸು ನನಸಾಗಿದೆ. ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ವೈದ್ಯಳಾಗುತ್ತೇನೆ ಎನ್ನುತ್ತಾಳೆ ಪಲ್ಲವಿ ಶಿರಹಟ್ಟಿ. ಆಕೆಯ ಸಾಧನೆಗೆ ಇಡೀ ರಾಜ್ಯವೇ ಬೆರಗಾಗಿದೆ. ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಉಮಾಶ್ರಿ ಸಹ ಪಲ್ಲವಿ ಅವರನ್ನು ಅಭಿನಂದಿಸಿದ್ದಾರೆ.
ನನ್ನ ಈ ಸಾಧನೆಗೆ ಬೆಂಬಲಿಸಿದ ನನ್ನ ತಂದೆ, ತಾಯಿ, ಒಡಹುಟ್ಟಿದವರು, ಶಿಕ್ಷಕರು, ಬಂಧು- ಬಳಗ ಎಲ್ಲರಿಗೂ ಕೃತಜ್ಞತೆಗಳು ಎನ್ನುವ ಪಲ್ಲವಿ ಅವರಿಗೆ ನಮ್ಮದೂ ಅಭಿನಂದನೆ ಇರಲಿ.

English summary
Karnataka SSLC results 2017: My father, mother, siblings and teachers are the inspiration for my achievement, Pallavi Shirahatti from Bagalkot who scored 625 out of 625 told
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X