ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತು ಸುಣ್ಣವಾದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು

By Mahesh
|
Google Oneindia Kannada News

ಬೆಂಗಳೂರು, ಡಿ.30: ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ಸಿಗೆ ಬಂಡಾಯ ಅಭ್ಯರ್ಥಿಗಳ ಫಲಿತಾಂಶದ ಮೇಲೆ ಕಣ್ಣಿರಿಸಿದ್ದರು. ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್ ನಾಯಕರ ಪೈಕಿ ದಯಾನಂದ ರೆಡ್ಡಿ ಹಾಗೂ ಜಯಪ್ರಕಾಶ್ ರೆಡ್ಡಿ ಅವರು ಸೋಲಿನ ಕಹಿ ಉಂಡಿದ್ದಾರೆ.

ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಮೂವರು ನಾಯಕರನ್ನು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್ ಛಬ್ಬಿ ಮನವೊಲಿಸಿ, ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ.[ಪರಿಷತ್ ಫೈಟ್ : ಫಲಿತಾಂಶ ಅಪ್ಡೇಟ್ಸ್]

Karnataka MLC Election 2015 Results

'ನಾವು ಅಂಥ ತಪ್ಪೇನೂ ಮಾಡಿಲ್ಲ' 'ಕಾಂಗ್ರೆಸ್‌ ಪಕ್ಷದ ಬೈಲಾ ಪ್ರಕಾರ, ಉಚ್ಚಾಟನೆ ಮಾಡಬೇಕಾದರೆ ಕಾರಣ ಕೇಳಿ ನೋಟಿಸ್‌ ಕೊಟ್ಟು ಸ್ಪಷ್ಟನೆ ಪಡೆದು ಎಐಸಿಸಿಗೆ ಶಿಫಾರಸು ಮಾಡಬೇಕಾಗುತ್ತದೆ. ಆದರೆ, ಯಾವುದೇ ಪ್ರಕ್ರಿಯೆ ನಡೆಸದೇ ಉಚ್ಚಾಟನೆ ಮಾಡಲಾಗಿದೆ. ಉಚ್ಚಾಟನೆಗೊಳ್ಳುವಂತಹ ಚಟುವಟಿಕೆಯನ್ನು ನಡೆಸಿಲ್ಲ' ಎಂದು ದಯಾನಂದ ರೆಡ್ಡಿ ಅವರು ಹೇಳಿದ್ದಾರೆ.[ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]

ಬಂಡಾಯ ಅಭ್ಯರ್ಥಿಗಳು ಪಕ್ಷದಿಂದ ಉಚ್ಚಾಟನೆ 'ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಮೂವರು ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಹರಿಕೃಷ್ಣ ಬಂಟ್ವಾಳ್ ಅವರು ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದರು.

Jayaprakash Hegde

92 ಮತಗಳನ್ನು ಪಡೆದು ಸೋತು ಸುಣ್ಣವಾದ ದಯಾನಂದ ರೆಡ್ಡಿ: ಬೆಂಗಳೂರು ನಗರ ಕ್ಷೇತ್ರದಲ್ಲಿ ಎಂ.ನಾರಾಯಣ ಸ್ವಾಮಿ 1,394, ದೊಡ್ಡ ಬಸವರಾಜು 1,302, ದಯಾನಂದ ರೆಡ್ಡಿ 94 ಮತಗಳನ್ನು ಪಡೆದಿದ್ದಾರೆ.[ಎಂಎಲ್ಸಿ ಚುನಾವಣೆ ಶೇ 99.60 ಮತದಾನದ ಅಂದಾಜು]

ದಕ್ಷಿಣ ಕನ್ನಡ -ಉಡುಪಿ ದ್ವಿಸದಸ್ಯ ಕ್ಷೇತ್ರದ ಫಲಿತಾಂಶ: ಕಾಂಗ್ರೆಸ್ಸಿನ ಕೆ ಪ್ರತಾಪ್ ಚಂದ್ರಶೆಟ್ಟಿ 2298 ಪ್ರಾಶಸ್ತ್ಯ ಮತ ಗಳಿಸಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಎರಡನೇ ಪ್ರಾಶಸ್ತ್ಯ ಮತ ಪಡೆದು 3100 ಮತಗಳಿಸಿ ಗೆದ್ದಿದ್ದಾರೆ. ಬಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು 1251 ಪಡೆದು ಹಿನ್ನದೆ ಅನುಭವಿಸಿದ್ದು, ಸೋಲು ಖಚಿತವಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Karnataka Congress expelled K. Jayaprakash Hegde, Dayanand Reddy, K. Harikrishna Bantwal from the party for 6 years for contesting against the partys official candidates in legislative council elections. All rebel candidates bite the dust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X