ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಟ್ ಒತ್ತುವಾಗ ಬಾಡಿ ಶೇಕ್ ಆಗಿದ್ದು ಯಾಕೆ?

|
Google Oneindia Kannada News

ನಾರಾಯಣ ಗೆದ್ದು ಬುಟ್ನಂತೆ... ಅಯ್ಯೋ ಅದು ಎರಡೇ ಓಟು ಹೆಚ್ಚು ಕಡಿಮೆ.. ಇಷ್ಟೆಲ್ಲಾ ಜನ ಗುದ್ದಾಟಕ್ಕೆ ಇಳಿದಾಗಲೇ ಅಂದುಕಂಡಿದ್ವಿ..ಹೀಗೆಂದು ಹಳ್ಳಿ ಕಟ್ಟೆಯ ಮೇಲೆ ಮಂಜಣ್ಣ ಗುಜುಗಟ್ಟಿದಾಗ ಗ್ರಾಮ ಪಂಚಾಯಿತಿ ಎಲೆಕ್ಷನ್ ಫಲಿತಾಂಶದ ಸುದ್ದಿ ಕಿವಿಗೆ ಬಿದ್ದಿತ್ತು.

ಗ್ರಾಮ ಪಂಚಾಯಿತಿ ಚುನಾವಣೆ ಎದುರಾದಾಗಲೆಲ್ಲ ಗ್ರಾಮಗಳಲ್ಲಿಯೂ ಮದ್ಯ, ಮಾಂಸ, ಹಣ ಸದ್ದು ಮಾಡುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ನಮ್ಮೂರ ಗ್ರಾಮ ಪಂಚಾಯಿತಿ ಚುನಾವಣೆ ಕತೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತೇನೆ.[ಪಂಚಾಯಿತಿ ಫೈಟ್: ತಾಜಾ ಚಿತ್ರಣ]

election

ಈ ಬಾರಿ ಯಾರೂ ಬೇಕಾದರೂ ನಿಲ್ಲಬಹುದು ಎಂದು ಪಂಚಾಯಿತಿಗೆ ಬಂದ ಆದೇಶ ಹೇಳಿತ್ತು. ಗೊತ್ತಾಗಿದ್ದೆ ತಡ ಪುಟಗೋಸಿ ಲೀಡರ್ ಗಳೆಲ್ಲ ತಾ ಮುಂದು ನಾ ಮುಂದು ಎಂದು ನಾಮಪತ್ರ ಹಾಕಿಯೇ ಬಿಟ್ಟರು. ಅಣ್ಣ-ತಮ್ಮ, ತಂದೆ-ಮಗ, ಅಕ್ಕ ಪಕ್ಕದ ಮನೆಯವರು ಹೀಗೆ ಎಲ್ಲರೂ ತಮ್ಮದು ಒಂದು ಇರಲಿ ಎಂದು ನಾಮಪತ್ರ ಇಟ್ಟರು. ಚಿಕ್ಕ ಗ್ರಾಮದ ವಾರ್ಡ್ ಗೆ ಸಲ್ಲಿಕೆಯಾಗಿದ್ದು ಬರೋಬ್ಬರಿ 33 ನಾಮಪತ್ರ.

ಆದರೆ ಸುಮ್ಮನೆ ನಮಗ್ಯಾಗೆ ರಾಜಕೀಯ ಜಂಜಾಟ, ಕುಟುಂಬದಲ್ಲಿ ವೈರತ್ವ ಕಟ್ಟಿಕೊಳ್ಳೋದು ಬೇಡ, ಗೆದ್ದು ಮಾಡೋದಾದರು ಏನು? ಎಂಬಿತ್ಯಾದಿ ಕಾರಣಗಳನ್ನು ಇಟ್ಟುಕೊಂಡು ಬಹುತೇಕರು ನಾಮಪತ್ರ ಹಿಂದಕ್ಕೆ ತೆಗೆದುಕೊಂಡರು. ಕೊನೆಯಲ್ಲಿ ಉಳಿದಿದ್ದು 9 ನಾಮಪತ್ರ.

ಕೈ ಸಾಲ ಕೊಟ್ಟ ದುಡ್ಡು, ಬಾವಿ ತೆಗೆಯಲು ಬಂದಾಗ ಬಿಟ್ಟ ಕೂಲಿ, ಪೇಟೆಗೆ ಹೋಗುವಾಗ ಬೈಕ್ ನಲ್ಲಿ ಡ್ರಾಪ್ ಕೊಟ್ಟ ಲೆಕ್ಕ, ಬಾಡೂಟ ಮಾಡುವಾಗ ತಂದ ಬೀಯರ್ ಎಲ್ಲವೂ ಚುನಾವಣಾ ಪ್ರಚಾರದ ವಸ್ತುಗಳಾಗಿ ಮಾರ್ಪಾಡಾದವು.

