ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಅಕ್ರಮ-ಸಕ್ರಮ ಮಸೂದೆ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಏ. 23 : ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಗುರುವಾರ 'ಭೂ ಕಂದಾಯ ತಿದ್ದುಪಡಿ ಮಸೂದೆ 2015'ಅನ್ನು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮಂಡಿಸಿದ್ದಾರೆ. ಅಕ್ರಮ-ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮತ್ತು ಎಪಿಎಲ್ ಸೇರಿದಂತೆ ಎಲ್ಲಾ ಬಡವರಿಗೂ ಯೋಜನೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.

ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಸೂದೆ ಮಂಡನೆ ಮಾಡಿದ ಸಚಿವರು, 'ಬಿಪಿಎಲ್ ಕುಟುಂಬಗಳು ಸರ್ಕಾರಿ ಜಾಗದಲ್ಲಿ ನಿರ್ಮಿಸಿದ 50*80 ಅಳತೆ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶವಿದೆ' ಎಂದು ಸದನಕ್ಕೆ ವಿವರಣೆ ನೀಡಿದರು.

assembly

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಣೆ ಮಾಡಿ ಎಂದು ಒತ್ತಾಯಿಸಿದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.[ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]

ಮಸೂದೆಯಲ್ಲಿನ ಪ್ರಮುಖ ಅಂಶಗಳು
* ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿನ ವಾಸದ ಮನೆಗಳನ್ನು ಸಕ್ರಮ ಮಾಡುವುದು
* 50*80 ಅಳತೆ ನಿವೇಶದಲ್ಲಿ ನಿರ್ಮಾಣದ ಮನೆಗಳು ಮಾತ್ರ ಸಕ್ರಮ
* ಕೃಷಿ ಉದ್ದೇಶಕ್ಕಾಗಿ ಬಳಸಲಾದ ಭೂಮಿಯಲ್ಲಿ ತೋಟದ ಮನೆ ನಿರ್ಮಾಣಕ್ಕೆ ವಿನಾಯಿತಿ
* ಕೃಷಿ ಉದ್ದೇಶದ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ
* ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ, ಅರ್ಜಿಯನ್ನು ಸ್ವೀಕರಿಸುವುದಕ್ಕೆ ಕಾಲಮಿತಿ ವಿಸ್ತರಣೆ
* ಅರ್ಜಿಗಳನ್ನು ಸಲ್ಲಿಸಲು ಮೇ 31 ಕೊನೆಯ ದಿನ (ಸಚಿವರಿಂದ ದಿನಾಂಕ ವಿಸ್ತರಣೆ ಭರವಸೆ)

English summary
Karnataka Revenue Minister V. Srinivas Prasad tabled Karnataka Land Revenue Amendment Bill 2015 in assembly on Thursday. Here is key features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X