ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಬಾರಿ ರಜೆ ವಿಸ್ತರಣೆ ಮಾಡಿದ ನ್ಯಾ. ಭಾಸ್ಕರರಾವ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29 : ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಮತ್ತೊಮ್ಮೆ ಸರಣಿ ರಜೆ ಪಡೆದಿದ್ದಾರೆ. ಅಕ್ಟೋಬರ್ 21ರ ತನಕ ಅವರು ರಜೆಯನ್ನು ವಿಸ್ತರಣೆ ಮಾಡಿದ್ದಾರೆ. ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರನ ಬಂಧನವಾದ ಬಳಿಕ ಲೋಕಾಯುಕ್ತರು ಸರಣಿ ರಜೆ ಪಡೆಯುತ್ತಿದ್ದಾರೆ.

ಒನ್ ಇಂಡಿಯಾಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಲೋಕಾಯುಕ್ತದ ರಿಜಿಸ್ಟ್ರಾರ್ ಅವರಿಗೆ ರಜೆ ವಿಸ್ತರಣೆ ಮಾಡುವ ಕುರಿತು ನ್ಯಾ.ಭಾಸ್ಕರರಾವ್ ಪತ್ರ ಬರೆದಿದ್ದಾರೆ. ಆದರೆ, ರಜೆ ವಿಸ್ತರಣೆ ಮಾಡಲು ನಿಖರವಾದ ಕಾರಣವನ್ನು ಅವರು ಪತ್ರದಲ್ಲಿ ತಿಳಿಸಿಲ್ಲ. [ಸೆ.30ರ ತನಕ ರಜೆ ವಿಸ್ತರಣೆ ಮಾಡಿದ ಭಾಸ್ಕರರಾವ್]

y bhaskar rao

3ನೇ ಬಾರಿ ರಜೆ ವಿಸ್ತರಣೆ : ಮೊದಲು ಭಾಸ್ಕರರಾವ್ ಅವರು ಜುಲೈ 17ರಿಂದ ಆ.17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದ್ದರು. ಸದ್ಯ, ಅಕ್ಟೋಬರ್ 21ರ ತನಕ ಮತ್ತೆ ರಜೆ ವಿಸ್ತರಣೆ ಮಾಡಿದ್ದಾರೆ. [ಲೋಕಾದಲ್ಲಿ ಭ್ರಷ್ಟಾಚಾರ, ಚಾರ್ಜ್ ಶೀಟ್ ವಿವರ]

ಸರಣಿ ರಜೆಗಳನ್ನು ಪಡೆಯುತ್ತಿರುವ ನ್ಯಾಯಮೂರ್ತಿ ಭಾಸ್ಕರರಾವ್ ಅವರು ತಮ್ಮ ಕೆಲಸಗಳನ್ನು ಯಾರಿಗೂ ಹಸ್ತಾಂತರ ಮಾಡಿಲ್ಲ. ಆದ್ದರಿಂದ, ಲೋಕಾಯುಕ್ತ ಕಚೇರಿಯಲ್ಲಿ ಹಲವಾರು ಕಡತಗಳು ಬಾಕಿ ಉಳಿದಿವೆ. ಹೊಸ ದೂರುಗಳ ತನಿಖೆಯೂ ನಡೆಯುತ್ತಿಲ್ಲ. [ಲೋಕಾಯುಕ್ತರನ್ನು ಬಂಧಿಸಿ, ವಿಚಾರಿಸಲು ಸಕಾಲ]

ಒನ್ ಇಂಡಿಯಾಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಲೋಕಾಯುಕ್ತ ಕಚೇರಿಯಲ್ಲಿ ಕೆಲಸಗಳು ಬಾಕಿ ಇರುವ ಬಗ್ಗೆ ರಾಜ್ಯಪಾಲರು ಮತ್ತು ಅಡ್ವೊಕೇಟ್ ಜನರಲ್ ಅವರಿಗೆ ಮಾಹಿತಿ ರವಾನಿಸಲಾಗಿದೆ. ರಾಜ್ಯಪಾಲರು ಮತ್ತು ಅಡ್ವೊಕೇಟ್ ಜನರಲ್ ಅವರು ಈ ಕುರಿತು ಚರ್ಚಿಸಿ, ಮುಂದಿನ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆ ಇದೆ.

English summary
The uncertainty in the Karnataka Lokayukta continues with Justice Y.Bhaskar Rao once again extending his leave. This time he has extended his leave up to October 21. This is in fact the third time that he has extended his leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X