{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/karnataka-lottery-scam-cbi-rejects-to-take-probe-095061.html" }, "headline": "ಲಾಟರಿ ಹಗರಣ ತನಿಖೆಯಿಂದ ಸಿಬಿಐ ಹಿಂದಕ್ಕೆ?", "url":"http://kannada.oneindia.com/news/karnataka/karnataka-lottery-scam-cbi-rejects-to-take-probe-095061.html", "image": { "@type": "ImageObject", "url": "http://kannada.oneindia.com/img/1200x60x675/2015/07/05-1436088642-cbi.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/07/05-1436088642-cbi.jpg", "datePublished": "2015-07-05 15:02:54", "dateModified": "2015-07-05T15:02:54+05:30", "author": { "@type": "Person", "url": "https://kannada.oneindia.com/authors/madhusoodhan.html", "name": "Madhusoodhan" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "Karnataka: Lottery has been completely banned in the state since 2007. But it is a different matter that it goes on unofficially still.", "keywords": "Karnataka Lottery scam, CBI rejects to take probe?, ಲಾಟರಿ ಹಗರಣ ತನಿಖೆಯಿಂದ ಸಿಬಿಐ ಹಿಂದಕ್ಕೆ?", "articleBody":"ಬೆಂಗಳೂರು, ಜು. 05: ಲಾಟರಿ ಹಗರಣದ ತನಿಖೆ ಕೈಗೆತ್ತಿಕೊಳ್ಳಲು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆಕೆಲ ಅಡಚಣೆಗಳು ಎದುರಾಗಿವೆ. ಸಿಬಿಐ ಅಧಿಕಾರಿಗಳಿಗೆ ಎಲ್ಲಿಂದ ತನಿಖೆ ಆರಂಭ ಮಾಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.ರಾಜ್ಯದಲ್ಲಿ 2007ರಲ್ಲೇ ಲಾಟರಿ ನಿಷೇಧವಾಗಿದ್ದು, ಅಂದಿನಿಂದಲೇ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸಿಬಿಐಗೆ ಮಾಡಿದ್ದ ಶಿಫಾರಸಿನಲ್ಲಿ ಹೇಳಿತ್ತು. ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯು ಇನ್ನೂ ಕೇಂದ್ರ ಗೃಹ ಸಚಿವಾಲಯದ ಮಟ್ಟದಲ್ಲೇ ಇದೆ. ಪ್ರಕರಣ ಸುದೀರ್ಘ& zwnj ಅವಧಿಯಿಂದ ಕೂಡಿರುವುದರಿಂದ ತನಿಖೆ ನಡೆಸಲು ಸಿಬಿಐ ನಿರಾಕರಿಸಿದೆ ಎಂದು ಹೇಳಲಾಗಿದೆ. ಒಂದಂಕಿ ಲಾಟರಿ ಹಗರಣ, ಸಿಬಿಐ ತನಿಖೆ ಎಲ್ಲಿಗೆ ಬಂತು?ಕಡಿಮೆ ಅವಧಿಯ ಪ್ರಕರಣಗಳನ್ನು ಮಾತ್ರ ಸಿಬಿಐ ಸಾಮಾನ್ಯವಾಗಿ ತನಿಖೆಗೆ ಎತ್ತಿಕೊಳ್ಳುತ್ತದೆ. ಎಂಟು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರಕರಣ ತನಿಖೆ ನಡೆಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಸಿಬಿಐ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.ಲಾಟರಿ ಹಗರಣ ಕಿಂಗ್ ಪಿನ್ ಪುತ್ರ ಬಿಜೆಪಿಗೆ ಸೇರ್ಪಡೆಒಂದಕಿ ಲಾಟರಿ ಹಗರಣದಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಶಿಫಾರಸು ಮಾಡಿತ್ತು." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಟರಿ ಹಗರಣ ತನಿಖೆಯಿಂದ ಸಿಬಿಐ ಹಿಂದಕ್ಕೆ?

|
Google Oneindia Kannada News

ಬೆಂಗಳೂರು, ಜು. 05: ಲಾಟರಿ ಹಗರಣದ ತನಿಖೆ ಕೈಗೆತ್ತಿಕೊಳ್ಳಲು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆಕೆಲ ಅಡಚಣೆಗಳು ಎದುರಾಗಿವೆ. ಸಿಬಿಐ ಅಧಿಕಾರಿಗಳಿಗೆ ಎಲ್ಲಿಂದ ತನಿಖೆ ಆರಂಭ ಮಾಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ 2007ರಲ್ಲೇ ಲಾಟರಿ ನಿಷೇಧವಾಗಿದ್ದು, ಅಂದಿನಿಂದಲೇ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸಿಬಿಐಗೆ ಮಾಡಿದ್ದ ಶಿಫಾರಸಿನಲ್ಲಿ ಹೇಳಿತ್ತು. ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯು ಇನ್ನೂ ಕೇಂದ್ರ ಗೃಹ ಸಚಿವಾಲಯದ ಮಟ್ಟದಲ್ಲೇ ಇದೆ. ಪ್ರಕರಣ ಸುದೀರ್ಘ‌ ಅವಧಿಯಿಂದ ಕೂಡಿರುವುದರಿಂದ ತನಿಖೆ ನಡೆಸಲು ಸಿಬಿಐ ನಿರಾಕರಿಸಿದೆ ಎಂದು ಹೇಳಲಾಗಿದೆ. [ಒಂದಂಕಿ ಲಾಟರಿ ಹಗರಣ, ಸಿಬಿಐ ತನಿಖೆ ಎಲ್ಲಿಗೆ ಬಂತು?]

cbi

ಕಡಿಮೆ ಅವಧಿಯ ಪ್ರಕರಣಗಳನ್ನು ಮಾತ್ರ ಸಿಬಿಐ ಸಾಮಾನ್ಯವಾಗಿ ತನಿಖೆಗೆ ಎತ್ತಿಕೊಳ್ಳುತ್ತದೆ. ಎಂಟು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರಕರಣ ತನಿಖೆ ನಡೆಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಸಿಬಿಐ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.[ಲಾಟರಿ ಹಗರಣ ಕಿಂಗ್ ಪಿನ್ ಪುತ್ರ ಬಿಜೆಪಿಗೆ ಸೇರ್ಪಡೆ]

ಒಂದಕಿ ಲಾಟರಿ ಹಗರಣದಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಶಿಫಾರಸು ಮಾಡಿತ್ತು.

English summary
Karnataka: Lottery has been completely banned in the state since 2007. But it is a different matter that it goes on unofficially still. Some months back there was hue and cry that multi crore rupees lottery business was done with the blessing of top police officers. CBI is reluctant to take up the case as it has to begin from 2007. The issue of ‘old' itself is a legal impediment for the CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X