ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಅರ್ಜಿಯ ತಿದ್ದುಪಡಿಗೆ 5 ದಿನಗಳ ಕಾಲಾವಕಾಶ

|
Google Oneindia Kannada News

ಬೆಂಗಳೂರು, ಮಾ.5 : ಈ ಬಾರಿ ಸಿಇಟಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವಕಾಶ ಕಲ್ಪಿಸಿತ್ತು. ಮಾರ್ಚ್‌ 5 ಅರ್ಜಿಗಳನ್ನು ಭರ್ತಿ ಮಾಡಲು ಕೊನೆಯದಿನವಾಗಿದೆ. ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳನ್ನು ಸರಿಪಡಿಸಲು ಐದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿಇಟಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳನ್ನು ಸರಿಪಡಿಸುವುದ­ಕ್ಕಾಗಿ ಅಭ್ಯರ್ಥಿಗಳಿಗೆ ಐದು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದೆ. [ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?]

CET

ಮಾರ್ಚ್‌ 6­ರಿಂದ 10ರವರೆಗೆ ಅರ್ಜಿ ತಿದ್ದು­ಪಡಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅವಧಿ­ಯಲ್ಲಿ ಅಭ್ಯರ್ಥಿಗಳು ತಮ್ಮ ಬಳಕೆ­ದಾರರ ಖಾತೆ ಮತ್ತು ಪಾಸ್‌ವರ್ಡ್‌ ಬಳಸಿ ತುಂಬಿ­ರುವ ಅರ್ಜಿಯಲ್ಲಿರುವ ತಪ್ಪುಗಳನ್ನು ಸರಿ ಪಡಿಸಬಹುದು ಅಥವಾ ಅರ್ಜಿ ಅಪೂರ್ಣವಾಗಿದ್ದರೆ ಪೂರ್ಣ­ಗೊಳಿಸ­ಬಹುದು. [ಅರ್ಜಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]

ಆನ್‌ಲೈನ್‌ ಮೂಲಕ ಅರ್ಜಿ : 2015ರ ಸಿಇಟಿ ಪರೀಕ್ಷೆ ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸುವಾಗ ಗೊಂದಲಗಳು ಉಂಟಾದರೆ ಸಹಾಯಕವಾಗಲಿ ಎಂದು ಸಹಾಯವಾಣಿಯನ್ನು ತೆರೆಯಲಾಗಿದ್ದು 080-23460460 ದೂರವಾಣಿ ಸಂಖ್ಯೆಗೆ (ಬೆಳಗ್ಗೆ 9.30ರಿ ಸಂಜೆ 6) ಗಂಟೆಯ ತನಕ ಕರೆ ಮಾಡಬಹುದಾಗಿತ್ತು. [ಸಿಇಟಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ]

English summary
Karnataka CET-2015 : Karnataka Examinations Authority has given edit option to its candidates from March 6 to 10, 2015. During 5days period candidates can open their applications and can make any number of corrections required or add any data during submission of online application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X