ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕೆದಾಟು ಯೋಜನೆ : ವಾಟಾಳ್ ಕೊಟ್ಟ ಎಚ್ಚರಿಕೆ ಏನು?

|
Google Oneindia Kannada News

ಬೆಂಗಳೂರು, ಏ. 18 : 'ಕರ್ನಾಟಕ ಸರ್ಕಾರ ಒಂಬತ್ತು ತಿಂಗಳಿನಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬೇಕು. ಇಲ್ಲವಾದರಲ್ಲಿ ನಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್' ಎಚ್ಚರಿಕೆ ನೀಡಿದರು.

ಟೌನ್‌ಹಾಲ್ ಮುಂಭಾಗದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಸ್ವಯಂ ಪ್ರೇರಿತವಾಗಿ ಬಂದ್‌ನಲ್ಲಿ ಪಾಲ್ಗೊಂಡು ಸಹಕಾರ ನೀಡಿದ ಎಲ್ಲಾ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದರು. ಕನ್ನಡಿಗರ ಹಕ್ಕನ್ನು ಕಸಿಯಲು ಯಾರಿದಂಲೂ ಸಾಧ್ಯವಿಲ್ಲ ಎಂದು ಘೋಷಿಸಿದರು. [ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]

Vatal Nagaraj

'ನಮ್ಮ ರಾಜ್ಯಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಆರಂಭಿಸಲು ತಮಿಳುನಾಡಿನ ಒಪ್ಪಿಗೆ ಏಕೆ? ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ಕನ್ನಡಿಗರ ಹಕ್ಕನ್ನು ಕಸಿಯುವ ಕುತಂತ್ರ ಮಾಡುವ ತಮಿಳುನಾಡಿಗೆ ನಮ್ಮ ಶಕ್ತಿಯನ್ನು ಪ್ರದರ್ಶಿಸಿ ತಿರುಗೇಟು ನೀಡಬೇಕಾಗಿದೆ' ಎಂದು ಕರೆ ನೀಡಿದರು. [ಉಪವಾಸ ಕುಳಿತರೂ ಅಡ್ಡಿ ಇಲ್ಲ, ನೀರು ಸಿಕ್ಕರೇ ಸಾಕು]

'ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವ ಒತ್ತಡಗಳಿಗೂ ಮಣಿಯಬಾರದು. ತಮಿಳುನಾಡಿನ ವಿರೋಧವನ್ನೂ ಲೆಕ್ಕಿಸದೆ ಅಣೆಕಟ್ಟು ನಿರ್ಮಿಸಬೇಕು ಎಂದು ಒತ್ತಾಯಿಸಿದ ವಾಟಾಳ್, 9 ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆ ಕೊಟ್ಟರು'. [ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ : ಮದ್ರಾಸಿ]

ಕರ್ನಾಟಕ ಬಂದ್ ಚಿತ್ರಗಳನ್ನು ನೋಡಿ

English summary
President of the Kannada Chalavali Vatal Paksha, Vatal Nagaraj on Saturday urged Karnataka government to begin Mekedatu dam project within 9 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X