ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಯೋಜನೆಗೆ ಸರ್ಕಾರದ ಒಪ್ಪಿಗೆ, 3 ಸಾವಿರ ಉದ್ಯೋಗ ಸೃಷ್ಟಿ

|
Google Oneindia Kannada News

ಬೆಂಗಳೂರು, ಜೂ. 18 : ಕರ್ನಾಟಕದಲ್ಲಿ 2049.75 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡುವ 5 ಕಂಪನಿಗಳ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಸುಮಾರು 3,532 ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ 38ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, 3 ಯೋಜನೆಗಳಿಗೆ 896.47 ಕೋಟಿ ರೂ. ವೆಚ್ಚದಲ್ಲಿ ತಮ್ಮ ಕೈಗಾರಿಕೆಗಳನ್ನು ವಿಸ್ತರಿಸಲು ಸಭೆ ಅನುಮೋದನೆ ನೀಡಿದೆ.

siddaramaiah

ಎಲ್ಲೆಲ್ಲಿ ಕೈಗಾರಿಕೆ ಸ್ಥಾಪನೆ?

* ಹಾಸನದಲ್ಲಿ ಮೆ. ಹಿಮತ್‌ ಸಿಂಗ್ಕಾ ಸೀಡೆ ಸಂಸ್ಥೆ 1,325 ಕೋಟಿ ರೂ. ವೆಚ್ಚದಲ್ಲಿ ಜವಳಿ ಉದ್ಯಮ ಸ್ಥಾಪನೆ ಮಾಡಲಿದೆ. ಈ ಯೋಜನೆಯಿಂದ 2,750 ಮಂದಿಗೆ ಉದ್ಯೋಗ ದೊರೆಯಲಿದೆ. [ಚಾಮರಾಜನಗರದಲ್ಲಿ 1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ]

* ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೆ. ಸ್ಟೆಲಿಸ್‌ ಬಯೋಫಾರ್ಮ್ ಲಿಮಿಟೆಡ್‌ 248 ಕೋಟಿ ರೂ. ವೆಚ್ಚದಲ್ಲಿ ಕೆಮಿಕಲ್‌ ಫ್ಯಾಕ್ಟರಿ ಆರಂಭಿಸಲಿದೆ. 125 ಮಂದಿಗೆ ಉದ್ಯೋಗ ಸಿಗಲಿದೆ. [ತಮಿಳುನಾಡಿನ ನಷ್ಟ, ಕರ್ನಾಟಕದ ಲಾಭ, ಏನಿದು ಬಿಜಿನೆಸ್?]

* ಬೆಳಗಾವಿಯಲ್ಲಿ ಮೆ : ಹರ್ಷ ಶುಗರ್ಸ್ 213 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಿದೆ, 270 ಮಂದಿಗೆ ಉದ್ಯೋಗ ದೊರೆಯಲಿದೆ.

* ಔರಿಕ್ ಇಂಡಸ್ಟ್ರೀಸ್ ರಾಯಚೂರಿನಲ್ಲಿ 156.25 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ ಘಟಕ ಸ್ಥಾಪಿಸಲಿದೆ. 172 ಮಂದಿಗೆ ಉದ್ಯೋಗ ಸಿಗಲಿದೆ.

* ಮೆ. ಚೀರ್ಸ್ ಮೈಸೂರಿನಲ್ಲಿ 107.5 ಕೋಟಿ ರೂ. ವೆಚ್ಚದಲ್ಲಿ 215 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಕೈಗಾರಿಕೆ ಸ್ಥಾಪಿಸಲಿದೆ.

project

96 ಸಾವಿರ ಕೋಟಿ ಹೂಡಿಕೆ : 2013-14 ಮತ್ತು 2014-15ನೇ ಸಾಲಿನಲ್ಲಿ ಒಟ್ಟು 96,609.55 ಕೋಟಿ. ರೂ ಬಂಡವಾಳ ಹೂಡಿಕೆ ಮಾಡಲು 363 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ 2,27,552 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ.

English summary
State High-Level Clearance Committee (SHLCC) meeting chaired by Karnataka Chief Minister Siddaramaiah cleared five major projects investment of Rs. 2,049.75 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X