ಹಲೋ.. ನಾನು ಸಿದ್ದರಾಮಯ್ಯ ಮಾತಾಡ್ತಾ ಇದ್ದೇನೆ!

Written By:
Subscribe to Oneindia Kannada

ಬೆಂಗಳೂರು, ಮೇ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಜನರೊಂದಿಗೆ ನೇರವಾಗಿ ಮಾತನಾಡಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಕಾಶವಾಣಿಯಲ್ಲಿ ಮುಖ್ಯಮಂತ್ರಿ ನೇರ ಫೋನ್-ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಆಕಾಶವಾಣಿಯ ಬೆಂಗಳೂರು ಕೇಂದ್ರ ಮೇ 21ರಂದು ಶನಿವಾರ ಮುಖ್ಯಮಂತ್ರಿಗಳ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ. ಸಂಜೆ 7.45ರಿಂದ 8.42ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.['ಮೋದಿ ಭಾಷಣ ಮಾಡಿದ್ರೂ ಬಿಹಾರದಲ್ಲಿ ಬಿಜೆಪಿ ಸೋತಿಲ್ಲವೇ?']

karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಲು 080-22370477, 080-22360488, 080-22370488 ಕ್ಕೆ ಕರೆ ಮಾಡಬಹುದು. ಈ ಕಾರ್ಯಕ್ರಮ ಆಕಾಶವಾಣಿಯ ಎಲ್ಲ ಕೇಂದ್ರಗಳ ಮೂಲಕ ನೇರ ಪ್ರಸಾರವಾಗಲಿದೆ.[ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!]

ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಕೋಟ್ಯಂತರ ಜನರನ್ನು ಏಕಕಾಲಕ್ಕೆ ತಲುಪುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ರಾಜ್ಯದ ಜನತೆಯನ್ನು ತಲುಪಲಿದ್ದಾರೆ.

ರಾಜ್ಯ ಸರ್ಕಾರ ಈ ಕಾರ್ಯಕ್ರಮಕ್ಕೆ "ದಿಲ್ ಕೀ ಬಾತ್" ಎಂದು ಹೆಸರಿಟ್ಟಿದೆ. ಅಲ್ಲಾ ಸ್ವಾಮಿ ಕನ್ನಡದ ಯಾವ ಶಬ್ದಗಳು ಇವರಿಗೆ ಸಿಗಲಿಲ್ಲವೇ? ನೀವೇನಂತಿರಿ....

English summary
After the 3rd year success of Karnataka state Government CM Siddaramaiah will talk in Akashavani on 21 May, 2016. The Phone-in Live event has been scheduled at 7.45 pm ti 8.42 pm .
Please Wait while comments are loading...