ಸರ್ಕಾರದಿಂದಲೇ ನಾರಾಯಣ ಗುರು ಜಯಂತಿ ಆಚರಣೆ

Subscribe to Oneindia Kannada

ಬೆಂಗಳೂರು, ಆಗಸ್ಟ್ 24 : ಕರ್ನಾಟಕ ಸರ್ಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 16ರಂದು ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಿಸಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಲಾಗುವುದು' ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.[ಸೆ.25ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ]

Narayana Guru

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿಗಳು, ಈ ವರ್ಷ ಸೆ. 16ರಂದು ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.

ನಾರಾಯಣ ಗುರುಗಳು ಯಾರು? : ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಸಮಾಜಕ ಸುಧಾರಕರಾಗಿ ಉದಯಿಸಿದರು. ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಮುಡಿಪಾಗಿಟ್ಟರು.[ನಾರಾಯಣ ಗುರುಗಳ ಬಗ್ಗೆ ಓದಿ]

ನಾರಾಯಣ ಗುರುಗಳು ಜಗತ್ತಿನಲ್ಲಿರುವುದು 'ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು' ಎಂದ ತತ್ವವನ್ನು ಪ್ರತಿಪಾದಿಸಿದರು. ಸಂಸ್ಕೃತ ಭಾಷಾ ಪಂಡಿತರಾಗಿದ್ದ ಅವರು, 'ದೇಶಸೇವೆಯೇ ಈಶ ಸೇವೆಯೆಂದು' ಬೋಧನೆ ಮಾಡಿದರು.

English summary
Karnataka government will organise Brahmasri Narayana Guru jayanti in a big way said Chief Minister Siddaramaiah. This year Narayana Guru jayanti scheduled on September 16, 2016.
Please Wait while comments are loading...