ಅಂತೂ ಇಂತೈ ಎಲೆಕ್ಷನ್ ಮುಗೀತು. ಹುರಿಯಾಳುಗಳಾಗಿದ್ದ ನಾರಾಯಣ ಮತ್ತು ಗಣಪತಿ ನಡುವೆ ತುರುಸಿನ ಸರ್ಧೆ ಇತ್ತು. ಎಲ್ಲರೂ ಗಣಪತಿ ಗೆಲ್ಲುತ್ತಾನೆ ಎಂದೇ ಭಾವಿಸಿದ್ದರು. ಆತ ಕೆಲ ಜನಾನುರಾಗಿ ಕೆಲಸವನ್ನೂ ಮಾಡಿದ್ದ. ಜತೆಗೆ ಎಲೆಕ್ಷನ್ ಹಿಂದಿನ ದಿನ ಸಾಕಷ್ಟು 'ರಾತ್ರಿ ವ್ಯವಹಾರಗಳನ್ನು ನಿಭಾಯಿಸಿದ್ದ' ಎಲ್ಲರಿಗೂ ಇದ್ದ ಪ್ರಶ್ನೆ ಒಂದೇ, ಗಣಪತಿ ಹೇಗೆ ಸೋತ?

ಉತ್ತರ ಹೇಳಿದ ಮತದಾನದ ಲೆಕ್ಕ
ಗೆದ್ದ ನಾರಾಯಣನಿಗೆ ಬಿದ್ದಿದ್ದು 104 ಮತ ಸೋತ ಗಣಪತಿಗೆ ಬಿದ್ದದ್ದು 102 ಓಟು. ಆದರೆ ಲ್ಯಾಪ್ಸ್ ಆದ ಮತಗಳು 4. ಲ್ಯಾಪ್ಸ್ ಆದ ಮತಗಳು ಗಣಪತಿಗೆ ಬೀಳಬೇಕಾಗಿದ್ದವಾಗಿದ್ದವು. ಆದರೆ ಓಟು ಒತ್ತಬೇಕಾದವು ಗಣಪತಿ ಮತ್ತು ಕೆಳಗಿನ ಅಭ್ಯರ್ಥಿ ಅಥವಾ ಮೇಲಿನ ಅಭ್ಯರ್ಥಿ ಇಬ್ಬರ ಚಿಹ್ನೆಗೂ ಸೇರಿಸಿ ಒತ್ತಿದ್ದರು...

ಚುನಾವಣೆ ಆರಂಭಕ್ಕೆ ಮುನ್ನ ಒಂದು ಬಗೆಯ ಚರ್ಚೆಯಾದರೆ, ನಂತರ ಫಲಿತಾಂಶದ ವಿಮರ್ಶೆ. ಗೆಲುವು ಸೋಲಿನ ಲೆಕ್ಕಾಚಾರಗಳು ವಾರದ ಕಾಲ ಮುಂದುವರಿದಿತ್ತು. ಗಣಪತಿ ಸೋಲಿಗೂ ಕಾರಣ ಕಂಡುಕೊಳ್ಳಲಾಯಿತು.

ಮಂಜಣ್ಣ ಹೇಳುವಂತೆ ಗಣಪತಿ ಎಲೆಕ್ಷನ್ ಹಿಂದಿನ ದಿನ ಸಕಲರಿಗೂ 'ಪಾನೀಯ' ನೀಡಿದ್ದ. ಮರುದಿನ ಅಮಲಿನಲ್ಲಿ ತೂರಾಡುತ್ತಲೇ ಬಂದವರು ಮತ ಚೀಟಿಯ ಮೇಲೆ ಅವರ ಲೆಕ್ಕದಂತೆ ಗಣಪತಿಗೆ ಓಟ್ ಹಾಕಿದ್ದರು. ಆದರೆ ಅಮಲಿನ 'ಅಮಲು' ಅವರ ತೂರಾಟ ಎಲ್ಲ ಸೇರಿಕೊಂಡು ಎಲ್ಲಿಗೋ ಬೀಳುವ ಓಟು ಎಲ್ಲಿಗೋ ಬಿದ್ದಿತು!

English summary
Voting begins for 1st phase of Grama panchayat election in Karnataka. Every panchayat had a different kind of election. Here are the story of our native Gram panchayat election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X