ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಎಸ್‌ವೈ ಸಿಎಂ ಆಗಬೇಕಾ?, ವೆಂಕಯ್ಯ ನಾಯ್ಡು ಆಯ್ಕೆ ಮಾಡಬೇಡಿ'

|
Google Oneindia Kannada News

ಬೆಂಗಳೂರು, ಮೇ 24 : ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಬಿಜೆಪಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. 'ಕೊನೆ ಪಕ್ಷ ಕಸಗುಡಿಸುವ ವ್ಯಕ್ತಿಯನ್ನಾದರೂ ಕಳಿಸಿ. ಆದರೆ, ವೆಂಕಯ್ಯ ನಾಯ್ಡು ಅವರು ಬೇಡ' ಎಂದು ಪ್ರತಿಭಟನಾನಿರತರು ಘೋಷಣೆ ಕೂಗುತ್ತಿದ್ದಾರೆ. [ಕರ್ನಾಟಕದಿಂದ ರಾಜ್ಯಸಭೆಗೆ ಮತ್ತೆ ಎಂ ವೆಂಕಯ್ಯನಾಯ್ಡು]

karnataka rakshana vedike

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಟಿ.ಎ.ನಾರಾಯಣ ಗೌಡ ಅವರು, 'ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದಾದರೆ ಕನ್ನಡಿಗರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು. ಒಂದು ವೇಳೆ ವೆಂಕಯ್ಯ ನಾಯ್ಡು ಅವರನ್ನೇ ಆಯ್ಕೆ ಮಾಡಿದರೆ ಎಲ್ಲಾ ಬಿಜೆಪಿ ನಾಯಕರ ಮನೆ ಮುಂದೆ ಧರಣಿ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದರು. [ಏನಿದು ವೆಂಕಯ್ಯ ಸಾಕಯ್ಯ ಅಭಿಯಾನ?]

'18 ವರ್ಷದಿಂದ ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಬಿಜೆಪಿ ಗುಲಾಮಗಿರಿಯಲ್ಲಿ ಕೆಲಸ ಮಾಡಿದರೆ ಹೊರತು ಕರ್ನಾಟಕದ ಋಣ ತೀರಿಸಿಲ್ಲ. ಕಾವೇರಿ, ಕೃಷ್ಣಾ, ಕಳಸಾ ಬಂಡೂರಿ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಕರ್ನಾಟಕದ ಪರವಾಗಿ ಧ್ವನಿ ಎತ್ತಿಲ್ಲ' ಎಂದು ನಾರಾಯಣ ಗೌಡ ಆರೋಪಿಸಿದರು. [ಕಾಂಗ್ರೆಸ್, ಜೆಡಿಎಸ್ ನಿಂದ ರಾಜ್ಯಸಭೆ ಅಭ್ಯರ್ಥಿಗಳಾರು?]

karave protest

'ಬೇರೆ ರಾಜ್ಯದವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವುದು ಕನ್ನಡಗಿರ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರ. ಕರ್ನಾಟಕ ಬಿಜೆಪಿ ನಾಯಕರಿಗೆ ಕನ್ನಡಿಗರ ಬಗ್ಗೆ ಕಳಕಳಿ ಇದ್ದರೆ ನಿಮ್ಮ ಪಕ್ಷದಲ್ಲೇ ಇರುವ ಕನ್ನಡಿಗರನ್ನು ಆಯ್ಕೆ ಮಾಡಿ, ಕೊನೆ ಪಕ್ಷ ಕಸ ಗುಡಿಸುವವರನ್ನಾದರೂ ಕಳಿಸಿ' ಎಂದು ಒತ್ತಾಯಿಸಿದರು.

 karnataka

'ವೆಂಕಯ್ಯ ನಾಯ್ಡು ಅವರನ್ನು ಮೊದಲು ಆಂಧ್ರಪ್ರದೇಶಕ್ಕೆ ಕಳಿಸಿ, ಅಲ್ಲಿನ ಕಾರ್ಪೊರೇಷನ್ ಚುನಾವಣೆಯಲ್ಲಿ ಅವರು ಗೆದ್ದು ಬರಲಿ. ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡುವುದು ಬೇಡ ಎಂದು ನಾರಾಯಣ ಗೌಡರು ಆಗ್ರಹಿಸಿದರು.

ನಾಯ್ಡು ಹೆಸರು ಘೋಷಣೆ : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 11 ರಂದು ಚುನಾವಣೆ ನಡೆಯಲಿದೆ. ಕರ್ನಾಟಕ ಬಿಜೆಪಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿದೆ.

ದೊಡ್ಡ ಅಭಿಯಾನ ನಡೆದಿದೆ : ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಬಾರದು ಎಂದು ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಆಂದೋಲನ ನಡೆದಿದೆ. ಟ್ವಿಟ್ಟರಿನಲ್ಲಿ #GoBackVenkaiah ಮತ್ತು #venkayyasakayya ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ನಡೆಸಲಾಗಿದೆ. [#VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು]

English summary
The members of Karnataka Rakshana Vedike led by T.A .Narayan Gowda protest in-front of Karnataka BJP office at Malleshwaram, Bengaluru and demanded that BJP leaders should not elect Urban Development minister M. Venkaiah Naidu for Rajya Sabha from Karnataka assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X