ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸರ್ಕಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 22 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 15 ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ರದ್ದುಪಡಿಸಿರುವ ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ನೀಡಿರುವ ದೂರು ದೋಷ ಪೂರಿತವಾಗಿದ್ದು, ಅದನ್ನು ರದ್ದುಪಡಿಸುವಂತೆ ಮೇಲ್ಮನವಿಯಲ್ಲಿ ಸರ್ಕಾರ ಮನವಿ ಮಾಡಿದೆ. [ಯಡಿಯೂರಪ್ಪ ಅಧ್ಯಕ್ಷರಾಗುವುದಕ್ಕೂ ಮೇಲ್ಮನವಿಗೂ ಸಂಬಂಧವಿಲ್ಲ]

yeddyurappa

2016ರ ಜನವರಿ 5ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ರತ್ನಕಲಾ ಅವರು, 2015ರ ಜೂನ್ 19 ರಿಂದ 27ರ ತನಕ ಲೋಕಾಯುಕ್ತ ಪೊಲೀಸರು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ 15 ಪ್ರಕರಣಗಳನ್ನು ರದ್ದುಪಡಿಸಿದ್ದರು. [FIR ರದ್ದಾದರೂ ಯಡಿಯೂರಪ್ಪ ಕಾನೂನು ಹೋರಾಟ ಮುಗಿದಿಲ್ಲ]

ಮಹಾಲೆಕ್ಕಪಾಲ (ಸಿಎಜಿ) ವರದಿ ಅನ್ವಯ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ್ದ ಕೋರ್ಟ್, ಸಿಎಜಿ ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶಗಳನ್ನು ಮಕ್ತವಾಗಿಟ್ಟಿತ್ತು.

ಯಡಿಯೂರಪ್ಪ ಅವರ ವಿರುದ್ಧದ 15 ಪ್ರಕರಣಗಳು : ಜೆ.ಬಿ.ಕಾವಲ್ ಗ್ರಾಮದ 270 ಎಕರೆ ಡಿನೋಟಿಫಿಕೇಷನ್, ಕೊತ್ತನೂರು ಗ್ರಾಮದ 10 ಗುಂಟೆ ಡಿನೋಟಿಫಿಕೇಷನ್, ಕೊತ್ತನೂರು ಗ್ರಾಮದ 3.18 ಎಕರೆ ಡಿನೋಟಿಫಿಕೇಷನ್, ಚಳ್ಳಕೆರೆಯ 2.16 ಎಕರೆ ಡಿನೋಟಿಫಿಕೇಷನ್, ಥಣಿಸಂದ್ರದ 2.21 ಎಕರೆ ಡಿನೋಟಿಫಿಕೇಷನ್, ಗುಡ್ಡದಹಳ್ಳಿಯ 1.20 ಎಕರೆ ಡಿನೋಟಿಫಿಕೇಷನ್ ಪ್ರಕರಣ.

ಹಲಗೆವಡೇರಹಳ್ಳಿ 6.18 ಗುಂಟೆ ಡಿನೋಟಿಫಿಕೇಷನ್, ಬಿಳೇಕಹಳ್ಳಿ 1.17ಎಕರೆ ಡಿನೋಟಿಫಿಕೇಷನ್, ಹುಳಿಮಾವು 2.10 ಎಕರೆ ಡಿನೋಟಿಫಿಕೇಷನ್, ಬನಶಂಕರಿ 5ನೇ ಹಂತ 2.36 ಎಕರೆ ಡಿನೋಟಿಫಿಕೇಷನ್, ರಾಚೇನಹಳ್ಳಿ 35.12 ಎಕರೆ ಡಿನೋಟಿಫಿಕೇಷನ್, ಕೊತ್ತನೂರು ಗ್ರಾಮದ 31 ಗುಂಟೆ ಡಿನೋಟಿಫಿಕೇಷನ್, ಲೊಟ್ಟೆಗೊಲ್ಲನಹಳ್ಳಿ 3.33 ಎಕರೆ ಡಿನೋಟಿಫಿಕೇಷನ್, ವಲಗೇರಹಳ್ಳಿ 5.10 ಎಕರೆ ಡಿನೋಟಿಫಿಕೇಷನ್ ಮತ್ತು ನಾಗರಭಾವಿ 11.9 ಎಕರೆ ಡಿನೋಟಿಫಿಕೇಷನ್ ಪ್ರಕರಣ.

English summary
Karnataka government filed appeal in the Supreme Court against Karnataka high court order that quashed 15 cases registered against Karnataka BJP president B.S.Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X