ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಮೇ. 5: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿಎನ್ ಶ್ರೀನಿವಾಸಾಚಾರಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮೇ 10 ರಂದು ಜಾರಿಯಾಗಲಿದ್ದು, ಜೂನ್ 5 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಡ್ಡಾಯ ಮತದಾನ ಮತ್ತು ಮಹಿಳೆಯರಿಗೆ ಶೇ. 50 ಮೀಸಲು ಕಲ್ಪಿಸುವ ಪಂಜಾಯತ್ ರಾಜ್ ತಿದ್ದುಪಡಿ ಅನ್ವಯ ಚುನಾವಣೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.[ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯ]

election

6073 ಗ್ರಾಮ ಪಂಚಾಯಿತಿಗಳಲ್ಲಿ 229 ಗ್ರಾಮ ಪಂಚಾಯ್ತಿ ಹೊರತುಪಡಿಸಿ ಉಳಿದ 5,844 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಅಂದರೆ ನಗರ ಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಚುನಾವಣೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದರು.

ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯ ಹೈಲೈಟ್ಸ್
* ಮೇ 29 ಕ್ಕೆ ಮೊದಲ ಹಂತದ ಚುನಾವಣೆ
* ಜೂನ್ 2 ಕ್ಕೆ 2ನೇ ಹಂತದ ಚುನಾವಣೆ
* ಮೈಸೂರು ಮತ್ತು ಬೆಳಗಾವಿ ವಿಭಾಗಕ್ಕೆ ಮೇ 29 ರಂದು ಚುನಾವಣೆ
* ಕಲಬುರಗಿ ಮತ್ತು ಬೆಂಗಳೂರು ವಿಭಾಗಕ್ಕೆ 2 ನೇ ಹಂತದಲ್ಲಿ ಚುನಾವಣೆ
* ರಾಜ್ಯದ ಒಟ್ಟು 5844 ಗ್ರಾಮ ಪಂಚಾಯಿತಿಗಳಿಗೆ ಮತದಾನ
* 220 ಗ್ರಾಮ ಪಂಚಾಯಿತಿ ಅವಧಿ ಇನ್ನು ಮುಗಿದಿಲ್ಲವಾದ್ದರಿಂದ ಚುನಾವಣೆ ಇಲ್ಲ
* ಜೂನ್ 5 ರಂದು ಮತಎಣಿಕೆ ಮತ್ತು ಫಲಿತಾಂಶ ಪ್ರಕಟ
* ಪಂಚಾಯತ್ ರಾಜ್ ತಿದ್ದುಪಡಿ ಅನ್ವಯ ಮತದಾನ
* ಕಡ್ಡಾಯ ಮತದಾನ ಈ ಬಾರಿಯ ಪ್ರಮುಖ ಅಂಶ
* ಮಹಿಳೆಯರಿಗೆ ಶೇ. 50 ಸ್ಥಾನ ಮೀಸಲು

* ಮೊದಲ ಹಂತಕ್ಕೆ ನೀತಿ ಸಂಹಿತೆ ಜಾರಿ
ಮೊದಲ ಹಂತದ ಚುನಾವಣೆ - ಮೇ 29
ಚುನಾವಣೆ ನೀತಿ ಸಂಹಿತೆ ಜಾರಿ - ಮೇ 10
ಅಧಿಸೂಚನೆ ಪ್ರಕಟ - ಮೇ 11
ನಾಮಪತ್ರ ಸಲ್ಲಿಕೆ ಕೊನೆ ದಿನ - ಮೇ 18
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ - ಮೇ 21

* ಎರಡನೇ ಹಂತಕ್ಕೆ ನೀತಿ ಸಂಹಿತೆ ಜಾರಿ
ಎರಡನೇ ಹಂತದ ಚುನಾವಣೆ - ಜೂನ್ 2
ಅಧಿಸೂಚನೆ ಪ್ರಕಟ - ಮೇ 15
ನಾಮಪತ್ರ ಸಲ್ಲಿಕೆ ಕೊನೆ ದಿನ - ಮೇ 22
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ - ಮೇ 25

ಮೊದಲ ಹಂತದ ಚುನಾವಣೆ ಎಲ್ಲೆಲ್ಲಿ?
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ ಉತ್ತರ ಕನ್ನಡ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.

ಅಗತ್ಯ ಬಿದ್ದರೆ ಮೊದಲ ಹಂತಕ್ಕೆ ಮೇ 31 ರಂದು 2 ನೇ ಹಂತಕ್ಕೆ ಜೂನ್ 4 ರಂದು ಮರುಮತದಾನ ನಡೆಸಲಾಗುವುದು. ಇದರ ಜತೆಗೆ ವಿದ್ಯುನ್ಮಾನ ಮತ ಯಂತ್ರ ಉಪಯೋಗಕ್ಕೂ ಚಿಂತನೆ ನಡೆಸಲಾಗಿದೆ ಎಂದು ಎಂದು ಶ್ರೀನಿವಾಸಾಚಾರಿ ಮಾಹಿತಿ ನೀಡಿದರು.

English summary
The Karnataka Election Commission has decided to hold the Gram Panchayath polls in two phases, on May 29 and June 2. State Election Commissioner P.N. Srinivasachari told in a Press meet Tuesday at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X