ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲು ಸರ್ಕಾರದ ನಿರ್ಧಾರ

|
Google Oneindia Kannada News

ಬೆಂಗಳೂರು, ಆಗಸ್ಟ್ 1: ರಾಜ್ಯದಲ್ಲಿ ತಲೆದೋರಿರುವ ಮರಳಿನ ಅಭಾವ ಹಾಗೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದೇಶದಿಂದ ಮರಳನ್ನು ತರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೆರೆ ದೇಶಗಳಾದ ಬರ್ಮಾ, ಮಲೇಷ್ಯಾ, ಥಾಯ್ಲೆಂಡ್ ನಿಂದ ಮರಳನ್ನು ತಯಾರಿಸಲು ನಿರ್ಧರಿಸಲಾಗಿದ್ದು, ಇದು ಅನುಷ್ಠಾನಕ್ಕೆ ಬಂದರೆ, ಗ್ರಾಹಕರಿಗೆ 25 ಕೆ.ಜಿ. ಬ್ಯಾಗ್ ಗಳಲ್ಲಿ ಮರಳು ಸಿಗಲಿದೆ.

ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ

ಅಂದ ಹಾಗೆ, ಕಡಿಮೆ ದರಲ್ಲಿ ಈ ಮರಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಗ್ರಾಹಕರಿಗೆ ಅನುಕೂಲವೂ ಆಗಲಿದ್ದು, ರಾಜ್ಯದ ಪ್ರಾಕೃತಿಕ ಸಂಪತ್ತು ಉಳಿಯುವ ನಿಟ್ಟಿನಲ್ಲಿ ಮರಳು ಆಮದು ಸಹಕಾರಿಯಾಗಲಿದೆ ಎಂದು ಸರ್ಕಾರ ಆಲೋಚಿಸಿದೆ.

Karnataka Government to import Sand from Foreign countries to curb illegal sand Mafia in State

ಕಡಿಮೆ ದರದಲ್ಲಿ ಮರಳು ಲಭ್ಯವಾದರೆ, ಅಕ್ರಮ ಮರಳುಗಾರಿಕೆಗೆ ತಾನೇ ತಾನಾಗಿ ಕಡಿವಾಣ ಬೀಳುತ್ತದೆ ಎಂಬುದು ರಾಜ್ಯ ಸರ್ಕಾರದ ವಿಚಾರವಾಗಿದೆ.

ಹೆಚ್ಚುತ್ತಿರುವ ಮರಳು ಬೇಡಿಕೆಯಿಂದಾಗಿ, ಅಕ್ರಮ ಮರಳು ದಂಧೆಕೋರರು ಹಲವಾರು ನದಿಪಾತ್ರಗಳನ್ನು ಬಗೆದು ನದಿಗಳಿಗೆ ಹೆಚ್ಚು ಹಾನಿ ಮಾಡುತ್ತಿದ್ದಾರೆ. ಇದರಿಂದ ನದಿಗಳು ಒಂದೇ ದಿಕ್ಕಿನಲ್ಲಿ ಹರಿಯುವ ಬದಲು ಅಕ್ಕಪಕ್ಕದ ದಡಗಳ ಕಡೆಗೆ ಹರಿಯುವುದರಿಂದ ನಿಸರ್ಗಕ್ಕೆ ಹಾನಿಯಾಗುವ ಸಂಭವ ತಲೆದೋರಿದೆ.

10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಬ್ರಹ್ಮಣ್ಯಪುರ ಕೆರೆ ಪುನಶ್ಚೇತನ ಆರಂಭ10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಬ್ರಹ್ಮಣ್ಯಪುರ ಕೆರೆ ಪುನಶ್ಚೇತನ ಆರಂಭ

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೇ ವಾರದಲ್ಲಿ ವಿದೇಶಿ ಮರಳು ಆಮದುದಾರರಿಗೆ ಪರವಾನಗಿ ಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

English summary
To curb illegal sand mafia in Karnataka, State government has decided to import sand from foreign Countries like Burma, Malaysia and Thailand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X