ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ಆರಂಭಕ್ಕೆ ಸಿದ್ದರಾಮಯ್ಯ ಸರ್ಕಾರ ಚಿಂತನೆ

By Mahesh
|
Google Oneindia Kannada News

ಬೆಂಗಳೂರು,ಜು.14: ಹಟ್ಟಿ ಚಿನ್ನದ ಗಣಿ, ಕೆಜಿಎಎಫ್, ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆ ಹೀಗೆ ಚಿನ್ನ, ಕಬ್ಬಿಣ, ತಾಮ್ರ ಸೇರಿದಂತೆ ಯಾವುದೇ ಗಣಿಗಾರಿಕೆ ಇರಲಿ ಲಾಭದಾಯಕ ಎಂದು ಕಂಡು ಬಂದರೆ ಪುನರ್ ಆರಂಭ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸದನದಲ್ಲಿ ಘೋಷಿಸಿದರು.

ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿ ಘಟಕ ವ್ಯಾಪ್ತಿಗೆ ಬರುವ ಚಿತ್ರದುರ್ಗ ಜಿಲ್ಲೆ ಹಿಂಗಳಹಾಳ ಗ್ರಾಮದ ಎರಡು ತಾಮ್ರದ ಗಣಿಗಳು ಹಾಗೂ ತುಮಕೂರು ಜಿಲ್ಲೆ ಅಚ್ಚನಹಳ್ಳಿ ಚಿನ್ನದ ಗಣಿಯನ್ನು ಸ್ಥಗಿತಗೊಳಿಸಲಾಗಿತ್ತು ಈ ಗಣಿಗಾರಿಕೆ ಲಾಭದಾಯಕ ಎಂದು ಕಂಡು ಬಂದರೆ ಗಣಿಗಾರಿಕೆ ಮರುಪ್ರಾರಂಭಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು. [ಉಕ್ಕು ಕಾರ್ಖಾನೆಗೆ 18 ಸಾವಿರ ಕೋಟಿ ರು ಹೂಡಿಕೆ]

Karnataka Government to re open Gold Mines in the state : Siddaramaiah

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ಗಣಿ ಮರುಸ್ಥಾಪನೆ ಬಗ್ಗೆ ಪ್ರಸ್ತಾವನೆ ಇಲ್ಲ. ಗಣಿ ಗುತ್ತಿಗೆ ಅವಶ್ಯವಿರುವ ಶಾಸನಬದ್ಧ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಆರ್ಥಿಕವಾಗಿ ಲಾಭದಾಯಕ ಎಂದು ಕಂಡುಬಂದಲ್ಲಿ ಗಣಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. [ಮೇಕ್ ಇನ್ ಕರ್ನಾಟಕ ಎಂದ ಸಿದ್ದರಾಮಯ್ಯ]

1993-94ರಲ್ಲಿ ತಾಮ್ರದ ಗಣಿ ಸ್ಥಗಿತಗೊಂಡಿದ್ದರೆ, 2002ರಲ್ಲಿ ಚಿನ್ನದ ಗಣಿ ಸ್ಥಗಿತಗೊಂಡಿದೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ 504 ಮಂದಿ ಅಧಿಕಾರಿ ಮತ್ತು ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆಯಡಿ ಆರ್ಥಿಕ ನೆರವು ನೀಡಲಾಗಿದೆ ಎಂದರು.

ಒಂದು ಕಾಲದಲ್ಲಿ ಸತತವಾಗಿ ಒಂದು ಸಾವಿರ ಕೋಟಿ ರೂ. ಲಾಭ ಪಡೆಯುತ್ತಿದ್ದ ಹಟ್ಟಿ ಚಿನ್ನದ ಗಣಿ ಸ್ಥಗಿತಗೊಂಡು 15 ವರ್ಷ ಮೇಲಾಗಿದೆ. ಇದೇ ರೀತಿ ಕೋಲಾರ್ ಗೋಲ್ಡ್ ಮೈನ್ಸ್(ಕೆಜಿಎಫ್), ಕೆಐಒಸಿಎಲ್ ಕೂಡಾ ಕಾರ್ಯ ನಿರ್ವಹಿಸುತ್ತಿಲ್ಲ.

ಆದರೆ, ಎಲ್ಲಾ ಗಣಿಗಳ ಸ್ಥಗಿತದಿಂದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಹಟ್ಟಿ ಚಿನ್ನದ ಗಣಿ(ಎಚ್ ಜಿಎಂಎಲ್) ನಂಬಿಕೊಂಡಿದ್ದ 500ಕ್ಕೂ ಅಧಿಕ ಕುಟುಂಬ ನೋವಿನಲ್ಲಿದೆ. ಎಲ್ಲಾ ಗಣಿಗಳು ಲಾಭದಾಯಕವೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಕೂಡಲೇ ಕ್ರಮ ಜರುಗಿಸುವಂತೆ ಶಾಸಕ ತಿಪ್ಪಾರೆಡ್ಡಿ ಕೋರಿಕೊಂಡರು.

English summary
CM Siddaramaiah today(July 14) said Karnataka Government seeks Mining ministry to re open Gold and other Ore Mines in the state in the interest of poor labours and backward class people who depend on mining activities. He was speaking in assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X