ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಬೇಲೂರು ಅಪಘಾತ, ಇನ್ನಿತರ ಸುದ್ದಿಗಳು

By Mahesh
|
Google Oneindia Kannada News

ಬೇಲೂರು, ಜುಲೈ 27: ಹಾಸನ ಹಾಗೂ ಚಿಕ್ಕಮಗಳೂರು ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೆಂಪೊ ಟ್ರಾವಲರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೃತರೆಲ್ಲರೂ ಬೆಂಗಳೂರಿನಿಂದ ಯಾತ್ರಾರ್ಥಿಗಳಾಗಿ ಶೃಂಗೇರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ವಸಂತನಗರದ ನಿವಾಸಿಗಳೆಂದು ಹೇಳಲಾಗಿದ್ದು,ಘಟನೆಯಲ್ಲಿ ಮಣಿಕಂಠ (24), ಶ್ರೀನಿವಾಸ್ (26), ಭರತ್ (24), ವಿಜಯ್ (30), ಪ್ರಕಾಶ್ (20), ಪ್ರವೀಣ್ (20)ಹಾಗೂ ಉಮೇಶ್ (20) ಎಂಬುವವರು ಗಂಭೀರ ಗಾಯಗೊಂಡಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಶೃಂಗೇರಿಗೆ ಹೊರಟಿದ್ದ ಟೆಂಪೊ ಟ್ರಾವಲರ್ ಹಾಸನದ ತಣ್ಣೀರುಹಳ್ಳದಲ್ಲಿ ಬಲಕ್ಕೆ ತಿರುಗಿ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ಕಡೆಗೆ ಹೊರಟಿತ್ತು. ಬೇಲೂರು ತಾಲೂಕಿನ ಕನ್ನನಾಯಕನಹಳ್ಳಿ ಸಮೀಪದ ಹೋಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರಿನಿಂದ ಹುಣಸೂರಿನ ಕಡೆಗೆ ಲಾರಿ ತೆರಳುತ್ತಿತ್ತು.[ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು]

ಟೆಂಪೋದಲ್ಲಿ ಒಟ್ಟು 11 ಜನರು ಪ್ರಯಾಣಿಸುತ್ತಿದ್ದು, ಅಪಘಾತದಿಂದ 4 ಜನರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಈ ಅಪಘಾತದಲ್ಲಿ 6 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ತೆರಳಿ ತನಿಖೆ ಕೈಗೊಂಡಿದ್ದಾರೆ.

ಹಾಸನದ ಜಾವಗಲ್, ಚಿತ್ರದುರ್ಗದ ಚಳ್ಳಕೆರೆ, ಶಿವಮೊಗ್ಗದ ಶಿರಾಳಕೊಪ್ಪ, ಹೊಳೆಹೊನ್ನೂರು, ಕೋಲಾರ ಗ್ರಾಮಾಂತರ, ಉಡುಪಿಯ ಕಾಪು, ತುಮಕೂರಿನ ತುರುವೇಕೆರೆ ಮುಂತಾದೆಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ರೌಂಡಪ್ ಮುಂದಿದೆ ಓದಿ...

ಜಾವಗಲ್ : ಜೂಜಾಡುತ್ತಿದ್ದ 11 ಜನರ ಬಂಧನ

ಜಾವಗಲ್ : ಜೂಜಾಡುತ್ತಿದ್ದ 11 ಜನರ ಬಂಧನ

ಜಾವಗಲ್ ಗ್ರಾಮದ ಕೆರೆಯ ಹಿಂಭಾಗ ಪಂಪ್ ಹೌಸ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಪಿಎಸ್‍ಐ ರಾಘವೇಂದ್ರಬಾಬು, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಕ್ಕಿದೆ. ಸಿಬ್ಬಂದಿಗಳೊಂದಿಗೆ ರಾಘವೇಂದ್ರಬಾಬು ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.

