ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ರೇಶನ್ ಕಾರ್ಡ್ ಹುಡುಕಿಕೊಡಿ, ಬಹುಮಾನ ಗೆಲ್ಲಿ

By Madhusoodhan
|
Google Oneindia Kannada News

ಬೆಂಗಳೂರು, ಜೂನ್. 14: ನಕಲಿ ರೇಶನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರಕ್ಕೆ, ಸಮಾಜಕ್ಕೆ ಮೋಸ ಮಾಡುತ್ತಿರುವವರ ಮಾಹಿತಿ ನೀಡಿದರೆ 400 ರು. ಬಹುಮಾನ ಪಡೆದುಕೊಳ್ಳಬಹುದು.

ಅನರ್ಹ ಪಡಿತರ ಚೀಟಿಗಳನ್ನು ಕಂಡುಹಿಡಿಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಅಕ್ರಮಗಳು ನುಸುಳುತ್ತಿವೆ. ಹಾಗಾಗಿ ಬಹುಮಾನ ನೀಡುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. [ಗಮನಿಸಿ, 120 ರು.ಗಿಂತ ಹೆಚ್ಚಿನ ದರಕ್ಕೆ ಬೇಳೆಕಾಳು ಮಾರುವಂತಿಲ್ಲ]

karnataka

ದೂರುಗಳನ್ನು ಇಲಾಖೆಯ ವೆಬ್ ಸೈಟ್ ಮೂಲಕವೇ ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಪಡಿತರ ಹಂಚಿಕೆಗೆ ನೆರವಾಗುವಂತೆ ನ್ಯಾಯಬೆಲೆ ಅಂಗಡಿಗಳನ್ನು ನೋಡಿಕೊಳ್ಳಲು ಮೂರು ಸದಸ್ಯರ ಸಮತಿಯೊಂದನ್ನು ನೇಮಿಸಲಾಗಿದೆ. ಸಮಿತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ಯಾವಾಗ ಬೇಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸುವ ಅಧಿಕಾರ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]

ಆಧಾರ್ ಲಿಂಕ್ ಮಾಡಿಕೊಳ್ಳಿ
ಇನ್ನು ಪಡಿತರ ಚೀಟಿ ಹೊಂದಿರುವವರು ಆಧಾರ್ ಸಂಖ್ಯೆ ನೀಡಲು ಈ ತಿಂಗಳ 30 ರವರೆಗೆ ಸರ್ಕಾರ ಅವಕಾಶ ನೀಡಿದ್ದು. ಅಷ್ಟರೊಳಗಾಗಿ ಸಂಖ್ಯೆ ನೀಡದಿದ್ದರೆ, ಪಡಿತರ ಸೌಲಭ್ಯಗವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ತೊಗರಿಗೆ ಮನವಿ
ಕೇಂದ್ರ ಸರ್ಕಾರ ಬೇಳೆ ಕಾಳುಗಳನ್ನು ಕೆಜಿಗೆ 120 ರು. ಗಿಂತ ಅಧಿಕ ದರಕ್ಕೆ ಮಾರಾಟ ಮಾಡಬಾರದು ಎಂದು ಹೇಳಿದೆ. ಸದ್ಯ ರಾಜ್ಯಕ್ಕೆ 1 ಸಾವಿರ ಟನ್ ರಷ್ಟು ತೊಗರಿ ಬೇಳೆ ರವಾನೆಯಾಗುತ್ತಿದೆ. ಬೆಲೆಯನ್ನು ಇಳಿಕೆ ಮಾಡುವ ಸಲುವಾಗಿ ಮತ್ತೆ 1 ಟನ್ ರಷ್ಟು ತೊಗರಿ ಬೇಳೆ ನೀಡಲು ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಇಳಿದ ದ್ವಿದಳ ಧಾನ್ಯ ಬೆಲೆ:
ಕಳೆದ ಒಂದು ತಿಂಗಳಲ್ಲಿ ದೇಶದಾದ್ಯಂತ ದ್ವಿದಳ ಧಾನ್ಯಗಳ ಬೆಲೆ ಇಳಿಕೆ ಆಗಿದ್ದು ಬೇಡಿಕೆ ಮತ್ತು ಪೂರೈಕೆ ನಡುವೆ ಕೊರತೆ ತಗ್ಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕಳೆದ ವರ್ಷ 170 ಲಕ್ಷ ಟನ್‌ ಬೇಳೆ ಕಾಳು ಉತ್ಪಾದನೆ ಆಗಿತ್ತು. ಆದರೆ ಉತ್ಪಾದನೆ ಮತ್ತು ಪೂರೈಕೆ ನಡುವೆ 176 ಲಕ್ಷ ಟನ್‌ ಕೊರತೆ ಏಕಾಏಕಿ ದರ ಏರಿಕೆಗೆ ಕಾರಣವಾಗಿತ್ತು.

English summary
Food and Civil Supplies Minister Dinesh Gundurao on Monday announced the scheme to curb corruption and irregularities in public distribution system. Any help in detecting bogus ration cards would fetch you a reward of 400 per bogus ration card detected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X