ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಲವ್ ಅಫೇರ್ ಎಲ್ಲಾ ಕಟ್ಟುಕಥೆ ಎಂದ ಸಿಬಿಐ

By Mahesh
|
Google Oneindia Kannada News

ಬೆಂಗಳೂರು, ಮೇ.21: ಐಎಎಸ್ ಅಧಿಕಾರಿ ರವಿ ಸಾವಿನ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹಬ್ಬುವಂತೆ ಮಾಡಿ ತನಿಖೆ ದಿಕ್ಕು ತಪ್ಪಿಸಲು ಸರ್ಕಾರಿ ಅಧಿಕಾರಿಗಳು ಯತ್ನಿಸಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಡಿಕೆ ರವಿ ಶವವನ್ನು ನೋಡಿ ಬಂದ ಮರುಕ್ಷಣವೇ 'ಇದೊಂದು ಆತ್ಮಹತ್ಯೆ ಪ್ರಕರಣ' ಎಂದು ಹೇಳಿಕೆ ನೀಡಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿ ಚರ್ಚೆಯಾಯಿತು. ಇದಾದ ಬಳಿಕ ವ್ಯವಸ್ಥಿತವಾಗಿ ರವಿ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸಲಾಯಿತು. [ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]

ಪೇದೆ ಅಮಾನತು: ಡಿಕೆ ರವಿ ವಾಸಿಸುತ್ತಿದ್ದ ಸೈಂಟ್ ಜಾನ್ ವುಡ್ ಅಪಾರ್ಟ್ಮೆಂಟ್ ಗೆ ಕೊನೆ ಬಾರಿ ತೆರಳಿದ್ದ ಪೊಲೀಸ್ ಪೇದೆಯೇ ಎಲ್ಲರಿಗೂ ವಾಟ್ಸಪ್ ಮೂಲಕ ಸಂದೇಶ ಕಳಿಸುತ್ತಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಆಗಿನ್ನೂ ಸಿಐಡಿ ತನಿಖೆ ಜಾರಿಯಲ್ಲಿತ್ತು. [ಡಿಕೆ ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!]

ಸಿಐಡಿಯಿಂದ ಕೇಸು ಸಿಬಿಐಗೆ ಹಸ್ತಾಂತರಗೊಂಡು ತನಿಖೆ ಆರಂಭಗೊಳ್ಳುವ ಮುನ್ನ ಪೇದೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು. [ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?]

2009ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ.ರವಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಮಾ. 16ರಂದು ಅವರ ನಿವಾಸದಲ್ಲಿ ಶವ ಪತ್ತೆಯಾಗಿತ್ತು. ಸಿಐಡಿ ತನಿಖೆಯಲ್ಲಿ ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಡಿಕೆ ರವಿ ಪ್ರಕರಣವನ್ನು ಹೇಗೆ ವ್ಯವಸ್ಥಿತವಾಗಿ ದಿಕ್ಕು ತಪ್ಪಿಸಲಾಯಿತು ಎಂಬುದರ ಬಗ್ಗೆ ಮುಂದೆ ಓದಿ... [ತನಿಖೆ: ಜಾರಿ ನಿರ್ದೇಶನಾಲಯ ಎಂಟ್ರಿ]

44 ಬಾರಿ ಫೋನ್ ಕಾಲ್ ಕಥೆ

44 ಬಾರಿ ಫೋನ್ ಕಾಲ್ ಕಥೆ

ಕರ್ನಾಟಕ ಸರ್ಕಾರದ ವತಿಯಿಂದಲೇ ಹಬ್ಬಿದ ಸುದ್ದಿ ಇದಾಗಿತ್ತು. ಮಹಿಳಾ ಅಧಿಕಾರಿಗೆ ಡಿಕೆ ರವಿ ಅವರು ಸಾಯುವ ದಿನ 44 ಬಾರಿ ಫೋನ್ ಕರೆ ಮಾಡಿದ್ದರು ಎಂಬ ವಿಷಯ ಹಲವರ ಹುಬ್ಬೇರಿಸಿತ್ತು. ಪ್ರತಿಪಕ್ಷಗಳು ಈ ಬಗ್ಗೆ ಕಿಡಿಕಾರಿದ್ದವು.

