27 ಐಎಎಸ್ ಅಧಿಕಾರಿಗಳ ವರ್ಗಾವಣೆ, ಇಲ್ಲಿದೆ ಪಟ್ಟಿ

Subscribe to Oneindia Kannada

ಬೆಂಗಳೂರು, ಜೂನ್ 25 : ಕರ್ನಾಟಕ ಸರ್ಕಾರ 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆ 36 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

ಶುಕ್ರವಾರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಧಾರವಾಡ, ಉಡುಪಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿದೆ. [ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ]

vidhana soudha

83 ಉಪನೋಂದಣಾಧಿಕಾರಿಗಳ ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಎನ್‌.ವಿ. ಪ್ರಸಾದ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ

* ಡಿ.ಎಸ್.ರಮೇಶ್ - ಜಿಲ್ಲಾಧಿಕಾರಿ, ದಾವಣಗೆರೆ
* ಜಾವೇದ್ ಅಖ್ತರ್ - ವ್ಯವಸ್ಥಾಪಕ ನಿರ್ದೇಶಕ ಕೆಪಿಟಿಸಿಎಲ್
* ನವೀನ್ ರಾಜ್ ಸಿಂಗ್ -ಕಾರ್ಯದರ್ಶಿ ಹಿಂದುಳಿದ ವರ್ಗಗಳ ಇಲಾಖೆ
* ಡಾ.ಜೆ.ರವಿಶಂಕರ್ - ನಿರ್ದೇಶಕ, ತೋಟಗಾರಿಕೆ ಮಿಷನ್
* ಡಾ.ಎನ್.ಮಂಜುಳಾ - ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
* ಪಂಕಜ್ ಕುಮಾರ್ ಪಾಂಡೆ - ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಗಮ
* ಮನೋಜ್ ಕುಮಾರ್ ಮೀನಾ - ಮಹಾನಿರ್ದೇಶಕ, ನೋಂದಣಿ ಇಲಾಖೆ
* ಸೌಜನ್ಯ - ಆಯುಕ್ತೆ, ಸಾರ್ವಜನಿಕ ಶಿಕ್ಷಣ ಇಲಾಖೆ
* ಡಾ.ಆರ್.ವಿಶಾಲ್ - ಪೌರಾಡಳಿತ ನಿರ್ದೇಶಕ
* ವಿ.ಅನ್ಬುಕುಮಾರ್ - ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
* ಡಾ.ಎನ್‌.ವಿ.ಪ್ರಸಾದ್ - ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ
* ಜಿ.ಸತ್ಯವತಿ - ಜಿಲ್ಲಾಧಿಕಾರಿ, ಚಿಕ್ಕಮಗಳೂರು
* ಬಿ.ಎಂ.ವಿಜಯ ಶಂಕರ್ - ವಿಶೇಷ ಆಯುಕ್ತ (ಯೋಜನೆ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
* ದೀಪ್ತಿ ಆದಿತ್ಯ ಕಾನಡೆ - ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
* ಉಜ್ವಲಕುಮಾರ್ ಘೋಷ್ - ಮುಖ್ಯಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ
* ಎಂ.ದೀಪಾ - ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
* ಪಿ.ರಾಜೇಂದ್ರ ಚೋಳನ್ - ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ
* ರಮಣದೀಪ ಚೌಧರಿ - ವ್ಯವಸ್ಥಾಪಕ ನಿರ್ದೇಶಕ, ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಸಿ ಕಂಪನಿ
* ಡಾ.ಎಂ.ವಿ.ವೆಂಕಟೇಶ್ - ಜಿಲ್ಲಾಧಿಕಾರಿ, ಹಾವೇರಿ
* ಎಸ್‌.ಎಸ್.ನಕುಲ್ - ಜಿಲ್ಲಾಧಿಕಾರಿ, ಉತ್ತರ ಕನ್ನಡ
* ಎಸ್.ಬಿ.ಬೊಮ್ಮನಹಳ್ಳಿ - ಜಿಲ್ಲಾಧಿಕಾರಿ, ಧಾರವಾಡ
* ಬಿ.ಸಿಂಧು - ಉಪ ಕಾರ್ಯದರ್ಶಿ, ಹಣಕಾಸು ಇಲಾಖೆ
* ಡಾ.ರತನ್ ಯು. ಕೇಲ್ಕರ್ - ಯೋಜನಾ ಆಡಳಿತಾಧಿಕಾರಿ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ

ವರ್ಗಾವಣೆ ಪಟ್ಟಿ ಇಂಗ್ಲಿಷ್‌ನಲ್ಲಿ ನೋಡಿ

English summary
Karnataka government on Friday, June 24, 2016 transferred 27 IAS officers. Here are the list.
Please Wait while comments are loading...