ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟದ ಫಲ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ

ಅಂಗನವವಾಡಿ ಕಾರ್ಯಕರ್ತೆಯರಿಗೆ 1000 ರು ಹಾಗೂ ಸಹಾಕಿಯರಿಗೆ 500 ರು ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್. 10 : ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಇತ್ತೀಚೆಗೆ ನಡೆದ ಬೃಹತ್ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.

ಅಂಗನವವಾಡಿ ಕಾರ್ಯಕರ್ತೆಯರಿಗೆ 1000 ರು ಹಾಗೂ ಸಹಾಕಿಯರಿಗೆ 500 ರು ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. [ಅನ್ನ, ನೀರು ಇಲ್ಲದೆ ಪರದಾಡಿದ ಅಂಗನವಾಡಿ ಕಾರ್ಯಕರ್ತೆಯರು!]

ಈ ಮೊದಲು ಇದ್ದ ಕಾರ್ಯಕರ್ತೆಯರ ಗೌರವಧನ 7 ಸಾವಿರ ರು.ದಿಂದ ದಿಂದ 8 ಸಾವಿರ ರು. ಸಹಾಯಕಿಯರ ಗೌರವಧನ 3,500ರಿಂದ 4,000ಕ್ಕೆ ಹೆಚ್ಚಳ ಮಾಡಿ ಸಭೆಯಲ್ಲಿ ತೀರ್ಮಾನಿಸಲಾಯಿತು. [ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಮತ್ತೆ ಹೋರಾಟ : ವರಲಕ್ಷ್ಮ]

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳ ಮತ್ತು ವಿವಿಧ ಬೇಡಿಕೆಗಳ ಸಂಬಂಧ ಚರ್ಚಿಸಲು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.

ಏಪ್ರಿಲ್‌ 1ರಿಂದ ಜಾರಿಗೆ

ಏಪ್ರಿಲ್‌ 1ರಿಂದ ಜಾರಿಗೆ

ಅಂಗನವವಾಡಿ ಕಾರ್ಯಕರ್ತೆಯರಿಗೆ 1000 ರು ಹಾಗೂ ಸಹಾಕಿಯರಿಗೆ 500 ವೇತನ ಹೆಚ್ಚಳ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಮುಂದಿನ ವರ್ಷ ಬಜೆಟ್ ನಲ್ಲಿ ಮತ್ತೆ ಹೆಚ್ಚಳ ಇಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.

ಹಲವರು ಸಭೆಯಲ್ಲಿ ಭಾಗಿ

ಹಲವರು ಸಭೆಯಲ್ಲಿ ಭಾಗಿ

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ, ಉಪಾಧ್ಯಕ್ಷೆ ಯಮುನಾ ಗಾಂವ್ಕರ್, ಸಿಪಿಐ ಮುಖಂಡ ಮಾಜಿ ಶಾಸಕ ಶ್ರೀರಾಮ ರೆಡ್ಡಿ, ಹಿರಿಯ ಕಾರ್ಮಿಕ ಮುಖಂಡ ವಿಜೆಕೆ ನಾಯರ್‌ ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಇವರ ಪ್ರಮುಖ ಬೇಡಿಕೆ ಏನಿತ್ತು?

ಇವರ ಪ್ರಮುಖ ಬೇಡಿಕೆ ಏನಿತ್ತು?

ಸದ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವ 7,000 ಗೌರವಧನವನ್ನು 10,000ಕ್ಕೆ ಹೆಚ್ಚಳ ಮಾಡಬೇಕು. ಸಹಾಯಕಿಯರಿಗೆ ಇರುವ 3,500 ಗೌರವಧನವನ್ನು ಕನಿಷ್ಠ 7,500ಕ್ಕೆ ಹೆಚ್ಚಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಅಹೋರಾತ್ರಿ ಪ್ರತಿಭಟನೆ

ಅಹೋರಾತ್ರಿ ಪ್ರತಿಭಟನೆ

ಒಟ್ಟು 22 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ ಬಳಿ ಮಾರ್ಚ್‌ನಲ್ಲಿ ನಾಲ್ಕು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತೆಯರು ಸರ್ಕಾರದ ಗಮನ ಸೆಳೆದಿದ್ದರು.

English summary
Karnataka government have increased the honorarium of Anganwadi workers & helpers by Rs 1000 and 500 a month respectively. Chief Minister Siddaramaiah made this announcement in Bengaluru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X