ಈಗ ಇದೆಲ್ಲವೂ ಅಪ್ಪಟ ಸುಳ್ಳು ಎಂದು ಸಾಬೀತಾಗಿದೆ. ಸಾಯುವ ದಿನ ವಾಟ್ಸಪ್ ಸಂದೇಶ ಕಳಿಸಿದ್ದು, ಹಾಗೂ ಕರೆ ಮಾಡಿದ್ದು ಒಂದೇ ಬಾರಿ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ವಾಟ್ಸಪ್ ಸಂದೇಶ ಸಿಐಡಿ ಕಡೆಯಿಂದ

ವಾಟ್ಸಪ್ ಸಂದೇಶ ಸಿಐಡಿ ಕಡೆಯಿಂದ

ವಾಟ್ಸಪ್ ಸಂದೇಶ ಸಿಐಡಿ ಕಡೆಯಿಂದಲೇ ಬಹಿರಂಗಗೊಂಡಿದೆ. ರವಿ ಅವರ ವೈಯಕ್ತಿಕ ವಿಚಾರಗಳು ಬಹಿರಂಗಗೊಳಿಸುವಲ್ಲಿ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಇದರ ಹಿಂದಿನ ಉದ್ದೇಶ ಕೇವಲ ತನಿಖೆಯ ದಿಕ್ಕು ತಪ್ಪಿಸುವುದೇ? ಅಥವಾ ಮತ್ತೆ ಏನಾದರೂ ತಂತ್ರ ಇದೆಯೇ? ಎಂಬುದರ ಬಗ್ಗೆ ಸಿಬಿಐ ಗಮನ ಹರಿಸುತ್ತಿದೆ.

ಅಟಾಪ್ಸಿ ಪರೀಕ್ಷೆ ಅಗತ್ಯ

ಅಟಾಪ್ಸಿ ಪರೀಕ್ಷೆ ಅಗತ್ಯ

ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿಸುವ ಮೂಲಕ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದಿಂದ ಡಬ್ಬಲ್ ದೃಢತೆ ಪ್ರಮಾಣ ಪತ್ರ ಪಡೆದುಕೊಂಡ ಮೇಲೆ ರವಿ ಅವರು ಅತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ಪ್ರಕಟಿಸಲಿದೆ. ಇನ್ನೂ ಅಗತ್ಯ ಬಿದ್ದರೆ ಶವವನ್ನು ಸಮಾಧಿಯಿಂದ ಹೊರ ತೆಗೆದು ಮರು ಮರಣೋತ್ತರ ಪರೀಕ್ಷೆಗೊಳಪಡಿಸುವ ಸಾಧ್ಯತೆಯೂ ಇದೆ. ವಿಸೇರಾ ಸ್ಯಾಂಪಲ್ ಸದ್ಯಕ್ಕೆ ಪರೀಕ್ಷೆಗೊಳಪಡುತ್ತಿದೆ.

ಅದರೆ, ಸಾವಿಗೆ ಕಾರಣ ಏನು?

ಅದರೆ, ಸಾವಿಗೆ ಕಾರಣ ಏನು?

ಡಿಕೆ ರವಿ ಹಾಗೂ ಅವರ ಪಾಲುದಾರ ಆರ್ ಹಾಗೂ ಎಚ್ ಹೆಸರಿನ ಸಂಸ್ಥೆ ಮೂಲಕ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಸಲು ಯೋಜಿಸಿದ್ದು, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು, ಎಸ್ ಸಿ/ಎಸ್ ಟಿ ಕೋಟಾದಲ್ಲಿ ಮಂಜೂರಾದ ಭೂಮಿಗೆ ಕೈ ಹಾಕಿದ್ದು, 50 ಎಕರೆ ಭೂಮಿಯನ್ನು ಪಡೆದು ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು ಎಲ್ಲವೂ ಹೊಸ ತಿರುವು ನೀಡುತ್ತಿದೆ. ಇನ್ಮುಂದೆ ಸಿಬಿಐ ಜೊತೆಗೆ ಜಾರಿ ನಿರ್ದೇಶನಾಲಯ ಕೂಡಾ ತನಿಖೆಗೆ ತೊಡಗಿಕೊಳ್ಳಲಿದೆ.

