ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಸರಿನ ದರ 2 ರೂ. ಏರಿಕೆ ಮಾಡಿದ ಕೆಎಂಎಫ್

|
Google Oneindia Kannada News

ಬೆಂಗಳೂರು, ಏ. 20 : ಕರ್ನಾಟಕ ಹಾಲು ಮಹಾಮಂಡಳಿ ಸದ್ದಿಲ್ಲದೇ ಮೊಸರಿನ ಬೆಲೆಯನ್ನು 2 ರೂ. ಹೆಚ್ಚಳ ಮಾಡಿದೆ. ಹಾಲಿನ ದರ ಏರಿಕೆಯ ಕುರಿತು ಸರ್ಕಾರ ಮತ್ತು ಕೆಎಂಎಫ್ ನಡುವೆ ಮಾತುಕತೆ ನಡೆಯುತ್ತಿದೆ.

ಉತ್ಪಾದನಾ ವೆಚ್ಚ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ರವಿಕುಮಾರ್ ಹೇಳಿದ್ದಾರೆ. ಖಾಸಗಿ ಅವರು ಮಾರಾಟ ಮಾಡುವ ಮೊಸರಿಗಿಂತ ಕಡಿಮೆ ಬೆಲೆಯಲ್ಲಿ ಕೆಎಂಎಫ್ ಮೊಸರು ಪೂರೈಕೆ ಮಾಡುತ್ತಿದೆ ಎಂದು ಸಮರ್ಥನೆ ನೀಡಿದ್ದಾರೆ. [ಕೆಎಂಎಫ್ ಅಧ್ಯಕ್ಷರ ಅಮಾನತು ವಾಪಸ್]

KMF

ಬೆಲೆ ಎಷ್ಟು ಹೆಚ್ಚಾಗಿದೆ : ಪ್ರತಿ ಲೀಟರ್ ಮೊಸರಿನ ಬೆಲೆ 36 ರಿಂದ 38 ರೂ.ಗಳಿಗೆ ಏರಿಕೆಯಾಗಿದ್ದರೆ. ಅರ್ಧ ಲೀಟರ್ ಮೊಸರಿನ ಬೆಲೆ 18 ರೂ.ನಿಂದ 20 ರೂ.ಗಳಿಗೆ ಏರಿಕೆಯಾಗಿದೆ. ಏ.16ರಿಂದಲೇ ನೂತನ ದರ ಜಾರಿಗೆ ಬಂದಿದೆ. [3 ರಿಂದ 4 ರೂ. ಹಾಲಿನ ದರ ಹೆಚ್ಚಳ]

ಮೊಸರಿಗೆ ದರ ಹೆಚ್ಚಳದ ಕುರಿತು ವಿತರಕರಿಗೆ ಕೆಎಂಎಫ್ ಸುತ್ತೋಲೆ ಮೂಲಕ ಮಾಹಿತಿ ನೀಡಿದೆ. ಆದರೆ, ಮೊಸರಿನ ಪ್ಯಾಕೆಟ್‌ಗಳಲ್ಲಿ ಇನ್ನೂ ನೂತನ ದರಗಳು ಮುದ್ರಣಗೊಳ್ಳದಿರುವುದು ಗ್ರಾಹಕರ ಗೊಂದಲಕ್ಕೆ ಕಾರಣವಾಗಿದೆ.

ಹಾಲಿನ ದರ ಏರಿಕೆ : ಹಾಲಿನ ದರವನ್ನು ಏರಿಕೆ ಮಾಡುವ ಕುರಿತು ಸರ್ಕಾರ ಮತ್ತು ಕೆಎಂಎಫ್ ನಡುವೆ ಮಾತುಕತೆ ನಡೆಯುತ್ತಿದೆ. ಲೀಟರ್ ಹಾಲಿನ ದರವನ್ನು 3 ರಿಂದ 4 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ. ಆದರೆ, ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ.

English summary
The Karnataka Milk Federation (KMF) has increased curd prices by Rs 2 per liter. New price come to effect form April 16, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X