ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವರ್ಷಗಳಲ್ಲೇ ಕನಿಷ್ಠ, ಎಸ್‌ಎಸ್ಎಲ್‌ಸಿ ಫಲಿತಾಂಶದ ಹೈಲೈಟ್ಸ್

ರಾಜ್ಯದಲ್ಲಿ ಈ ಬಾರಿ ಒಟ್ಟು 8,56,286ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 5,81,134 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಪರಿಣಾಮ ಶೇ. 67.87 ಫಲಿತಾಂಶ ಬಂದಿದೆ. 2010ರ ನಂತರ ದಾಖಲಾದ ಕನಿಷ್ಠ ಫಲಿತಾಂಶ ಇದು.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 12 : ಪ್ರತಿವರ್ಷದಂತೆ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 67.87 ಫಲಿತಾಂಶ ಬಂದಿದೆ. ಕಳೆದ 7 ವರ್ಷಗಳಲ್ಲೇ ದಾಖಲಾದ ಕನಿಷ್ಠ ಫಲಿತಾಂಶ ಇದು.

ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರು ಎಸ್ಎಸ್ಎಲ್‌ಸಿ ಬೋರ್ಡ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಿದರು. ಈ ಬಾರಿಯೂ ಬಾಲಕಿಯರು, ಗ್ರಾಮೀಣ ವಿದ್ಯಾರ್ಥಿಗಳು ಎಂದಿನಂತೆ ಮೇಲುಗೈ ಸಾಧಿಸಿದ್ದಾರೆ. ಜತೆಗೆ ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳು ಪ್ರಾಬಲ್ಯ ಮರೆದಿದ್ದರೆ, ದೃಷ್ಠಿ ವಿಕಲ ಚೇತನರು ಎಲ್ಲಾ ಸರಿ ಇರುವವರಿಗಿಂತ ಉತ್ತಮ ಫಲಿತಾಂಶ ಪಡೆದಿದ್ದು ಖುಷಿಯ ಸುದ್ದಿ.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

ಒಟ್ಟು ಫಲಿತಾಂಶ
ರಾಜ್ಯದಲ್ಲಿ ಈ ಬಾರಿ ಒಟ್ಟು 8,56,286ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 5,81,134 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಪರಿಣಾಮ ಶೇ. 67.87 ಫಲಿತಾಂಶ ಬಂದಿದೆ. ಕಳೆದ ಬಾರಿ ಶೇಕಡಾ 75.11 ಫಲಿತಾಂಶ ಬಂದಿತ್ತು. ಇದಕ್ಕೆ ಹೋಲಿಸಿದರೆ ಶೇಕಡಾ 7 ರಷ್ಟು ಫಲಿತಾಂಶ ಕುಸಿತವಾಗಿದೆ. ಮಾತ್ರವಲ್ಲ 2010ರ ನಂತರ ದಾಖಲಾದ ಕನಿಷ್ಠ ಫಲಿತಾಂಶ ಇದು.[ಎಸ್ಎಸ್ಎಲ್ ಸಿ ಫಲಿತಾಂಶಪ್ರಕಟ, 3 ಗಂಟೆಗೆ ಆನ್ಲೈನಲ್ಲಿ ಲಭ್ಯ]

ಖಾಸಗಿಯಾಗಿ ಮರು ಪರೀಕ್ಷೆ ಬರೆದಿದ್ದ 75 ವಿದ್ಯಾರ್ಥಿಗಳಲ್ಲಿ ಒಬ್ಬರೂ ಪಾಸಾಗಿಲ್ಲ.

ಬಾಲಕಿಯರೇ ಸ್ಟ್ರಾಂಗ್

ಬಾಲಕಿಯರೇ ಸ್ಟ್ರಾಂಗ್

ಎಂದಿನಂತೆ ಈ ಬಾರಿಯೂ ಬಾಲಕಿಯರು ಫಲಿತಾಂಶದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಪರೀಕ್ಷೆ ಬರೆದಿದ್ದ 4,00,139 ವಿದ್ಯಾರ್ಥಿಯರಲ್ಲಿ 2,96,426 ಜನ ತೇರಗಡೆಯಾಗಿ ಶೇಕಡಾ 74.08 ಫಲಿತಾಂಶ ಪಡೆದಿದ್ದಾರೆ. ಇನ್ನು ಬಾಲಕರ ವಿಚಾರಕ್ಕೆ ಬಂದಾಗ 4,56,147 ಜನ ಪರೀಕ್ಷೆ ಬರೆದಿದ್ದು ಕೇವಲ 2,54,708 ಜನ ಪಾಸಾಗಿ 62.42 ಫಲಿತಾಂಶ ಬಂದಿದೆ.

