ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿಲ್ಲ

|
Google Oneindia Kannada News

ಬೆಂಗಳೂರು, ಜ.24 : ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕರ್ನಾಟಕ ಸರ್ಕಾರ ಅದನ್ನು ಒಪ್ಪಿಲ್ಲ, ಅಧಿಸೂಚನೆಯನ್ನೂ ಹೊರಡಿಸಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಇತ್ತೀಚಿನ ಹುಲಿ ಗಣತಿ ಫಲಿತಾಂಶವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಮಂತ್ರಾಲಯ ನವದೆಹಲಿ ಘೋಷಣೆ ಮಾಡಿದೆ. ಅದರಂತೆ ಕರ್ನಾಟಕದಲ್ಲಿ ಅಂದಾಜು 406 ಹುಲಿಗಳಿದ್ದು, ದೇಶದಲ್ಲೇ ಹುಲಿಗಳ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನಗಳಿಸಿದೆ ಎಂದರು. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ramanath rai

ಬಂಡೀಪುರ, ನಾಗರಹೊಳೆ, ಭದ್ರಾ, ಅಣಶಿ-ದಾಂಡೇಲಿ ಮತ್ತು ಬಿಳಿಗಿರಿ ರಂಗನಬೆಟ್ಟ ಒಳಗೊಂಡಂತೆ ಒಟ್ಟು 9,329.87 ಚ.ಕಿ.ಮೀ. ಹುಲಿ ರಕ್ಷಿತ ಪ್ರದೇಶ ರಾಜ್ಯದಲ್ಲಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನನ, ಕಾವೇರಿ, ಮಲೈಮಹದೇಶ್ವರ, ಮೂಕಾಂಬಿಕ, ಸೋಮೇಶ್ವರ, ಬ್ರಹ್ಮಗಿರಿ, ಪುಷ್ಷಗಿರಿ, ತಲಕಾವೇರಿ ಹಾಗೂ ಭೀಮಗಡ ವನ್ಯಧಾಮಗಳಲ್ಲಿಯೂ ಹುಲಿಗಳಿವೆ ಎಂದು ಹೇಳಿದರು. [ಅರಣ್ಯ ಇಲಾಖೆಗೆ ವನ್ಯಜೀವಿ ಮಂಡಳಿ ಪತ್ರ]

ಹುಲಿಗಳ ಸಂರಕ್ಷಣೆಗೆ ಕ್ರಮ : ರಾಜ್ಯದಲ್ಲಿ ಹುಲಿಗಳು ಸಂರಕ್ಷಣೆಗಾಗಿ ಹುಲಿ ರಕ್ಷಣಾ ದಳಗಳ ಸ್ಥಾಪನೆ, ಮಳೆಗಾಲದಲ್ಲಿ ವಿಶೇಷ ಗಸ್ತು ತಿರುಗುವಿಕೆ, ಕಳ್ಳಬೇಟೆ ತಡೆ ಶಿಬಿರಗಳ ಸ್ಥಾಪನೆ ಹಾಗೂ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ ಮುಂತಾದ ಕ್ರಮಗಳನ್ನು ಹುಲಿಗಳ ಸಂರಕ್ಷಣೆಗಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದರು. [ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ]

ವನ್ಯಜೀವಿ ಹಾವಳಿ ಹೆಚ್ಚಾಗಿ ಕಂಡುಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಅವಶ್ಯಕತೆಗನುಗುಣವಾಗಿ ವನ್ಯಪ್ರಾಣಿಗಳನ್ನು ಹಿಮ್ಮೆಟ್ಟಿಸುವ ತಂಡ ( Anti Depredation Camp)ಗಳನ್ನು ರಚಿಸಿ ವನ್ಯಜೀವಿಗಳ ಹಾವಳಿ ನಿಯಂತ್ರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 110 ವಲಯ ಅರಣ್ಯಾಧಿಕಾರಿಗಳು, 113 ಉಪ ವಲಯ ಅರಣ್ಯಾಧಿಕಾರಿಗಳು, 329 ಅರಣ್ಯ ರಕ್ಷಕರು ಮತ್ತು 282 ಅರಣ್ಯ ವೀಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

English summary
Karnataka Forest minister B. Ramanath Rai said, State government not approved to declare Kudremukh National Park as a tiger reserve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X