ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 29 : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇ.10 ರಷ್ಟು ಪ್ರವೇಶ ಶುಲ್ಕ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಸಭೆಯಲ್ಲಿ ಶುಲ್ಕ ಏರಿಕೆಗೆ ನಿರ್ಧರಿಸಲಾಗಿದ್ದು, ಈ ಶುಲ್ಕ ಮುಂದಿನ ಮೂರು ವರ್ಷಗಳಿಗೂ ಅನ್ವಯವಾಗಲಿದೆ.

Karnataka medical and dental courses fee 10 percent hike

2017-18ನೇ ಸಾಲಿಗೆ ಎಂಬಿಬಿಎಸ್ ಕೋರ್ಸ್ ಶುಲ್ಕ ಸರ್ಕಾರಿ ಕಾಲೇಜುಗಳಲ್ಲಿ 70,000 ರು. ರಿಂದ 77,000 ರು. ಮತ್ತು ಖಾಸಗಿ ಕಾಲೇಜುಗಳ ಶುಲ್ಕ 5.75 ಲಕ್ಷ ರು.ರಿಂದ 6.35 ಲಕ್ಷ ರು. ಏರಿಕೆ ಆಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶರಣ ಪ್ರಕಾಶ್ ಪಾಟೀಲ್, "ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ವರ್ಷ 350 ಸೀಟುಗಳನ್ನು ಹೆಚ್ಚಿಸಲಾಗಿದ್ದು, ಜುಲೈ 05 ರಂದು ಕೌನ್ಸಿಲಿಂಗ್ ನಡಯಲಿದೆ" ಎಂದು ಹೇಳಿದರು.

ಹಾಸನ, ಮೈಸೂರು, ಮಂಡ್ಯ, ಶಿವವೊಗ್ಗ, ಬೀದರ್ ಮತ್ತು ರಾಯಚೂರು ಮೆಡಿಕಲ್ ಕಾಲೇಜುಗಳ ಸೀಟುಗಳನ್ನು 100 ರಿಂದ 150ಕ್ಕೆ ಹೆಚ್ಚಿಸಲಾಗಿದ್ದು, ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನ ಸೀಟುಗಳ ಸಂಖ್ಯೆ 150 ರಿಂದ 200 ವರೆಗೆ ಹೆಚ್ಚಿಸಲಾಗುವುದು ಎಂದರು.

English summary
There will be a 10 per cent hike in the fee for MBBS courses in karnataka government and private medical colleges over the next three years. This was decided at a meeting between representatives of private medical colleges and Karnataka's medical education minister Dr Sharanprakash Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X