ಗ್ರಾಮೀಣ, ಇಂಗ್ಲೀಷ್ ಮಾಧ್ಯಮದವರದ್ದೇ ರಾಜ್ಯಭಾರ

ಗ್ರಾಮೀಣ, ಇಂಗ್ಲೀಷ್ ಮಾಧ್ಯಮದವರದ್ದೇ ರಾಜ್ಯಭಾರ

ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ದೊಡ್ಡ ಮಟ್ಟಿಗೆ ಅಲ್ಲವಾದರೂ ಒಂದಷ್ಟು ವ್ಯತ್ಯಾಸ ಇದೆ. ಸೌಲಭ್ಯಗಳ ಕೊರತೆ, ಮೂಲ ಸೌಕರ್ಯಗಳಿಲ್ಲದೆ ಓದಿಯೂ ಗ್ರಾಮಾಂತರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಇನ್ನು ಇಂಗ್ಲೀಷ್ ಮಾಧ್ಯಮದವರು ಶೇಕಡಾ 78.94 ರಷ್ಟು ಫಲಿತಾಂಶ ಪಡೆದಿದ್ದಾರೆ. ಕನ್ನಡ ಮಾಧ್ಯಮದವರು ಶೇಕಡಾ 62.47 ರಷ್ಟು ಫಲಿತಾಂಶ ಪಡೆದಿದ್ದಾರೆ.[ಮಂಗಳೂರಿನ ಎಂಡೋಸಲ್ಫಾನ್ ಪೀಡಿತನ ಅಪೂರ್ವ ಸಾಧನೆ]

ತಮಿಳಿಗರ ಫಲಿತಾಂಶದಲ್ಲಿ ಏರಿಕೆ

ತಮಿಳಿಗರ ಫಲಿತಾಂಶದಲ್ಲಿ ಏರಿಕೆ

ಎಲ್ಲಾ ಮಾಧ್ಯಮಗಳ ಫಲಿತಾಂಶದಲ್ಲಿಯೂ ಇಳಿಕೆಯಾಗಿದೆ. ಆದರೆ ತಮಿಳು ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಮಾತ್ರ ಉತ್ತಮ ಫಲಿತಾಂಶ ಪಡೆದಿದ್ದಾರೆ. ಕಳೆದ ಬಾರಿ ಶೇಕಡಾ 46.54 ಫಲಿತಾಂಶ ಪಡೆದಿದ್ದ ತಮಿಳಿಗರು ಈ ಬಾರಿ 48.96 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದ 192 ವಿದ್ಯಾರ್ಥಿಗಳಲ್ಲಿ 94 ಜನ ಪಾಸಾಗಿದ್ದಾರೆ.

ಸಾಮಾನ್ಯರನ್ನು ಮೀರಿಸಿದ ದೃಷ್ಟಿ ಮಾಂದ್ಯರು

ಸಾಮಾನ್ಯರನ್ನು ಮೀರಿಸಿದ ದೃಷ್ಟಿ ಮಾಂದ್ಯರು

ಸಾಮಾನ್ಯರು ಪಡೆದ ಫಲಿತಾಂಶ ಶೇಕಡಾ 67.92. ಆದರೆ ಅಂಧರು ಪಡೆದ ಫಲಿತಾಂಶ ಎಷ್ಟು ಗೊತ್ತಾ? ಶೇಕಡಾ 78.23. ಪರೀಕ್ಷೆ ಬರೆದ 441 ವಿದ್ಯಾರ್ಥಿಗಳಲ್ಲಿ345 ಜನ ಪಾಸಾಗಿದ್ದಾರೆ. ಇನ್ನು ಹಲವು ನ್ಯೂನತೆಗಳ ನಡುವೆಯೂ ಪರೀಕ್ಷೆ ಬರೆದ ಹಲವರು ಉತ್ತಮ ಫಲಿತಾಂಶ ಗಿಟ್ಟಿಸಿದ್ದಾರೆ.[ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ]

