ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಂಎಫ್: ಹಾಲಿನ ಖರೀದಿ ದರ 1 ರಿಂದ 1.50 ರೂ ಇಳಿಕೆ

By Vanitha
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್, 29 : ಕರ್ನಾಟಕ ಹಾಲು ಮಹಾಮಂಡಳಿಯ ವ್ಯಾಪ್ತಿಯ 14 ಒಕ್ಕೂಟಗಳ ಪೈಕಿ 11 ಒಕ್ಕೂಟಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಇಳಿಕೆ ಮಾಡಲಾಗಿದೆ. ಪ್ರತಿ ಲೀಟರ್ ಗೆ 1 ರಿಂದ 1.50 ರೂ ಕಡಿಮೆಯಾಗಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಹಾಲಿನ ಪುಡಿ ಮಾರಾಟ ದರ ಕಡಿಮೆಯಾಗಿದೆ. ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಈ ನಷ್ಟವನ್ನು ಸರಿದೂಗಿಸುವ ಸಲುವಾಗಿ ಹಾಲು ಖರೀದಿ ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ಮಹಾಮಂಡಳಿ ತಿಳಿಸಿದೆ.[ಆನ್ ಲೈನ್ ಮೂಲಕವೂ ನಂದಿನಿ ಹಾಲು ಲಭ್ಯ]

Karnataka Milk Federation (KMF) has decresed milk prices

ಧಾರವಾಡ ಹಾಲು ಒಕ್ಕೂಟ ರೈತರಿಂದ ಶೇಖರಿಸುವ ಹಾಲಿಗೆ ಲೀಟರ್ 1 ರೂ ಕಡಿಮೆ ಮಾಡಿದೆ. ಈಗಾಗಲೇ ಸೆಪ್ಟೆಂಬರ್ 26ರಿಂದ ನೂತನ ಹಾಲಿನ ದರ ಜಾರಿಗೆ ತರಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್ ಸುರೇಶ್ ನಾಯಕ್ ತಿಳಿಸಿದ್ದಾರೆ.

ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯ ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿತ್ಯ 2.60 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲಿನ ಪುಡಿ ಮಾರಾಟದರ ಏರಿಕೆಯಾದರೆ, ಹಾಲಿನ ಖರೀದಿ ದರವನ್ನೂ ಏರಿಸಲಾಗುತ್ತದೆ ಎಂದು ಸುರೇಶ್ ನಾಯಕ್ ಹೇಳಿದ್ದಾರೆ.

11 ಒಕ್ಕೂಟಗಳಲ್ಲಿ ಪ್ರತಿ ಲೀಟರ್ ಗೆ ನೂತನವಾಗಿ ಜಾರಿಗೆ ಬಂದಿರುವ ಹಾಲಿನ ದರದಲ್ಲಿ ಒಂದು ಅಥವಾ ಎರಡು ರೂಪಾಯಿ ಕಡಿಮೆಯಾಗಿದ್ದು ಬೆಲೆ ಇಂತಿದೆ.

* ಹಾಸನದಲ್ಲಿ ಒಂದು ಲೀಟರ್ ಹಾಲಿಗೆ - 17.20 ರೂ

* ಮಂಡ್ಯದಲ್ಲಿ ಒಂದು ಲೀಟರ್ ಹಾಲಿಗೆ - 19.17 ರೂ

* ಮೈಸೂರಿನಲ್ಲಿ ಒಂದು ಲೀಟರ್ ಹಾಲಿಗೆ - 19 ರೂ

* ಶಿವಮೊಗ್ಗದಲ್ಲಿ ಒಂದು ಲೀಟರ್ ಹಾಲಿಗೆ - 20 ರೂ

* ವಿಜಯಪುರದಲ್ಲಿ ಒಂದು ಲೀಟರ್ ಹಾಲಿಗೆ - 20.42 ರೂ

* ತುಮಕೂರಿನಲ್ಲಿ ಒಂದು ಲೀಟರ್ ಹಾಲಿಗೆ - 18.84 ರೂ

* ಬೆಂಗಳೂರಿನಲ್ಲಿ ಒಂದು ಲೀಟರ್ ಹಾಲಿಗೆ - 21.50 ರೂ

* ಕೋಲಾರದಲ್ಲಿ ಒಂದು ಲೀಟರ್ ಹಾಲಿಗೆ - 21.50 ರೂ

* ಧಾರವಾಡದಲ್ಲಿ ಒಂದು ಲೀಟರ್ ಹಾಲಿಗೆ - 20.12 ರೂ

* ಬೆಳಗಾವಿಯಲ್ಲಿ ಒಂದು ಲೀಟರ್ ಹಾಲಿಗೆ - 20.60 ರೂ

* ಚಾಮರಾಜನಗರದಲ್ಲಿ ಒಂದು ಲೀಟರ್ ಹಾಲಿಗೆ - 19 ರೂ

English summary
Karnataka Milk Federation (KMF) has decresed milk prices by 1 or 1.50 rupee. Prices is decreased only 11 districts like Hassan, Mandya, Mysuru, shivamogga, Vijayapura, Tumakuru, Bengaluru, Kolara, Dharawad, Belagavi, Chamaraja Nagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X