ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?

ವರದಿ ಸಿದ್ದವಾಗಿದೆ ಎಂದು ಹಿಂದುಳಿದ ವರ್ಷಗಳ ರಾಜ್ಯಾಧ್ಯಕ್ಷ ಕಾಂತರಾಜ್ ಹೇಳಿದರೂ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಸರಕಾರವಿಲ್ಲ. ಕಾರಣ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡದಂತೆ ಕೆಪಿಸಿಸಿ ಸಮನ್ವಯ ಸಮಿತಿ ಮುಖ್ಯಮಂತ್ರಿಗೆ ತಾಕೀತು ಮಾಡಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 1: ಸ್ವಾತಂತ್ರ್ಯ ನಂತರದ ಪ್ರಥಮ ಜಾತಿ ಗಣತಿಗೆ ಸಿದ್ದರಾಮಯ್ಯ ಸರಕಾರ ಎಳ್ಳು ನೀರು ಬಿಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1931ರಲ್ಲಿ ಜಾತಿ ಗಣತಿ ನಡೆದಿತ್ತು. ಇದಾದ ನಂತರ ಜಾತಿ ಗಣತಿಯೇ ನಡೆದಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದಾಗಿನಿಂದ ಜಾತಿ ಗಣತಿ ಮಾಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಆಗಿರಲಿಲ್ಲ. [ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?]

Karnataka ‘Caste Census’ Report May Not Come to Public

ಮುಖ್ಯಮಂತ್ರಿಯಾದ ಬಳಿಕ ತಮ್ಮ ಮಹತ್ವಾಕಾಂಕ್ಷಿಯ ಜಾತಿ ಗಣತಿಗೆ ಸಿದ್ದರಾಮಯ್ಯ ಚಾಲನೆ ನೀಡಿದ್ದರು. 2015ರ ಏಪ್ರಿಲ್ ನಲ್ಲಿ 20 ದಿನಗಳ ಕಾಲ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆದಿತ್ತು. ಆದರೆ ಎರಡು ವರ್ಷವಾದರೂ ಇನ್ನೂ ವರದಿ ಸಲ್ಲಿಕೆಯಾಗಿಲ್ಲ.
ಇದೀಗ ವರದಿ ಸಿದ್ದವಾಗಿದೆ ಎಂದು ಹಿಂದುಳಿದ ವರ್ಷಗಳ ರಾಜ್ಯಾಧ್ಯಕ್ಷ ಕಾಂತರಾಜ್ ಹೇಳಿದರೂ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಸರಕಾರವಿಲ್ಲ. ಕಾರಣ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡದಂತೆ ಕೆಪಿಸಿಸಿ ಸಮನ್ವಯ ಸಮಿತಿ ಮುಖ್ಯಮಂತ್ರಿಗೆ ತಾಕೀತು ಮಾಡಿದೆ.
ಸದ್ಯ ಹೈಕಮಾಂಡಿಗೆ ಕಪ್ಪ ಸಲ್ಲಿಕೆ, ಆಡಳಿತ ವಿರೋಧಿ ಅಲೆಯಲ್ಲಿ ನಲುಗಿದೆ. ಜತೆಗೆ ಕಾಂಗ್ರೆಸ್ ಪಕ್ಷದ ಒಳಗೆ ಜಾತಿ ಸಮೀಕ್ಷೆಗೆ ವಿರೋಧಗಳು ವ್ಯಕ್ತವಾಗಿವೆ. ಹೀಗಾಗಿ ಮತ್ತೊಂದು ಸಾಹಸಕ್ಕೆ ಕೈ ಹಾಕುವುದು ಬೇಡ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರಂತೆ . [ಕೌರ್-ದಾವೂದ್ ಹೋಲಿಕೆ; ಪ್ರತಾಪ್ ಸಿಂಹ ವಿರುದ್ದ ಪೊಲೀಸರಿಗೆ ದೂರು]

ಸಿದ್ದರಾಮಯ್ಯಗೆ ಸಂಕಷ್ಟ

ಮೂಲಗಳ ಪ್ರಕಾರ ಜಾತಿ ಸಮೀಕ್ಷೆ ಬಿಡುಗಡೆ ಮಾಡಿ ಚುನಾವಣೆಗೆ ಹೋಗುವ ಯೋಜನೆ ಸಿದ್ದರಾಮಯ್ಯ ತಲೆಯಲ್ಲಿತ್ತು. ಜಾತಿ ಸಮೀಕ್ಷೆ ಬಿಡುಗಡೆ ಮಾಡಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಒಲವು ಗಳಿಸಿ ಹೊಸ ರಾಜಕೀಯ ಸಮೀಕರಣ ಹೊಸೆಯಬಹುದು ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರು. ಆದರೆ ಇದು ಈಗ ಸಾಧ್ಯವಾಗುತ್ತಿಲ್ಲ.

English summary
The first caste census in the country after the Independence, officially called socio-educational survey report may not come to public as Karnataka Pradesh Congress Committee orders not to release the report to chief minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X