1) ಮಂಜುನಾಥ ಬಿನ್ ಶಿವಶಂಕರಶೆಟ್ಟಿ, 52ವರ್ಷ, 2) ಕುಮಾರಸ್ವಾಮಿ ಬಿನ್ ಗಿರಿಯಪ್ಪ, 50ವರ್ಷ, 3) ರಂಗನಾಥ ಬಿನ್ ಕೃಷ್ಣಶೆಟ್ಟಿ, 32ವರ್ಷ, 4) ರಂನಾಥ ಬಿನ್ ಲಕ್ಷ್ಮಣಶೆಟ್ಟಿ, 52ವರ್ಷ, 5) ರಂಗಶೆಟ್ಟಿ ಬಿನ್ ರಾಮಶೆಟ್ಟಿ, 56ವರ್ಷ, 6) ಕುಮಾರ ಬಿನ್ ಬಾಲಕೃಷ್ಣಶೆಟ್ಟಿ, 50ವರ್ಷ, 7)ನಾಗರಾಜು ಬಿನ್ ಚಂದ್ರಶೇಖರ, 38ವರ್ಷ 8) ಆನಂದ ಬಿನ್ ಶಿವಣ್ಣ, 34ವರ್ಷ, 9) ಹನುಮಂತಪ್ಪ ಬಿನ್ ಗಿರಿಯಪ್ಪ, 52ವರ್ಷ 10) ಅಶೋಕ ಬಿನ್ ಸಿದ್ದಪ್ಪಶೆಟ್ಟಿ, 36ವರ್ಷ, 11) ಶಿವಕುಮಾರ ಬಿನ್ ನೀಲಕಂಠಶೆಟ್ಟಿ, 35ವರ್ಷ, ಎಲ್ಲರೂ ಜಾವಗಲ್ ಗ್ರಾಮ ಎಂದು ತಿಳಿದು ಬಂದಿದೆ.

ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 13,830/- ನಗದನ್ನು ಅಮಾನತ್ತುಪಡಿಸಿಕೊಂಡು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಚಿತ್ರದುರ್ಗ : ವಿಷ ಕುಡಿದು ರೈತನ ಸಾವುಚಿತ್ರದುರ್ಗ

ಚಿತ್ರದುರ್ಗ : ವಿಷ ಕುಡಿದು ರೈತನ ಸಾವುಚಿತ್ರದುರ್ಗ

ಚಳ್ಳಕೆರೆ ತಾಲ್ಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ವಾಸಿ ಸಿದ್ದೇಶ (22)ರವರು ತಮ್ಮ ಜಮೀನಿನಲ್ಲಿ ಇತ್ತಿಚೆಗೆ ನಾಲ್ಕು ಬೋರ್ ವೆಲ್ ಗಳನ್ನು ಹಾಕಿಸಿದ್ದರು.

ಬೋರ್ ವೆಲ್ ಫೇಲ್ ಆದ ಕಾರಣ ಮತ್ತು ಸಕಾಲಕ್ಕೆ ಮಳೆ ಬಾರದ ಕಾರಣ ತಾನು ಓಬಳಾಪುರ ಶಾಖೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 37,000/- ರೂಪಾಯಿ ಸಾಲ ಮತ್ತು ಬಂಗಾರದ ಒಡವೆಗಳನ್ನು ಅಡವಾಗಿಟ್ಟು 50,000/- ರೂಪಾಯಿಗಳನ್ನು ಸಾಲ ಮಾಡಿದ್ದು, ಸದರಿ ಸಾಲವನ್ನು ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಜಮೀನಿನಲ್ಲಿ ಯಾವುದೋ ವಿಷವನ್ನು ಸೇವಿಸಿ ಅಸ್ವಸ್ಥನಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಬಳಿ ಪರೀಕ್ಷಿಸಿದಾಗ ಸಿದ್ದೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಶಿವಮೊಗ್ಗ ಶಿರಾಳಕೊಪ್ಪ ಠಾಣೆ

ಶಿವಮೊಗ್ಗ ಶಿರಾಳಕೊಪ್ಪ ಠಾಣೆ

ಶಿರಾಳಕೊಪ್ಪ ಠಾಣೆಃ ಕಳ್ಳಭಟ್ಟಿ ಪ್ರಕರಣ

ಶಾಂತಿಭಾಯಿ & ಇತರೆ 3 ಜನರು ಕೊರಟಿಗೆರೆ ತಾಂಡಾ ಶಿಕಾರಿಪುರ ಇವರುಗಳೆಲ್ಲರು ಕೊರಟಗೆರೆ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದು, ದಾಳಿ ಮಾಡಿ ರೂ. 960/- ಗಳ ಕಳ್ಳಭಟ್ಟಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.


