ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್.ನಾಯಕ್ ಹೆಸರು ಅಂತಿಮ

|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ವೈ.ಭಾಸ್ಕರರಾವ್ ಅವರ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್.ನಾಯಕ್ ಅವರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಈ ಕುರಿತು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಲಿದೆ.

ನೂತನ ಲೋಕಾಯುಕ್ತರ ಆಯ್ಕೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಸಭೆ ನಡೆಯಿತು. ಸಿದ್ದರಾಮಯ್ಯ ಅವರು ನ್ಯಾ.ಎಸ್‌.ಆರ್.ನಾಯಕ್ ಅವರ ಹೆಸರನ್ನು ಸಭೆಯಲ್ಲಿ ಸೂಚಿಸಿದರು. [ನಾಯಕ್ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು]

sr nayak

ಸಭೆಗೆ ಗೈರು ಹಾಜರಾಗಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪತ್ರದ ಮೂಲಕ ಎಸ್.ಆರ್.ನಾಯಕ್ ಅವರ ಹೆಸರನ್ನು ಸೂಚಿಸಿದ್ದರು. ಸಿದ್ದರಾಮಯ್ಯ ಮತ್ತು ಕಾಗೋಡು ತಿಮ್ಮಪ್ಪ ಹೊರತುಪಡಿಸಿ ಉಳಿದ ಸದಸ್ಯರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅವರ ಹೆಸರನ್ನು ಸೂಚಿಸಿದರು ಎಂದು ತಿಳಿದುಬಂದಿದೆ. [ಲೋಕಾಯುಕ್ತ ಹುದ್ದೆ ಬೇಡವೆಂದ ವಿಕ್ರಂಜಿತ್ ಸೇನ್]

ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ವಿಕ್ರಂಜಿತ್ ಸೇನ್‌ ಹೆಸರನ್ನು ಶಿಫಾರಸು ಮಾಡಿದರು. ಸಭೆಗೆ ಗೈರು ಹಾಜರಾಗಿದ್ದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ವಿಕ್ರಂಜಿತ್ ಸೇನ್ ಹೆಸರು ಸೂಚಿಸಿ ಪತ್ರ ಬರೆದಿದ್ದರು.[ಕರ್ನಾಟಕ ಲೋಕಾಯುಕ್ತ ಹಗರಣದ Timeline]

ಯಾರ ಹೆಸರು ಶಿಫಾರಸು? : ಸಮಿತಿಯ ನಾಲ್ವರು ಸದಸ್ಯರು ವಿಕ್ರಂಜಿತ್ ಸೇನ್ ಅವರ ಹೆಸರು ಸೂಚಿಸಿರುವುದರಿಂದ ಅವರ ಹೆಸರನ್ನೇ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು ಎಂದು ಜಗದೀಶ್ ಶೆಟ್ಟರ್ ಸಭೆಯಲ್ಲಿ ತಿಳಿಸಿದರು. 'ವಿಕ್ರಂಜಿತ್ ಸೇನ್ ಅವರ ಬಗ್ಗೆ ನನಗೂ ಅಪಾರವಾದ ಗೌರವವಿದೆ. ಆದರೆ, ನಾಯಕ್ ಅವರು ಕನ್ನಡಿಗರು. ನಮ್ಮವರೇ ಅರ್ಹರು ಇದ್ದಾಗ ಬೇರೆಯವರನ್ನು ಏಕೆ ನೇಮಕ ಮಾಡಬೇಕು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

ಮುಂದೇನು ? : ರಾಜ್ಯ ಸರ್ಕಾರ ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್.ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಲಿದೆ. ರಾಜ್ಯಪಾಲರು ಶಿಫಾರಸು ಒಪ್ಪಬಹುದು ಅಥವ ಆಕ್ಷೇಪಣೆ ವ್ಯಕ್ತಪಡಿಸಬಹುದು. ಆಯ್ಕೆ ಸಮಿತಿಯಲ್ಲಿ ಪ್ರತಿಪಕ್ಷಗಳ ಸದಸ್ಯರು ಇರುವುದರಿಂದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಕಡಿಮೆ ಇದೆ.

ಒಂದು ವೇಳೆ ಪ್ರತಿಪಕ್ಷಗಳು ಸರ್ಕಾರದ ಶಿಫಾರಸನ್ನು ಪರಿಗಣಿಸದಂತೆ ದೂರು ಕೊಟ್ಟರೆ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಕೇಳಬಹುದು. ಹೆಸರನ್ನು ತಿರಸ್ಕಾರ ಮಾಡಿ ಹೊಸ ಹೆಸರನ್ನು ಶಿಫಾರಸು ಮಾಡುವಂತೆ ಸರ್ಕಾರಕ್ಕೆ ಸೂಚನೆಗಳನ್ನು ನೀಡಬಹುದಾಗಿದೆ.

ಎಸ್.ಆರ್.ನಾಯಕ್ ಯಾರು ?: ಎಸ್.ಆರ್.ನಾಯಕ್ ಅವರು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿದ್ದು, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

English summary
Karnataka government decided to recommend justice S.R. Nayak name for the post of Karnataka Lokayukta. According to sources, 4 members in the six-member panel, headed by Chief Minister Siddaramaiah, opposed the candidature S.R. Nayak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X