ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ

|
Google Oneindia Kannada News

ಬೆಂಗಳೂರು, ಜ.27 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಜಾರಕಿಹೊಳಿ ಅವರು ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ.

ತಮಗೆ ಅಬಕಾರಿ ಖಾತೆ ಬೇಡ ಅಬಕಾರಿ ಖಾತೆಯಿಂದ ಮುಕ್ತಿ ನೀಡಿ, ಜನರ ಬಳಿ ಹೋಗುವಂತಹ ಖಾತೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎರಡು ಬಾರಿ ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದರು. ಆದರೆ, ಖಾತೆ ಬದಲಾವಣೆ ಮಾಡಿರಲಿಲ್ಲ.

Satish Jarkiholi

ಕಳೆದ ಒಂದು ವಾರದಿಂದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮಂಗಳವಾರ ಬೆಳಗ್ಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕಳುಹಿಸಿದ್ದಾರೆ. ತಿರುಪತಿ ಮತ್ತು ವಿಜಯಪುರ ಪ್ರವಾಸದಲ್ಲಿರುವ ಸಿಎಂ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ. [ಅಬಕಾರಿ ಮಂತ್ರಿ ಖಾತೆ, ಸತೀಶ ಜಾರಕಿಹೊಳಿ ಕ್ಯಾತೆ]

ಯಾವುದೇ ಒತ್ತಡವಿಲ್ಲ : 'ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಿಜ' ಎಂದು ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 'ಯಾವುದೇ ಒತ್ತಡ ಹೇರಲು ರಾಜೀನಾಮೆ ನೀಡುತ್ತಿಲ್ಲ. ಸಮಾಜ ಸೇವೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ' ಅವರು ತಿಳಿಸಿದ್ದಾರೆ. [ಸಚಿವರು ಸ್ಮಶಾನದಲ್ಲಿ ರಾತ್ರಿ ಕಳೆದಿದ್ದೇಕೆ? ಇಲ್ಲಿದೆ ಉತ್ತರ]

'ಖಾತೆ ಬದಲಾವಣೆ ಮಾಡುವಂತೆ ಒತ್ತಡ ಹೇರುವ ಸಲುವಾಗಿ ರಾಜೀನಾಮೆ ನೀಡಿಲ್ಲ, ಮೂಢನಂಬಿಕೆ ಹೋಗಲಾಡಿಸುವ ಅಭಿಯಾನದಲ್ಲಿ ನಾನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ' ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

English summary
Yamakanamardi Congress MLA and Karnataka Excise Minister Satish Jarkiholi resigned on Tuesday. Satish Jarkiholi send his resignation letter to CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X