ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ

|
Google Oneindia Kannada News

ಕೊಪ್ಪಳ, ಮಾ. 16 : ರಾಜ್ಯದ ಪ್ರಮುಖ ನಗರ/ಪಟ್ಟಣಗಳಲ್ಲಿ ಕೆಎಸ್ಆರ್‌ಟಿಸಿ ವತಿಯಿಂದ ನಗರ ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜೆ ನರ್ಮ್ ಯೋಜನೆಯಡಿ ನಗರ ಸಾರಿಗೆ ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಬಸ್ ನಿಲ್ದಾಣದಲ್ಲಿ ನೂತನ ನಗರ ಸಾರಿಗೆ ಬಸ್ಸುಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ರಾಜ್ಯದ ಪ್ರಮುಖ ನಗರ/ಪಟ್ಟಣಗಳಲ್ಲಿ ನಗರ ಸಾರಿಗೆ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. 2015ರ ಜೂನ್ ವೇಳೆಗೆ ಹಾವೇರಿ, ಬಾಗಲಕೋಟೆ, ರಾಮನಗರ ಸೇರಿದಂತೆ ಒಟ್ಟು 16 ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ ಆರಂಭವಾಗಲಿದೆ ಎಂದರು.

Ramalinga Reddy

ಜೆ ನರ್ಮ್ ಯೋಜನೆಯಡಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ 10 ನಗರ/ಪಟ್ಟಣಗಳಲ್ಲಿ ನಗರ ಸಾರಿಗೆಗಾಗಿ ಒಟ್ಟು 329 ಬಸ್ಸುಗಳನ್ನು ಒದಗಿಸಲಾಗಿದೆ. ಬಳ್ಳಾರಿ, ಬೀದರ್, ವಿಜಯಪುರ, ಕಲಬುರಗಿ, ರಾಯಚೂರು, ಯಾದಗಿರಿ, ಹೊಸಪೇಟೆ, ಕೊಪ್ಪಳ, ಸಿಂಧನೂರಿನಲ್ಲಿ ನಗರ ಸಾರಿಗೆ ಆರಂಭಿಸಲಾಗುತ್ತಿದೆ ಎಂದರು. [ಬಸವೇಶ್ವರ ಬಸ್ ನಿಲ್ದಾಣ ಸ್ಥಳಾಂತರ]

ಅಂತರರಾಜ್ಯ ಸಾರಿಗೆ ಒಪ್ಪಂದ : ಕರ್ನಾಟಕದಿಂದ ನೆರೆಹೊರೆಯ ರಾಜ್ಯಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರ ಕೈಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. [487 ಟಾಟಾ ಬಸ್ ಖರೀದಿ ಮಾಡಲಿದೆ ಸಾರಿಗೆ ಇಲಾಖೆ]

city bus

ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ನೂತನ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದು, ಒಪ್ಪಂದ ಪೂರ್ಣಗೊಂಡ ಬಳಿಕ, ನರೆರಹೊರೆಯ ರಾಜ್ಯಗಳಿಗೆ ಹೆಚ್ಚಿನ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂದು ಸಚಿವರು ಹೇಳಿದರು.

English summary
Karnataka Transport minister Ramalinga Reddy said, city bus service will start in 16 cities of the state to boost public transport. Ramanagara, Ballari, Bidar, Kalaburagi and other citys will get bus service under this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X