ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ

By Madhusoodhan
|
Google Oneindia Kannada News

ಬೆಂಗಳೂರು, ಮೇ, 26: ಒಂದು ದಿನ ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೆ ಏನಾಗುತ್ತದೆ? ಹೌದು ಅಂಥದ್ದೊಂದು ದಿನ ಹತ್ತಿರ ಬಂದಿದೆ. ಹೌದು ಜೂನ್ 4 ರಂದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸ್ತಬ್ಧ ಮಾಡಲು ಪೊಲೀಸರೇ ಸಿದ್ಧತೆ ಮಾಡಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಕಿರುಕುಳ ಖಂಡಿಸಿ ರಾಜ್ಯದಾದ್ಯಂತ ಪೊಲೀಸ್ ಪೇದೆಗಳು ಪ್ರತಿಭಟನೆ ನಡೆಸಲಿದ್ದಾರೆ. ವಾರಕ್ಕೊಂದು ರಜೆ,ಕೆಲಸಕ್ಕೆ ತಕ್ಕ ಸಂಬಳ ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಜೂನ್ 4ರಂದು ಪ್ರತಿಭಟನೆ ನಡೆಸಲಿದೆ.[ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಶಾಕಿಂಗ್ ವರದಿ]

police

ಪ್ರತಿಭಟನೆ ಎಂದ ಮಾತ್ರಕ್ಕೆ ಪೊಲೀಸರು ಬೀದಿಗಿಳಿದು ಘೊಷಣೆ ಕೂಗುವುದಿಲ್ಲ. ಬದಲಾಗಿ ರಾಜ್ಯದ 50 ಸಾವಿರಕ್ಕೂ ಅಧಿಕ ಪೊಲೀಸರು ಸಾಮೂಹಿಕ ರಜೆ ತೆಗೆದುಕೊಳ್ಳಲಿದ್ದಾರೆ.[ಪುಟ್ಟ ಬಾಲಕಿನಿಗೆ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್]

ಒನ್ ಇಂಡಿಯಾದೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ ಶಶಿಧರ್, ಕಿರುಕುಳದ ರಜೆ ಹೆಸರಿನಲ್ಲಿ ರಜೆ ತೆಗೆದುಕೊಳ್ಳಲಿದ್ದೇವೆ. ನಮ್ಮ ಸಮಸ್ಯೆಗಳನ್ನು ಶಾಂತರೀತಿಯಿಂದ ಗೃಹ ಸಚಿವರು ಮತ್ತು ಸರ್ಕಾರದ ಮುಂದೆ ಇಡುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಸರ್ಕಾರ ನಮ್ಮ ಪ್ರಾಮಾಣಿಕ ಬೇಡಿಕೆಗಳಿಗೆ ಸ್ಪಂದಿಸಲೇಬೇಕಿದೆ ಎಂದು ಶಶಿಧರ್ ಒತ್ತಾಯ ಮಾಡಿದ್ದಾರೆ.

ಪೇದೆಗಳು ಕನಿಷ್ಠ ಮೂಲ ಸೌಕರ್ಯದಿಂದಲೂ ವಂಚಿತರಾಗಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಯಾರೂ ರಜೆಗೆ ಅರ್ಜಿ ಹಾಕಿಲ್ಲ
ಯಾರೂ ರಜೆಗೆ ಅರ್ಜಿ ಹಾಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಪೊಲೀಸರು ಸಾಮೂಹಿಕ ರಜೆಗೆ ಮುಂದಾದರೆ ಸರ್ಕಾರ ಮತ್ತು ಇಲಾಖೆ ಎಸ್ಮಾ (Essential Services Maintenance Act 1968) ಜಾರಿಗೆ ಮುಂದಾದರೂ ಆಶ್ಚರ್ಯವಿಲ್ಲ.

English summary
Never before this happened in the history of Karnataka. Police constables going on mass leave to stamp protest against harassment by senior officers. Akhila Karnataka Police Maha Sangha (AKPMS) claims that over 50,000 cops would go on leave on June 4 to mark protest against harassment to constables by the senior police officers. Akhila Karnataka Police Maha Sangha (AKPMS) claims that over 50,000 cops would go on leave on June 4 to mark protest against harassment to constables by the senior police officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X