ಹೊಳೆಹೊನ್ನೂರು ಠಾಣೆ ಇಸ್ಪೀಟು ಜೂಜಾಟ:

ಪಿರ್ಯಾದಿ ಪಿ.ಎಸ್.ಐ ಹೊಳೆಹೊನ್ನೂರು ಠಾಣೆ ಬಂದ ಖಚಿತ ವರ್ತಮಾನದ ಮೇರೆಗೆ ಮೈದೂಳಲು ಗ್ರಾಮದ ಬಸ್ ಸ್ಟಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಂದರ್ ಬಾಹರ್ ಇಸ್ಪೀಟ್ ಅಟ ಅಡುತ್ತಿದ್ದವರನ್ನು ದಸ್ತಗಿರಿ ಮಾಡಿ 3 ಮೋಟಾರ್ ಸೈಕಲ್ ಹಾಗೂ 8100/- ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ

ಕೋಲಾರ: ಹಲ್ಲೆ ಮತ್ತು ಪ್ರಾಣ ಬೆದರಿಕೆ

ಕೋಲಾರ: ಹಲ್ಲೆ ಮತ್ತು ಪ್ರಾಣ ಬೆದರಿಕೆ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದ ವಾಸಿಯಾದ ಚಲಪತಿ ರವರು ಅವರ ಗ್ರಾಮದ ಬಳಿ ಇರುವ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದರು.

ಗುಡಿಸಿಲಿನಲ್ಲಿ ಮಲಗಿದ್ದಾಗ ಪಿರ್ಯಾದಿಯ ಅತ್ತೆಯಾದ ರತ್ನಮ್ಮ, ಆಕೆಯ ಅಳಿಯಂದಿರಾದ ದೇವರಾಜ , ರವಿ ಮತ್ತು ಆಕೆಯ ಮಕ್ಕಳಾದ ಲಕ್ಷ್ಮೀದೇವಿ ಹಾಗೂ ಮಂಜುಳ ರವರು ಅಕ್ರಮ ಗುಂಪುಕಟ್ಟಿಕೊಂಡು ಪಿರ್ಯಾದಿಯ ಬಳಿ ಬಂದು ಸದರಿ ಜಾಗ ತಮ್ಮದು ಎಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಚಲಪತಿ ರವರ ಕಿವಿಗೆ ಮತ್ತು ದೊಣ್ಣೆಯಿಂದ ಎಡಭುಜಕ್ಕೆ ಹೊಡೆದು ಗಾಯಪಡಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

ಉಡುಪಿ: ಕಾಪು ಅಪಘಾತ

ಉಡುಪಿ: ಕಾಪು ಅಪಘಾತ

ಕಾಪು: ದಿನಾಂಕ 26/07/2015 ರಂದು ಪಿರ್ಯಾದಿದಾರರಾದ ಪಿ.ಜಯರಾಜ್ (44) ತಂದೆ: ಪಾಲ್ ಸತ್ಯ ಮೂರ್ತಿ ವಾಸ: ಸೇವಾಲಿಗುಡ್ಡೆ ಪೆರಮನೂರು ತೊಕ್ಕೊಟ್ಟು ಮಂಗಳೂರು ಇವರು ಬಸ್ಸು ನಂಬ್ರ ಕೆಎ 19 ಡಿ 2700 ನೇದನ್ನು ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾಯಸಿಕೊಂಡು ಬರುತ್ತಿದ್ದರು.

ಬೆಳಿಗ್ಗೆ 08:15 ಗಂಟೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮುಳೂರು ಗ್ರಾಮದ ನಾರಾಯಣ ಗುರು ಸಭಾ ಭವನದ ಎದುರು ರಾಷ್ಡ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಆರೋಪಿ ಚಾಲಕ ಟಿಎನ್ 32 ಎಬಿ 2732 ನೇ ಈಚರ್ ಕ್ಯಾಂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಪಿ.ಜಯರಾಜ್ ಚಲಾಯಿಸುತ್ತಿದ್ದ ಬಸ್ಸಿನ ಎಡಗಡೆಯಿಂದ ಬಸ್ಸನ್ನು ಓವರ್‌‌ಟೇಕ್ ಮಾಡಿ ಬಸ್ಸಿನ ಎದುರುಗಡೆ ಉಡುಪಿ ಕಡೆಗೆ ರಾಷ್ಡ್ರೀಯ ಹೆದ್ದಾರಿ 66 ರ ಎಡಬದಿಯಲ್ಲಿ ಹೋಗುತ್ತಿದ್ದ ಕೆಎ 14 ಇಹೆಚ್ 0260 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರನ್ನು ಲಾರಿಯು ಸ್ವಲ್ಪ ದೂರದವರೆಗೆ ದೂಡಿಕೊಂಡು ಹೋಗಿ, ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಗಂಭೀರ ಗಾಯಗೊಂಡ ಮೋಟರ್ ಸೈಕಲ್ ಸವಾರ ಮತ್ತು ಸಹಸವಾರರಾದ ನಾಗರಾಜ ಹಾಗೂ ಮಲ್ಲಿಕಾರ್ಜುನ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಆರೋಪಿ ಈಚರ್ ಕ್ಯಾಂಟರ್ ಚಾಲಕನು ಲಾರಿಯನ್ನು ಸ್ವಲ್ಪ ಮುಂದೆ ನಿಲ್ಲಿಸಿ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 147/2015 ಕಲಂ 279, 304(ಎ) ಐಪಿಸಿ ಮತ್ತು ಕಲಂ 134(ಎ)(ಬಿ) ಐ.ಎಮ್.ವಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ತುಮಕೂರು : ತುರುವೇಕೆರೆ ಪೊಲೀಸ್ ಠಾಣಾ

