ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2016ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

|
Google Oneindia Kannada News

ಬೆಂಗಳೂರು, ಮೇ 28 : 2016ನೇ ಸಾಲಿನ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದ 391 ಪರೀಕ್ಷಾ ಕೇಂದ್ರಗಳಲ್ಲಿ 1 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಶನಿವಾರ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಫಲಿತಾಂಶವನ್ನು ಪ್ರಕಟಿಸಿದರು. [ಸರ್ಕಾರಕ್ಕೆ ಸೀಟು ಕೊಡಲ್ಲ ಅಂದ ಖಾಸಗಿ ಕಾಲೇಜು]

tb jayachandra

ವಿದ್ಯಾರ್ಥಿಗಳು http://www.kea.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ. [ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ]

ವೈದ್ಯಕೀಯ : ದಂತವೈದ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನಂತ್‌ ಜಿ. ಪ್ರಥಮ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಂಜಯ್ ಎಂ.ಗೌಡರ್ ದ್ವಿತೀಯ, ಬೀದರ್‌ನ ಅಹ್ಮದ್ ಬಾಗ್ ಗೋಲಖಾನ್‌ ಶಹೀನ್ ಸ್ವತಂತ್ರ ಪಿಯು ಕಾಲೇಜಿನ ವಚನಶ್ರೀ ತೃತೀಯ ಸ್ಥಾನ ಗಳಿಸಿದ್ದಾರೆ.

ಇಂಜಿನಿಯರಿಂಗ್ : ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಮಿಲಿಂದ್ ಕುಮಾರ್ ವಡ್ಡಿರಾಜು ಪ್ರಥಮ, ಮಂಗಳೂರಿನ ಕೊಡಿಯಾಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿರಂಜನ್ ಕಾಮತ್ ದ್ವಿತೀಯ ಹಾಗೂ ಬೆಂಗಳೂರಿನ ರಾಜಾಜಿನಗರದ ಕೆಎಲ್‌ಇ ಸ್ವತಂತ್ರ ಪಿಯು ಕಾಲೇಜಿನ ದಿವ್ಯಾ ಎ. ಜಮಖಂಡಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಅರ್ಕಿಟೆಕ್ಚರ್‌ ವಿಭಾಗದಲ್ಲಿ ಬೆಂಗಳೂರಿನ ಸಿಎಂಆರ್ ನ್ಯಾಷನಲ್ ಸ್ಕೂಲ್‌ನ ಮೃದುಲಾ ಸಿ.ಆರ್ ಪ್ರಥಮ, ಬೆಂಗಳೂರಿನ ಅಮೃತ ಅಕಾಡೆಮಿಯ ಐಶ್ವರ್ಯ ಮಹದೇವನ್ ದ್ವಿತೀಯ, ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನ ನೇಹಾ ಸರಹ್ ಅಬ್ರಹಾಂ ಮೂರನೇ ಸ್ಥಾನ ಪಡೆದಿದ್ದಾರೆ.

ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಸಚಿವ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

'ವೈದ್ಯಕೀಯ ಕೋರ್ಸ್ ಸೇರಬಯಸುವರು ಜುಲೈನಲ್ಲಿ ನಡೆಯುವ 2ನೇ ನೀಟ್ ಪರೀಕ್ಷೆ ಬರೆಯುವುದು ಉತ್ತಮ. ಇದರಿಂದ ಸಿಇಟಿಯಲ್ಲಿ ಸೀಟು ಸಿಗದಿದ್ದರೆ ಕಾಮೆಡ್ ಕೆ ನಲ್ಲಾದರೂ ಸೀಟು ಸಿಗುತ್ತದೆ' ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.

English summary
Higher education minister T.B.Jayachandra on May 28, 216 announced Karnataka CET exam 2016 at Karnataka Examination Authority (KEA) office at Malleswaram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X