ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಬುಧವಾರದ ತುಣುಕು ಸುದ್ದಿಗಳು

|
Google Oneindia Kannada News

ಬೆಂಗಳೂರು, ಅ. 15 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 2 ಗಂಟೆ : ಕನ್ನಡ ಮಾತನಾಡಲು ಬರುವುದಿಲ್ಲವೆಂದ ಮಣಿಪುರಿ ಮೂಲದ ವಿದ್ಯಾರ್ಥಿ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ. ಈ ಕುರಿತು ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಯ 1 ಗಂಟೆ : ನಟಿ ಮೈತ್ರಿಯಾ ಗೌಡ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣದ ವಿಚಾರಣೆಯನ್ನು ಕೌಟುಂಬಿಕ ನ್ಯಾಯಾಲಯ ಅ.21ಕ್ಕೆ ಮುಂದೂಡಿದೆ.

ಸಮಯ 12 ಗಂಟೆ : ರಾಘವೇಶ್ವರ ಶ್ರೀಗಳ ವಿಚಾರಣೆಯನ್ನು ಗುರುವಾರ ನಡೆಸುವುದಾಗಿ ಸಿಐಡಿ ಅಧಿಕಾರಿಗಳು ಹೇಳಿದ್ದು, ವಿಚಾರಣೆಗೆ ಹಾಜರಾಗುವಂತೆ ಶ್ರೀಗಳಿಗೆ ಸೂಚನೆ ನೀಡಿದ್ದಾರೆ.

ಸಮಯ 11 ಗಂಟೆ : ರಾಸಲೀಲೆ ಪ್ರಕರಣದ ವಿಚಾರಣೆಗಾಗಿ ನಿತ್ಯಾನಂದ ಸ್ವಾಮಿ ಮತ್ತು ಆತನ ಐವರು ಶಿಷ್ಯರು ರಾಮನಗರ ಜೆಎಂಎಫ್‌ಸಿ ಕೋರ್ಟ್‌ ಮುಂದೆ ಹಾಜರಾಗಿದ್ದಾರೆ.

ಸಮಯ 10.49 : ಮಂಗಳವಾರ ಮಧ್ಯರಾತ್ರಿ­ಯಿಂದಲೇ ಜಾರಿಗೆ ಬರುವಂತೆ ನಗರದಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ರೂ1.32 ಇಳಿಕೆಯಾಗಿದೆ. ನಗರದ ಒಳಭಾಗದ ಬಂಕ್‌ಗಳಲ್ಲಿ ದರ 73.10 ಆಗಿದ್ದರೆ, ನಗರದ ಹೊರ ಭಾಗದ ಬಂಕ್‌ಗಳಲ್ಲಿ 72.54 ರೂ. ಆಗಿದೆ.

ಸಮಯ 10 ಗಂಟೆ : ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಸೆಷನ್ಸ್ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. [ಸಿಐಡಿಯಿಂದ ರಾಘವೇಶ್ವರ ಶ್ರೀ ವಿಚಾರಣೆ ]

ಸಮಯ 9 ಗಂಟೆ : ರೈತರಿಗಾಗಿ ಭತ್ತ ಖರೀದಿ ಮಾಡಿರುವುದರಲ್ಲಿ ಅವ್ಯಹಾರವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. 12.5 ಕೋಟಿ ರೂ. ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕೆಎಫ್‌ಸಿಸಿಯ ಮೂವರು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಸಮಯ 8.40 : ಸದಾಶಿವನಗರದಲ್ಲಿ ಅಗ್ನಿ ಆಕಸ್ಮಿಕ, ಮೂರು ಅಂತಸ್ತಿನ ವೈಬ್ಸ್ ಬ್ಯೂಟಿ ಪಾರ್ಲರ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, 5 ಅಗ್ನಿ ಶಾಮಕ ದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ.

ಸಮಯ 8 ಗಂಟೆ : ನಟಿ ಮೈತ್ರಿಯಾ ಗೌಡ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣದಲ್ಲಿ ಮತ್ತೊಮ್ಮೆ ಕಾನೂನು ಸಮರ ಆರಂಭವಾಗಿದ್ದು, ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ನಟಿ ಮೈತ್ರಿಯಾ ಗೌಡ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

Karnataka

ಸಮಯ 7.30 : ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ವಿಚಾರಣೆ ಇಂದು ನಡೆಯಲಿದೆ. ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ಮತ್ತು ಧ್ವನಿ ಪರೀಕ್ಷೆ ವರದಿ ಸಿಐಡಿ ಕೈ ಸೇರಿದ್ದು, ಅದನ್ನು ಸಿಐಡಿ ಪೊಲೀಸರು ಇಂದು ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ. ನಿತ್ಯಾನಂದ ಸ್ವಾಮಿ ಸಹ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

English summary
Karnataka top news in brief for the day : Mythriya Gowda moved to Family Court even after Karthik Gowda son of Union Railway Minister DV Sadananda Gowda got anticipatory bail in rape and cheating case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X