ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮತ್ತೊಂದು ಪರಮಾಣು ಸ್ಥಾವರ ನಿರ್ಮಾಣ?

|
Google Oneindia Kannada News

ಬೆಂಗಳೂರು, ಮಾ.9 : ಕರ್ನಾಟಕದಲ್ಲಿ ಮತ್ತೊಂದು ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಅಣು ಸ್ಥಾವರ ನಿರ್ಮಾಣ ಕುರಿತು ಕೇಂದ್ರ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.

ಭಾರತದಲ್ಲಿ 12 ಪರಮಾಣು ಸ್ಥಾವರಗಳನ್ನು ನಿರ್ಮಾಣ ಮಾಡಲು ರಿಯಾಕ್ಟರ್‌ಗಳನ್ನು ಪೂರೈಕೆ ಮಾಡಲು ರಷ್ಯಾ ಆಸಕ್ತಿ ತೋರಿದೆ. ಕೇಂದ್ರ ಸರ್ಕಾರ ಅಣು ಸ್ಥಾವರ ನಿರ್ಮಾಣ ಕುರಿತು ಐದು ರಾಜ್ಯಗಳಿಗೆ ಪ್ರಸ್ತಾವನೆಯನ್ನು ಕಳುಹಿಸಿತ್ತು.[ಕೈಗಾದಲ್ಲಿ ಆರಂಭವಾಗುತ್ತೆ ಇನ್ನೆರಡು ಘಟಕ]

ಪಶ್ಚಿಮ ಬಂಗಾಳ, ಕೇರಳ ಮತ್ತು ಒರಿಸ್ಸಾ ರಾಜ್ಯಗಳು ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದು, ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಲು ಸಾಧ್ಯವಿಲ್ಲ ಎಂದು ಹೇಳಿವೆ. ಆದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ. [ಕೈಗಾ ಸ್ಥಾವರ ಹೊಗೆ ಆತಂಕ ಬೇಡ]

nuclear plant

ಎಲ್ಲಿ ಅಣುಸ್ಥಾವರ ನಿರ್ಮಾಣ : ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಈಗಾಗಲೇ ಪರಮಾಣು ವಿದ್ಯುತ್ ಸ್ಥಾವರವಿದೆ. ಸದ್ಯ ಮತ್ತೊಂದು ಘಟಕವನ್ನು ಆರಂಭವಾಗುವುದಾದದರೆ, ಯಾವ ಜಿಲ್ಲೆಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಘಟಕ ನಿರ್ಮಿಸಲು ಹೆಚ್ಚಿನ ನೀರಿನ ಅಗತ್ಯವಿದೆ. ಆದ್ದರಿಂದ ಯಾವ ಜಿಲ್ಲೆ ಆಯ್ಕೆ ಮಾಡಲಾಗುತ್ತದೆ ಎಂಬುದು ಸದ್ಯದ ಪ್ರಶ್ನೆ. [ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ, ಏಪ್ರಿಲ್ ನಿಂದ ಜಾರಿ]

ಕೈಗಾದಲ್ಲಿ ನಿರ್ಮಿಸಿರುವ ಪರಮಾಣು ಸ್ಥಾವರದ ಪರ-ವಿರೋಧ ಹೋರಾಟಗಳು ಈಗಲೂ ಜಾರಿಯಲ್ಲಿವೆ. ಇವುಗಳ ನಡುವೆಯೇ ಕರ್ನಾಟಕ ಸರ್ಕಾರ ಮತ್ತೊಂದು ಅಣು ಸ್ಥಾವರ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆಯೇ?. ಸರ್ಕಾರದ ಕಡೆಯಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.

English summary
Karnataka and Andhra Pradesh states shown interest to provide sites for Russian atomic power reactors in state. central government approached Kerala, West Bengal and Odisha state, but they not agreed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X