ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ಗೆ ಗೊರಿಲ್ಲಾ ಗ್ಲಾಸ್ ಹಾಕೋರು ತಲೆಗೆ ಹೆಲ್ಮೆಟ್ ಹಾಕ್ಕೊಳ್ಳಿ

|
Google Oneindia Kannada News

ಬೆಂಗಳೂರು, , ಜನವರಿ, 11: ನಾಳೆಯಿಂದ ಸ್ನೇಹಿತರನ್ನೋ, ಹೆಂಡತಿಯನ್ನೋ, ಪ್ರೇಯಸಿಯನ್ನೋ ಹಿಂಬದಿಗೆ ಕೂರಿಸಿಕೊಂಡು ಜುಮ್ ಎಂದು ಹೆಲ್ಮೆಟ್ ಹಾಕದೆ ಕರೆದುಕೊಂಡು ಹೋದರೆ ಮೊದಲ ಸಾರಿಗೆ 100 ರು. ದಂಡ ಕಟ್ಟಬೇಕಾಗುತ್ತದೆ. ಒಂದೆಡೆ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಮಾಡುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಯೋಜನೆ ಕಟ್ಟುನಿಟ್ಟಿನ ಜಾರಿಗೆ ಮುಂದಾಗಲಿದ್ದಾರೆ.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನವರಿ 12 ರಿಂದ ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ಸರ್ಕಾರ ಈಗಾಗಲೇ ಅಧಿಕೃತ ಆದೇಶವನ್ನು ಹೊರಡಿಸಿದ್ದು ದಂಡದ ಪ್ರಮಾಣವನ್ನು ತಿಳಿಸಿದೆ.[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಜನರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದೂ ಆಗಿದೆ. ಮಾಧ್ಯಮಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದೂ ಆಗಿದೆ. ಆದರೆ ಸರ್ಕಾರ ಮಾತ್ರ ಯೋಜನೆಯಿಂದ ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಸ್ಪಷ್ಟನೆ ನೀಡಿದೆ. ಯೋಜನೆ ಕಟ್ಟುನಿಟ್ಟಿನ ಜಾರಿಗೆ 15 ದಿನ ಅವಕಾಶ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಹೆಲ್ಮೆಟ್ ಕಡ್ಡಾಯ ಸರಿ ಆದರೆ ಈ ಎಲ್ಲ ಪ್ರಶ್ನೆಗಳು ಹಾಗೆ ಉಳಿದುಕೊಂಡಿವೆ.....

ಐಎಸ್ ಐ ಮಾರ್ಕ್

ಐಎಸ್ ಐ ಮಾರ್ಕ್

ಇಂಡಿಯನ್ ಸ್ಟಾಂಡರ್ಡ್ ಇಂಡೆಕ್ಸ್(ಐಎಸ್ ಐ) ಮಾರ್ಕ್ ಇರುವ ಹೆಲ್ಮೆಟ್ ಬಳಕೆ ಮಾಡಬೇಕು ಎಂಬುದು ಸರ್ಕಾರದ ನಿಯಮಾವಳಿ. ಆದರೆ ಯಾವ ಕಂಪನಿ ಎಂಬ ಬಗ್ಗೆ ಅಧಿಕೃತ ಆದೇಶವೇನಿಲ್ಲ.

ಫುಟ್ ಪಾತ್ ಮಾರಾಟ

ಫುಟ್ ಪಾತ್ ಮಾರಾಟ

ಫುಟ್ ಪಾತ್ ನಲ್ಲಿ 150ಕ್ಕೊ 200ಕ್ಕೊ ಸಿಗುವ ಹೆಲ್ಮೆಟ್ ತಗಂಡರಾತು ಬಿಡಿ ಎಂಬ ಮನಸ್ಥಿತಿಯೂ ಹಲವರಲ್ಲಿರಬಹುದು. ಬಸವನಗುಡಿಯ ಸಮೀಪ ಫುಟ್ ಪಾತ್ ನಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆಂದು 150 ರು. ನೀಡಿ ಹೆಲ್ಮೆಟ್ ಖರೀದಿಸಿ ತೆಗೆದುಕೊಂಡು ಹೋಗಿದ್ದು ಕಂಡು ಬಂತು. ಕ್ವಾಲಿಟಿ ನೀವೆ ಲೆಕ್ಕ ಹಾಕಿಕೊಳ್ಳಿ.

ದರವೂ ಹೆಚ್ಚಳ

ದರವೂ ಹೆಚ್ಚಳ

ಹೆಲ್ಮೆಟ್ ದರವನ್ನು ವ್ಯಾಪಾರಿಗಳು ಹೆಚ್ಚಳ ಮಾಡಿದ್ದಾರೆ. 5000 ರು. ಬೆಲೆಯ ಅತ್ಯುತ್ತಮ ದರ್ಜೆ ಹೆಲ್ಮೆಟ್ ಅನ್ನು 6 ಸಾವಿರಕ್ಕೆ ಏರಿಸಲಾಗಿದೆ. ಅತಿ ಕಡಿಮೆ ಬೆಲೆಯ 300 ರು. ಹೆಲ್ಮೆಟ್ ಗೆ 450 ರು ನೀಡಬೇಕಿದೆ.

ಉಲ್ಲಂಘಿಸಿದರೆ ಕಷ್ಟ

ಉಲ್ಲಂಘಿಸಿದರೆ ಕಷ್ಟ

ಸರ್ಕಾರ ಆದೇಶ ಹೊರಡಿಸಿ ಆಗಿದೆ. ನಿಯಮ ಉಲ್ಲಂಘನೆ ಮಾಡಿದರೆ ನಿಮಗೆ ನಷ್ಟ ಮತ್ತು ಕಷ್ಟ. ಸುಮ್ಮನೆ ದಂಡ ತುಂಬುವ ಬದಲು ಉತ್ತಮ ಕ್ವಾಲಿಟಿಯ ಹೆಲ್ಮೆಟ್ ಖರೀದಿಸಿ ಹಾಕಿಕೊಳ್ಳುವುದೆ ಪರಿಹಾರ ಮಾರ್ಗ.

English summary
Karnataka: Karnataka's transport department declared that helmets will be compulsory for pillion riders as well in the state from January 12. According to him, people of all age groups fall under this new rule. Anyone who violates this new rule will have to pay Rs 100 as fine the first time. The second time they flout the rule, the fine will be Rs 200 and the third timed Rs 300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X