ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್ ಟೆನ್ ಕೋಮುು ಸೂಕ್ಷ್ಮ ರಾಜ್ಯಗಳು - ಕರ್ನಾಟಕಕ್ಕೆ ಕಂಚು

|
Google Oneindia Kannada News

ಬೆಂಗಳೂರು, ಆಗಸ್ಟ್ 30: ಕರ್ನಾಟಕ ಅಂದರೆ ಶಾಂತಿಪ್ರಿಯ ರಾಜ್ಯ, ಇಲ್ಲಿ ಜನರು ನೆಮ್ಮದಿಯಾಗಿದ್ದಾರೆ ಎಂಬುದು ಕಾಲಾಂತರದಿಂದ ಹೇಳಿಕೊಂಡು, ನಂಬಿಕೊಂಡು ಬಂದಿರುವ ಮಾತು. ಇದೀಗ ನಂಬಿಕೆಯ ಬೇರು ಅಲುಗಾಡುವಂಥ ಮಾಹಿತಿಯೊಂದು ಕೇಂದ್ರ ಗೃಹ ಸಚಿವಾಲಯದ ಮೂಲದಿಂದಲೇ ಹೊರಬಂದಿದೆ. ದೇಶದ ಕೋಮು ಸೂಕ್ಷ್ಮ ರಾಜ್ಯಗಳ ಪೈಕಿ ಮೂರನೇ ಸ್ಥಾನ ಕರ್ನಾಟಕ್ಕೆ. ಮೊದಲೆರಡು ಸ್ಥಾನದಲ್ಲಿ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಇದೆ.

2013ರಿಂದ 2016ರವರೆಗೆ ಕೋಮು ಸಂಘರ್ಷ ಪ್ರಕರಣಗಳ ಸಂಖ್ಯೆಯನ್ನು ಇಟ್ಟುಕೊಂಡು ಸ್ಥಾನಗಳನ್ನು ನೀಡಲಾಗಿದೆ. ಕರ್ನಾಟಕದಲ್ಲಿ 291 ಪ್ರಕರಣ ದಾಖಲಾಗಿದ್ದು, 19 ಮಂದಿ ಮೃತಪಟ್ಟರೆ, 865 ಮಂದಿಗೆ ಗಾಯಗಳಾಗಿವೆ. ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 57 ಪ್ರಕರಣಗಳು ನಡೆದಿವೆ.[ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಗಂಗಬೈರಯ್ಯಗೆ ಜಾಮೀನು]

Karnataka communally sensitive state NO.3

ಪರಮೇಶ್ವರ ಆಕ್ಷೇಪ: ಆದರೆ, ಈ ಪಟ್ಟಿಗೆ ಗೃಹ ಸಚಿವ ಜಿ.ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲೊಂದು-ಇಲ್ಲೊಂದು ಕೋಮು ಗಲಭೆ ಆಗಿರಬಹುದು. ಅದನ್ನೇ ಮುಂದು ಮಾಡಿ, ರಾಜ್ಯದ ಪರಿಸ್ಥಿತಿ ನಿರ್ಧರಿಸುವುದಕ್ಕೆ ಆಗಲ್ಲ. ರಾಜ್ಯದ ಬೇರೆ ಬೇರೆ ಭಾಗದಲ್ಲಿ ಸಣ್ಣಪುಟ್ಟ ಘಟನೆಗಳಾಗಿವೆ. ಒಂದು ಘಟನೆ ತುಂಬ ದೊಡ್ಡ ಮಟ್ಟದಲ್ಲಿ ಕೋಮುದ್ವೇಷ ಬಿತ್ತಿದ ಉದಾಹರಣೆಗಳಿಲ್ಲ ಎನ್ನುತ್ತಾರೆ.