ತುಮಕೂರು : ತುರುವೇಕೆರೆ ಪೊಲೀಸ್ ಠಾಣಾ

ಪಿರ್ಯಾದಿಯ ಕೆಂಪೇಗೌಡರವರ ಮಗ ಮೂರ್ತಿಗೌಡ ತಾಳಕೆರೆ ತುರುವೇಕೆರೆ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ

ನಾನು ನಮ್ಮ ತೋಟದ ಹತ್ತಿರ ಹೋಗುವಾಗ್ಗೆ ನಮ್ಮ ಚಿಕ್ಕಪ್ಪರವರ ಮಗ ಟಿ,ಬಿ ಶ್ರೀನಿವಾಸ್ ರವರ ತೋಟದ ಮುಖಾಂತರ ಹಾದು ಹೋಗುತ್ತಿದ್ದೆನು, ನೇರಳೆಮರದಲ್ಲಿ ಯಾರೋನೇತಾಡುತ್ತಿದ್ದನ್ನು ಕಂಡು ಹತ್ತಿರ ಹೋಗಿ ನೋಡಲಾಗಿ ನಮ್ಮ ಚಿಕ್ಕಪ್ಪ ರವರಾದ ಬಸವಣ್ಣ ರವರ ಮಗ ಶ್ರೀನಿವಾಸ ಆತನ ಹೆಂಡತಿ ಕಲಾವತಿ ಎಂದು ತಿಳಿದು ಗ್ರಾಮ ಕೆಲವರಿಗೆ ಪೋನ್ ಮಾಡಿದೆನು.

ಶ್ರೀನಿವಾಸ ಮತ್ತು ಈತನ ಹೆಂಡತಿ ಕಲಾವತಿ ಇಬ್ಬರಿಗೂ 3-20 ಗುಂಟೆ ಜಮೀನು ಇದ್ದು ಕಲ್ಪತರು ಗ್ರಾಮೀಣ ಬ್ಯಾಂಕ್ ತುರುವೇಕೆರೆ ಇಲ್ಲಿ 60,000/- ರೂ ಸಾಲವನ್ನು ಮಾಡಿದ್ದು, ಮತ್ತು ತಾಳಕೆರೆ ವಿ,ಎಸ್,ಎಸ್,ಎನ್ ನಲ್ಲಿ ಶ್ರೀನಿವಾಸ 25.000/- ರೂ ಕಲಾವತಿ 15000 ರೂ ಸಾಲ ಮಾಡಿರುತ್ತಾರೆ, ಜೊತೆಗೆ 2 ಲಕ್ಷದ ವರೆಗೂ ಕೈ ಸಾಲ ಮಾಡಿರುವ ವಿಚಾರವನ್ನೇ ನನ್ನ ಜೊತೆ ಹೇಳಿಕೊಳ್ಳುತ್ತಿದ್ದರು

ಸಾಲದ ಬಾದೆ ತಾಳಲಾರದೆ ಪುರ ಅಮೃತ ಮಹಲ್ ಕಾವಲ್ ಜಮೀನಿನಲ್ಲಿ ಇರುವ ನೇರಳೆ ಮರಕ್ಕೆ ಶ್ರೀನಿವಾಸ ಮತ್ತು ಕಲಾವತಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ನನ್ನ ತಮ್ಮ ಶ್ರೀನಿವಾಸ ಮತ್ತು ಆತನ ಹೆಂಡತಿ ಕಲಾವತಿ ಮದುವೆಯಾಗಿ 12 ವರ್ಷ ಕಳೆದರೂ ಸಂಸಾರದಲ್ಲಿ ಯಾವುದೇ ಸಮಸ್ಯೆ ಇರಲ್ಲಿಲ್ಲ . ಕೈ ಸಾಲ ಮತ್ತು ಬ್ಯಾಂಕ್ ಸಾಲಗಳ ಸಮಸ್ಯೆಯಿಂದಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಹೊರತು ಇವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ,

English summary
Karnataka Crime round up July 27: Five killed and Six injured in an accident reported today from Hassan-Chikkamagluru road, All the deceased are said to be resident of Bengaluru and were on the way to visiti Sringeri Temple. Here are the other crime stories from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X