ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ನಿಗ್ರಹ ದಳದ ಯಾವ ಕಚೇರಿ ಎಲ್ಲಿರುತ್ತದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 26 : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಕುರಿತು ಕರ್ನಾಟಕದಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಸರ್ಕಾರ ಎಸಿಬಿ ರಚನೆ ಕುರಿತು ಆದೇಶ ಹೊರಡಿಸಿದ್ದು, ಮುಂದಿನ ವಾರದಿಂದ ಎಸಿಬಿ ಕಾರ್ಯನಿರ್ವಹಣೆ ಆರಂಭಿಸಲಿದೆ.

ಎಸಿಬಿಯ ಕೇಂದ್ರ ಕಚೇರಿ ಬೆಂಗಳೂರಿನ ಖನಿಜ ಭವನದಲ್ಲಿರಲಿದೆ. ಪ್ರತಿ ಜಿಲ್ಲೆಯಲ್ಲಿಯೂ ಎಸಿಬಿ ದಳ ರಚನೆಯಾಗಲಿದ್ದು, ಡಿಎಸ್‌ಪಿ ದರ್ಜೆಯ ಅಧಿಕಾರಿ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. [ಸಂದರ್ಶನ : ಎಸಿಬಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]

vidhana soudha

ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಎಡಿಜಿಪಿ ಮತ್ತು ಐಜಿಪಿ ದರ್ಜೆಯ ಇಬ್ಬರು ಅಧಿಕಾರಿಗಳು ಎಸಿಬಿಯ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಎಸಿಬಿಯ ಎಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ. ಗಗನದೀಪ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಎಂ.ಎ. ಸಲೀಂ ಅವರನ್ನು ಐಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. [ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?]

ಮೈಸೂರಿನಲ್ಲಿ ಎಸಿಬಿಯ ದಕ್ಷಿಣ ವಿಭಾಗದ ಕೇಂದ್ರ ಕಚೇರಿ ಇರಲಿದೆ. ಪಶ್ಚಿಮ ವಿಭಾಗದ ಕಚೇರಿ ಮಂಗಳೂರಿನಲ್ಲಿ, ಪೂರ್ವ ವಿಭಾಗದ ಕಚೇರಿ ದಾವಣಗೆರೆಯಲ್ಲಿ ಮತ್ತು ನೈಋತ್ಯ ವಲಯದ ಕಚೇರಿ ಬೆಳಗಾವಿಯಲ್ಲಿ ಇರುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ವಿಭಾಗದ ಕಚೇರಿ ಮತ್ತು ಕಲಬುರಗಿಯಲ್ಲಿ ಈಶಾನ್ಯ ವಲಯದ ಕಚೇರಿ ಕೆಲಸ ನಿರ್ವಹಿಸಲಿದೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]

ಎಸಿಬಿ ರಚನೆ ಆದೇಶ : ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau- ACB) ರಚನೆ ಮಾಡಿ ಮಾರ್ಚ್ 15ರಂದು ಆದೇಶ ಹೊರಡಿಸಿದೆ. ಎಡಿಜಿಪಿ ಈ ದಳದ ಮುಖ್ಯಸ್ಥರಾಗಿರುತ್ತಾರೆ. ಎಸಿಬಿ ರಚನೆಯನ್ನು ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಎಸಿಬಿ ರಚನೆ ಮಾಡಲಾಗುತ್ತಿದೆ ಆರೋಪಿಸಿವೆ.

English summary
The Karnataka government will issue an official order to set up the Anti Corruption Bureau in the state. It will come to force next week once the government order is issued. The ACB will be headquartered at the Kanija Bhavan in Bengaluru. The ACB will have a unit at every district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X