2014ರಲ್ಲಿ 73 ಪ್ರಕರಣಗಳು ಕೋಮು ಸಂಘರ್ಷ ಪ್ರಕರಣ ದಾಖಲಾಗಿದ್ದರೆ, 2015ರಲ್ಲಿ 105 ಕೇಸುಗಳು ದಾಖಲಾಗಿದ್ದವು. ಇನ್ನು ಈ ವರ್ಷ ಇಲ್ಲಿವರೆಗೆ 40 ಪ್ರಕರಣ ದಾಖಲಾಗಿವೆ. ಮಂಗಳೂರು, ದಕ್ಷಿಣ ಕನ್ನಡದ ಕೆಲ ಭಾಗ, ಉತ್ತರಕನ್ನಡ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಕೋಲಾರ ಮತ್ತು ಬೆಂಗಳೂರಿನ ಕೆಲ ಭಾಗಗಳನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.[ಭೂ ಕಬಳಿಕೆ ವಿಚಾರಣೆಗೆ ಆ.31ರಂದು ಕೋರ್ಟ್ ಆರಂಭ]

Karnataka communally sensitive state NO.3

ದಕ್ಷಿಣ ಕನ್ನಡ ಜಿಲ್ಲೆ ತುಂಬ ಸೂಕ್ಷ್ಮ: ಲವ್ ಜಿಹಾದ್, ಗೋ ಸಾಗಣೆ, ಅನ್ಯ ಧರ್ಮೀಯರ ಜತೆಗೆ ಹೋಗುವಾಗ ಹಲ್ಲೆ.. ಇವೆಲ್ಲ ಸೇರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ತುಂಬ ಸೂಕ್ಷ್ಮವಾಗಿ ಮಾಡಿದೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಪ್ರಕಾರ, 2015ರಲ್ಲಿ 228 ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ ಈವರೆಗೆ 59 ಕೋಮು ಸಂಘರ್ಷ ಪ್ರಕರಣಗಳು ದಾಖಲಾಗಿವೆ. ಗೋ ಸಾಗಾಟ ಸಂದರ್ಭದಲ್ಲಿ ನಡೆಯುತ್ತಿರುವ ದಾಳಿಗಳು ಆತಂಕಕ್ಕೆ ಕಾರಣವಾಗಿವೆ.[ಕಲಬುರ್ಗಿ ಹತ್ಯೆಗೆ ಒಂದು ವರ್ಷ, ತನಿಖೆ ಎತ್ತ ಸಾಗಿದೆ?]

ಇತ್ತೀಚೆಗೆ ನಡೆದ ಪ್ರವೀಣ್ ಪೂಜಾರಿ ಹತ್ಯೆ ಇದಕ್ಕೆ ಉದಾಹರಣೆ. ಗೋ ಸಾಗಾಟದ ವೇಳೆ ಬಲಪಂಥೀಯ ಯುವಕರ ಗುಂಪು ಅವರ ಮೇಲೆ ಹಲ್ಲೆ ಮಾಡಿ, ಹತ್ಯೆ ನಡೆಸಿತ್ತು. ಇನ್ನು ಚಿಕ್ಕಮಗಳೂರಿನಲ್ಲಿ ಗೋ ಮಾಂಸ ಸಾಗಿಸುತ್ತಿದ್ದಾರೆ ಎಂದು ದಾಳಿ ಮಾಡಿದ ಕೆಲವರು ವಾಹನ ಮಾಲೀಕರ ಬಳಿ ಹಣ ದೋಚಿದ್ದರು ಎಂದು ಅವರು ಹೇಳಿದರು.

ಕೋಮು ಸೂಕ್ಷ್ಮ ರಾಜ್ಯಗಳು 2013ರಿಂದ 2016ರವರೆಗೆ
ರಾಜ್ಯ ಘಟನೆಗಳು ಮೃತಪಟ್ಟವರು ಗಾಯಗೊಂಡವರು
ಉತ್ತರಪ್ರದೇಶ 596 138 1338
ಮಹಾರಾಷ್ಟ್ರ 330 42 1000
ಕರ್ನಾಟಕ 291 19 865
ಮಧ್ಯಪ್ರದೇಶ 267 34 710
ಬಿಹಾರ 218 32 994
ಗುಜರಾತ್ 213 28 600
ರಾಜಸ್ತಾನ್ 205 22 503
ಪಶ್ಚಿಮ ಬಂಗಾಲ 74 14 214
ಜಾರ್ಖಂಡ್ 62 11 331
ತಮಿಳುನಾಡು 57 4 133
English summary
The central home ministry ranked Karnataka, number 3 in communally sensitive state. Uttar pradesh and Maharshtra stood at first two position and Tamilnadu at number 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X