ಸಾವಿನ ನಿಗೂಢತೆ: ಸಿದ್ದುಗೆ ಸತ್ಯ ಗೊತ್ತಾಗಿದ್ಯಾ?

ಸಾವಿನ ನಿಗೂಢತೆ: ಸಿದ್ದುಗೆ ಸತ್ಯ ಗೊತ್ತಾಗಿದ್ಯಾ?

ಪ್ರಕರಣದ ಸತ್ಯಾಸತ್ಯತೆ ತಿಳಿಯುವುದರ ಬಗ್ಗೆ ಮಾತನಾಡದೇ ರವಿ ವೈಯಕ್ತಿಕ ಬದುಕಿನ ವಿವರಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಿ, ವೈಯಕ್ತಿಕ ಕಾರಣಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದ್ದರ ಹಿಂದಿನ ಉದ್ದೇಶವೇನು? ತನಿಖೆಗೂ ಮುನ್ನ ಸತ್ಯ ಗೊತ್ತಿದೆ ಎಂದು ಸಿದ್ದರಾಮಯ್ಯ ಬಿಂಬಿಸಿದ್ದು ಏಕೆ? ಇದು ತನಿಖೆ ದಿಕ್ಕು ತಪ್ಪಿಸುವ ಕಾರ್ಯತಂತ್ರವೇ? ತನಿಖೆ ಹಂತದಲ್ಲೇ ಖಾಸಗಿ ಮಾಹಿತಿಗಳು ಬಹಿರಂಗಗೊಳ್ಳುತ್ತಿರುವುದೇಕೆ? ಎಂಬ ಪ್ರಶ್ನೆಗಳು ಹಾಗೆ ಉಳಿದಿವೆ

ರಿಯಲ್ ಎಸ್ಟೇಟ್ ಅಲ್ಲದೆ ಮರಳು ಮಾಫಿಯಾ?

ರಿಯಲ್ ಎಸ್ಟೇಟ್ ಅಲ್ಲದೆ ಮರಳು ಮಾಫಿಯಾ?

ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿಗೆ ರಿಯಲ್ ಎಸ್ಟೇಟ್ ದಂಧೆ ಅಲ್ಲದೆ ಬೇರೆ ಯಾವ ಕಾರಣ ಇದೆ? ಡಿಕೆ ರವಿ ಸಾವು ಆತ್ಮಹತ್ಯೆಯೋ? ಕೊಲೆಯೋ? ರವಿ ಸಾವಿನ ಹಿಂದೆ ಯಾವ ಮಾಫಿಯಾ ಕೈವಾಡವಿದೆ? ಎಂಬ ಬಲವಾಗಿ ಕೇಳಿ ಬಂದಿದೆ. ಅದರೆ, ಜನರ ಆಕ್ರೋಶ, ದಕ್ಷ ಅಧಿಕಾರಿಯ ಸಾವಿನ ನಂತರವೂ ಮರಳು ಮಾಫಿಯಾ ದಂಧೆ ಹತ್ತಿಕ್ಕಲು ಸುಲಭಕ್ಕೆ ಸಾಧ್ಯವಿಲ್ಲ. [ವಿವರ ಇಲ್ಲಿ ಓದಿ]

English summary
Karnataka officials planted rumours about DK Ravi's alleged affair, says CBI. Theofficials said that a preliminary probe showed Ravi had made only one call to his batch-mate on March 16, the day he was found hanging at his home in Bengaluru. This contradicted statements made by state officials, who had alleged that he had made 44 calls on that date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X