ಕರಾವಳಿ ಜಿಲ್ಲೆಗಳ ದರ್ಬಾರ್

ಕರಾವಳಿ ಜಿಲ್ಲೆಗಳ ದರ್ಬಾರ್

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಗಿಟ್ಟಿಸಿದೆ. ಹಲವು ವರ್ಷಗಳ ನಂತರ ಕರಾವಳಿ ಜಿಲ್ಲೆಗಳು ಕೊದಲೆರಡು ಸ್ಥಾನವನ್ನು ತಮ್ಮಲ್ಲೇ ಹಂಚಿಕೊಂಡಿವೆ. ಉಡುಪಿಯಲ್ಲಿ ಶೇ.84.23 ಮತ್ತು ದಕ್ಷಿಣ ಕನ್ನಡದಲ್ಲಿ ಶೇ.82.39ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ಕಳೆದ ಬಾರಿ ನಂಬರ್ ವನ್ ಸ್ಥಾನ ಪಡೆದಿದ್ದ ಬೆಂಗಳೂರು ಗ್ರಾಮಾಂತರ 10ನೇ ಸ್ಥಾನಕ್ಕೆ ಜಾರಿದ್ದು, 5ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು 18ನೇ ಸ್ಥಾನಕ್ಕೆ ಇಳಿದಿದ್ದು, 7ನೇ ಸ್ಥಾನದಿಂದ ಬಾಗಲಕೋಟೆ 33ನೇ ಸ್ಥಾನಕ್ಕೆ ಕುಸಿದಿದ್ದು ಈ ಬಾರಿಯ ವಿಶೇಷ.

ಇನ್ನು ಪಿಯುಸಿ ಫಲಿತಾಂಶದಂತೆ ಬೀದರ್ ಇಲ್ಲೂ ಕೊನೆಯ 34ನೆಯ ಸ್ಥಾನದಲ್ಲಿದೆ.

ಶೂನ್ಯ ಹಾಗೂ ಶೇಕಡಾ 100 ಫಲಿತಾಂಶ

ಶೂನ್ಯ ಹಾಗೂ ಶೇಕಡಾ 100 ಫಲಿತಾಂಶ

ಈ ಬಾರಿ 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿತ್ತು. ಶಿಸ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಶಿಕ್ಷಣ ಸಚಿವರು ಪ್ರತೀ ವರ್ಷ ಡಂಗುರ ಹೊಡೆಯುತ್ತಲೇ ಇದ್ದಾರೆ. ಆದರೆ ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತಲೇ ಇದೆ. ಆದರೆ ಸರಕಾರಿ ಶಾಲೆಗಳಲ್ಲಿ ಕೇವಲ 5 ಶಾಲೆಗಳಲ್ಲಿ ಮಾತ್ರ ಶೂನ್ಯ ಫಲಿತಾಂಶ ದಾಖಲಾಗಿರುವುದು ಖುಷಿಯ ಸುದ್ದಿ.

ಇನ್ನು 924 ಶಾಲೆಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ 1569 ಶಾಲೆಗಳಲ್ಲಿ ಇಷ್ಟು ಫಲಿತಾಂಶ ದಾಖಲಾಗಿತ್ತು. ಈ ಬಾರಿ ದೊಡ್ಡ ಮಟ್ಟಕ್ಕೆ ಫಲಿತಾಂಶದಲ್ಲಿ ಕುಸಿತವಾಗಿರುವುದರ ಜತೆಗೆ ಶೇಕಡಾ 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯಲ್ಲೂ ಕುಸಿತವಾಗಿದೆ.

100ಕ್ಕೆ ನೂರು ಅಂಕ

100ಕ್ಕೆ ನೂರು ಅಂಕ

ಪ್ರಥಮ ಭಾಷೆ (125) -3232

ದ್ವಿತೀಯ ಭಾಷೆ (100) - 2371

ತೃತೀಯ ಭಾಷೆ (100) - 9757

ಗಣಿತ (100) - 1458

ವಿಜ್ಞಾನ (100) - 491

ಸಮಾಜ ವಿಜ್ಞಾನ (100) - 2953

English summary
Karnataka Secondary education Examination Board (KSEEB) announced SSLC board examination 2017 results on Friday, May 12. Here goes couple of highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X