ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಸಾಲ ಮನ್ನಾದ ಹೊರೆ ತಗ್ಗಿಸಲು 'ಭಾಗ್ಯ'ಗಳ ಅನುದಾನಕ್ಕೆ ಕತ್ತರಿ

|
Google Oneindia Kannada News

ಬೆಂಗಳೂರು, ಜುಲೈ 10: ಕೃಷಿಕರು ಸಹಕಾರಿ ಬ್ಯಾಕ್ ಗಳಲ್ಲಿ ಮಾಡಿದ ಐವತ್ತು ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ ಮೇಲೆ ಕಾಂಗ್ರೆಸ್ ನೇತೃತ್ಚದ ರಾಜ್ಯ ಸರಕಾರ ಜನಪ್ರಿಯ ಯೋಜನೆಗಳಿಗೆ ಮೀಸಲಾದ ಅನುದಾನಕ್ಕೆ ಕತ್ತರಿ ಹಾಕಲು ನಿರ್ಧಾರ ಮಾಡಿದೆ.

ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾಕ್ಕೆ ಪ್ರಧಾನಿಗೆ ಸಿಎಂ ಪತ್ರರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾಕ್ಕೆ ಪ್ರಧಾನಿಗೆ ಸಿಎಂ ಪತ್ರ

ಅನ್ನ ಭಾಗ್ಯದಿಂದ ಶಾದಿ ಭಾಗ್ಯದವರೆಗೆ ಸರಕಾರವು ಘೋಷಿಸಿದ ಯೋಜನೆಗಳ ಅನುದಾನದಲ್ಲಿ ಕತ್ತರಿ ಆಡಿಸಿ ರೈತರ ಸಾಲ ಮನ್ನಾ ಯೋಜನೆಯ 8,165 ಕೋಟಿ ರುಪಾಯಿ ಸರಿಹೊಂದಿಸಲು ತೀರ್ಮಾನಿಸಿದೆ. ಈಗಾಗಲೇ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದ ರಾಜ್ಯ ಸರಕಾರಕ್ಕೆ ಅವೆಲ್ಲ ಹೊರೆಯಾಗಿ ಪರಿಣಮಿಸಿದೆ.

Karnataka government cut 'Bhagyas' to cover loan waiver burden

ಇದೇ ಸ್ಥಿತಿ ಮುಂದುವರಿದರೆ ಈ ಸಲದ ಆರ್ಥಿಕ ವರ್ಷದ ಕೊನೆಗೆ ರಾಜ್ಯ ಸರಕಾರದ ಸಾಲ ಮೊತ್ತ 2,42,420 ಕೋಟಿ ಆಗುವ ಸಾಧ್ಯತೆ ಇದ್ದು, ಅದಕ್ಕೆ ಕೃಷಿ ಸಾಲ ಮನ್ನಾದ 8,165 ಕೋಟಿ ರುಪಾಯಿ ಕೂಡ ಸೇರಿಕೊಳ್ಳಲಿದೆ. ಆದ್ದರಿಂದ ಜನಪ್ರಿಯ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಕಡಿಮೆ ಮಾಡಿ, ಕೃಷಿ ಸಾಲ ಮನ್ನಾದ ಮೊತ್ತವನ್ನು ಸರಿದೂಗಿಸಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ಸಾಲ ಮನ್ನಾದ ಹಣೆ ಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ - ಎಚ್‍ಡಿಕೆಸಾಲ ಮನ್ನಾದ ಹಣೆ ಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ - ಎಚ್‍ಡಿಕೆ

ಹಣಕಾಸು ಸ್ಥಿತಿಯನ್ನು ನಿರ್ವಹಿಸುವ ಕಾರಣಕ್ಕೆ ಈ ಆರ್ಥಿಕ ವರ್ಷದಲ್ಲಿ ನಾಲ್ಕು ಸಾವಿರ ಕೋಟಿ, ಮುಂದಿನ ಬಾರಿ ಬಾಕಿ ನಾಲ್ಕು ಸಾವಿರ ಕೋಟಿ ಮೊತ್ತವನ್ನು ಬ್ಯಾಂಕ್ ಗಳಿಗೆ ಪಾವತಿಸಲು ಸರಕಾರ ಚಿಂತನೆ ನಡೆಸಿದೆ. ಆದರೆ ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿ ಕ್ರಮವಾಗಿ ಹತ್ತು ಹಾಗೂ ಮೂವತ್ತು ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ.

ಆ ಹೊರೆಯನ್ನು ಅಲ್ಲಿನ ಸರಕಾರಗಳು ಹೇಗೆ ಭರಿಸುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ.

English summary
Karnataka state government now looking to cut populist schemes allocation to manage farmers loan waive off burden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X